ಬಳ್ಳಾರಿ : ಜೋಗ್ ಫಾಲ್ಸ್, ಗೋಕಾಕ್ ಫಾಲ್ಸ್ ಗೆ ವಿಶೇಷ ಸಾರಿಗೆ ಬಸ್
ಬಳ್ಳಾರಿ, 08 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿಯಿಂದ ಜೋಗ್ ಫಾಲ್ಸ್ ಮತ್ತು ಗೋಕಾಕ್ ಫಾಲ್ಸ್ ಪ್ರವಾಸಿ ತಾಣಗಳಿಗೆ ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ವಾರಾಂತ್ಯದ ದಿನಗಳಲ್ಲಿ ವಿಶೇಷ ವೇಗದೂತ ಸಾರಿಗೆ ಸೌಲಭ್ಯವನ್ನು ಬಳ್ಳಾರಿ ವಿಭಾಗದಿಂದ ಕಲ್ಪಿಸಲಾಗಿದೆ. *ಬಳ್ಳಾರಿ-ಜೋಗ್ ಫಾಲ್ಸ್:*
ಬಳ್ಳಾರಿ : ಜೋಗ್ ಫಾಲ್ಸ್, ಗೋಕಾಕ್ ಫಾಲ್ಸ್ ಗೆ ವಿಶೇಷ ಸಾರಿಗೆ ಬಸ್


ಬಳ್ಳಾರಿ, 08 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿಯಿಂದ ಜೋಗ್ ಫಾಲ್ಸ್ ಮತ್ತು ಗೋಕಾಕ್ ಫಾಲ್ಸ್ ಪ್ರವಾಸಿ ತಾಣಗಳಿಗೆ ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ವಾರಾಂತ್ಯದ ದಿನಗಳಲ್ಲಿ ವಿಶೇಷ ವೇಗದೂತ ಸಾರಿಗೆ ಸೌಲಭ್ಯವನ್ನು ಬಳ್ಳಾರಿ ವಿಭಾಗದಿಂದ ಕಲ್ಪಿಸಲಾಗಿದೆ.

*ಬಳ್ಳಾರಿ-ಜೋಗ್ ಫಾಲ್ಸ್:*

ಬಳ್ಳಾರಿಯಿಂದ ಬೆಳಿಗ್ಗೆ 06 ಗಂಟೆಗೆ ಹೊರಟು, ಮಧ್ಯಾಹ್ನ 02 ಗಂಟೆಗೆ ಜೋಗ್ ಫಾಲ್ಸ್ ಗೆ ತಲುಪಲಿದೆ (ವಯಾ ಬಳ್ಳಾರಿ-ಚಳ್ಳಕೆರೆ- ಚಿತ್ರದುರ್ಗ- ಚನ್ನಗಿರಿ- ಶಿವಮೊಗ್ಗ- ಸಾಗರ-ಜೋಗ್ ಫಾಲ್ಸ್). ಜೋಗ್ ಫಾಲ್ಸ್ ನಿಂದ ರಾತ್ರಿ 08 ಗಂಟೆಗೆ ಅಲ್ಲಿಂದ ಹೊರಟು ಮರುದಿನ ಬೆಳಿಗ್ಗೆ 04 ಗಂಟೆಗೆ ಬಳ್ಳಾರಿಗೆ ತಲುಪಲಿದೆ. ಪ್ರಯಾಣ ದರ- ರೂ.570.

ಈ ಸಾರಿಗೆಯು ಸೆ.13 ರಿಂದ ಪ್ರತಿ ಶನಿವಾರ ಮತ್ತು ಪ್ರತಿ ರವಿವಾರ ಕಾರ್ಯಾಚರಣೆ ಮಾಡಲಾಗುವುದು.

*ಬಳ್ಳಾರಿ-ಗೋಕಾಕ್ ಫಾಲ್ಸ್:*

ಬಳ್ಳಾರಿಯಿಂದ ಬೆಳಿಗ್ಗೆ 06 ಗಂಟೆಗೆ ಹೊರಟು, ಮಧ್ಯಾಹ್ನ 01.15 ಕ್ಕೆ ಗೋಕಾಕ್ ಫಾಲ್ಸ್ ಗೆ ತಲುಪಲಿದೆ (ವಯಾ ಹೊಸಪೇಟೆ-ಕೊಪ್ಪಳ- ಗದಗ- ನವಲಗುಂದ- ನರಗುಂದ- ಹುಲಿಕಟ್ಟಿ- ಮನೊಳ್ಳಿ- ಯರಗಟ್ಟಿ- ಮಮದಾಪುರ). ಗೋಕಾಕ್ ಫಾಲ್ಸ್ ನಿಂದ ರಾತ್ರಿ 08 ಗಂಟೆಗೆ ಅಲ್ಲಿಂದ ಹೊರಟು ಮರುದಿನ ಬೆಳಿಗ್ಗೆ 04 ಗಂಟೆಗೆ ಬಳ್ಳಾರಿಗೆ ತಲುಪಲಿದೆ. ಪ್ರಯಾಣ ದರ- ರೂ.515.

ಈ ಸಾರಿಗೆಗೆ www.ksrtc.in ಗೆ ಲಾಗ್-ಇನ್ ಆಗುವ ಮೂಲಕ ಆನ್ ಲೈನ್ ಮುಖಾಂತರ ಮುಂಗಡ ಆಸನಗಳನ್ನು ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.7760992163, 7760992164 ಮತ್ತು 7760992167 ಗೆ ಸಂಪರ್ಕಿಸಬಹುದು.

ಈ ವಿಶೇಷ ಸಾರಿಗೆ ಸೌಲಭ್ಯವನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande