ವಿಜಯಪುರ, 08 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದಲ್ಲಿ ನಡೆದ ಈದ್ ಮಿಲಾದ್ ಹಬ್ಬದಲ್ಲಿ 15 ಮಿನಿಟ್ ಕೆ ಲಿಯೆ ಪೊಲೀಸಕೋ ಹಠಾಲೋ ಎಂಬ ಸಾಂಗ್ ಹಾಕಿದಕ್ಕೆ ಮೂವರು ವಿರುದ್ಧ ಪ್ರಕರಣ ದಾಖಲಾಗಿದೆ.
ಡಿಜೆ ವೆಹಿಕಲ್ ಓನರ್ A1, ಡಿಜೆ ಆಫರೇಟರ್ A2, ಎಂಟಿ ತೌಸಿಫ್15s ಇನ್ಸ್ಟಾಗ್ರಾಮ್ ಐಡಿ ವಿರುದ್ಧ ಪೊಲೀಸ ಅಧಿಕಾರಿ ಜಿ ಕೆ ದೇವಕರ್ ಪ್ರಕರಣ ದಾಖಲು ಮಾಡಿದ್ದಾರೆ.
ದೇವಕರ್ ಗಾಂಧಿ ಚೌಕ್ ಪೊಲೀಸ ಠಾಣೆಯಲ್ಲಿ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತಾರೆ. ಸೆಪ್ಟೆಂಬರ್ 5ರಂದು ಈದ್ ಮಿಲಾದ ಹಬ್ಬದಲ್ಲಿ ಸಂಜೆ ಆರು ಗಂಟೆಗೆ 15 ಮಿನಿಟ್ ಕೆ ಲಿಯೆ ಪೊಲೀಸಕೋ ಹಠಾಲೋ ಬತಾತೆ ಯೇ ಕಿಸ್ಮೆ ದಮ್ ಹೈ ಹಿಂದೂಸ್ತಾನ ಬನಾ ದೇಕಿಯೇ ಅಂತಾ ಡಿಜೆ ಹಾಕಿದ್ದಾರೆ.
ಈ ಕುರಿತು ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande