ಕೊಪ್ಪಳ, 08 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲಿ ಪುಷ್ಪ ನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.
ಕೊಪ್ಪಳ ತಹಶಿಲ್ದಾರ ವೀಠ್ಠಲ್ ಚೌಗಲಾ ಅವರುಶ್ರೀ ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ಇಲಾಖೆಯ ಚೋಳಪ್ಪ ಹಾಗೂ ಆರ್ಯ ಈಡಿಗ ಸಮಾಜದ ಮುಖಂಡರಾದ ವೀರಣ್ಣ ಹುಲಿಗಿ, ರವಿ ಗಿಣಿಗೇರಿ, ಅನಿಲ್ ಹುಲಿಗಿ, ಹನುಮಂತಪ್ಪ ಬಂಡಿ, ಹನುಮಂತಪ್ಪ ಭೀಮನೂರ್, ರಾಜಣ್ಣ, ಆನಂದ್ ಬಾಬು, ರಾಘವೇಂದ್ರ ಕೊಪ್ಪಳ, ರಮೇಶ, ವೆಂಕಟೇಶ್ ಗಂಗಾವತಿ, ಬಸವರಾಜ್ ಚಿಲವಾಡಗಿ, ಸುಕ್ರಾಜ್ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಿಬ್ಬಂದಿ ಶಂಕರ್ ಮಹಮನಿ ಹಾಗೂ ಮುತ್ತಣ್ಣ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್