ಗದಗ, 08 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕರ್ನಾಟಕ ರಾಜ್ಯ ಏಡ್ಸ್ ಪ್ರೀವೇನ್‌ಷನ್ ಸೋಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಐ.ಎಮ್.ಎ, ರೋಟರಿ ಸೆಂಟ್ರಲ್‌ಗದಗ, ಲಾಯನ್ಸ್ ಕ್ಲಬ್ ಗದಗ-ಬೆಟಗೇರಿ, ನೂರಾನಿ ಟ್ರಸ್ಟ್ಗದಗ-ಬೆಟಗೇರಿ, ಶಿಕ್ಷಣ ಇಲಾಖೆ, ಕ್ರೀಡಾ ಇಲಾಖೆ, ರಕ್ಷಣೆ ಸಂಸ್ಥೆ, ಸೃಷ್ಟಿ ಸಂಕುಲ ಸಂಸ್ಥೆ, ಚೈತನ್ಯ ಸಂಸ್ಥೆ, ನವಚೇತನ ಸಂಸ್ಥೆ, ಗದಗ ಜಿಲ್ಲೆಯ ಎನ್.ಎಸ್.ಎಸ್. ಘಟಕಗಳು ಹಾಗೂ ರೆಡ್‌ರಿಬ್ಬನ್ ಕ್ಲಬ್‌ಗಳ ಸಂಯುಕ ್ತಆಶ್ರಯದಲ್ಲಿ ಹೆಚ್.ಐ.ವಿ/ಏಡ್ಸ್ ತಡೆಗಟ್ಟಲು ತೀವ್ರತರವಾದ ಐ.ಇ.ಸಿ ಪ್ರಚಾರಾಂದೋಲನ-2025ರ ಅಂಗವಾಗಿ ರೆಡ್‌ರಿಬ್ಬನ್ ರನ್‌ಕಾಲೇಜು ವಿದ್ಯಾರ್ಥಿಗಳಿಗಾಗಿ 5 ಕಿ.ಮೀ. ಮ್ಯಾರಾಥಾನ ಸ್ಪರ್ಧೆಯನ್ನುದಿನಾಂಕ: 10-09-2025ರಂದು ಏರ್ಪಡಿಸಲಾಗಿದೆ. ಸದರಿ ಸ್ಪರ್ಧೆಗೆಎನ್.ಎಸ್.ಎಸ್. ರೆಡ್‌ರಿಬ್ಬನ್‌ಕಾಲೇಜಿನಿಂದ 5 ಜನ ವಿದ್ಯಾರ್ಥಿಗಳು ಹುಡುಗರು ಮತ್ತು 5 ಜನ ವಿದ್ಯಾರ್ಥಿನಿಯರನ್ನು ಹುಡುಗಿಯರು ಸ್ಪರ್ಧೆಗೆ ನಿಯೋಜನೆ ಮಾಡಲು ಕೋರಲಾಗಿದೆ.
ಸ್ಪರ್ಧಾ ವಿಜೇತರಿಗೆ ಪ್ರಥಮ ಬಹುಮಾನ 5000=00 ರೂ, ಕಾಲೇಜು ವಿಧ್ಯಾರ್ಥಿಗಳಿಗೆ ಹುಡುಗರಿಗೆ ಮತ್ತು 5000=00ರೂ, ವಿದ್ಯಾರ್ಥಿನಿಯರಿಗೆ ಹುಡುಗಿಯರಿಗೆ, ದ್ವೀತಿಯ ಬಹುಮಾನವಾಗಿಕಾಲೇಜು ಹುಡುಗರಿಗೆ 3500=00ರೂ, ಹುಡುಗಿಯರಿಗೆ 3500=00ರೂ, ಹಾಗೂ ತೃತೀಯ ಬಹುಮಾನವಾಗಿ ಹುಡುಗರಿಗೆ 2500=00ರೂ, ಹಾಗೂ ಹುಡುಗಿಯರಿಗೆ 2500=00ರೂ, ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದುಎಂದುಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾಏಡ್ಸ್ ನಿಯಂತ್ರಣಾಧಿಕಾರಿಗಳು ಪ್ರಕಟಣೆ ಕೃಪೆಗಾಗಿ ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP