ಶಿವಮೊಗ್ಗ, 08 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಶಿವಮೊಗ್ಗ ಜಿಲ್ಲೆಯ ಆಕಾಶವಾಣಿ ಭದ್ರಾವತಿಯಿಂದ ಸೆ.09 ರಂದು ಸಂಜೆ 6.51 ರಿಂದ 7.30ರವರೆಗೆ ‘ಹಲೋ ಆಕಾಶವಾಣಿ” ತೆಂಗಿನ ಬೆಳೆಯಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆ ಕುರಿತು ನೇರ ಫೋನ್ ಇನ್ ಕಾರ್ಯಕ್ರಮ ಪ್ರಸಾರವಾಗಲಿದೆ.
ಕಡೂರ್ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಜಯದೇವ ಅವರು ಫೋನ್ ಇನ್ ನೇರ ಪ್ರಸಾರದಲ್ಲಿ ಮಾಹಿತಿ ನೀಡುತ್ತಾರೆ. ಫೋನ್ ಮಾಡಲು ದೂರವಾಣಿ ಸಂಖ್ಯೆ: 08282-270282, 270283 (ವಾಟ್ಸಪ್ ಮೆಸೆಜ್ ಮಾಡಲು ದೂರವಾಣಿ ಸಂಖ್ಯೆ: 9481572600).
ಹಿಂದೂಸ್ತಾನ್ ಸಮಾಚಾರ್ / Rakesh Mahadevappa