ರಾಯಚೂರು, 08 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆಯಿಂದ 2019-20, 2022-23ನೇ ಹಾಗೂ 2023-24, 2024-25ನೇ ಸಾಲಿನ ಎಸ್.ಎಫ್.ಸಿ ನಿಧಿ & ನಗರಸಭೆ ನಿಧಿಯ ಶೇ.29ರ ಪರಿಷ್ಕೃತ ಕ್ರಿಯಾ ಯೋಜನೆಯಡಿ ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಕಲ್ಯಾಣ ಕಾರ್ಯಕ್ರಮಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
2019-20, 2023-24ನೇ ಸಾಲಿನ ಶೇ.29 ರ ಎಸ್.ಎಫ್.ಸಿ ಮುಕ್ತ ನಿಧಿ ಪರಿಷ್ಕೃತ ಕ್ರಿಯಾ ಯೋಜನೆಯಡಿ ಎಸ್.ಸಿ.ಎಸ್.ಪಿ ರಡಿ ಶೇ.40 ವೈಯಕ್ತಿಕ ಸೌಲಭ್ಯಗಳಿಗಾಗಿ ಕಾರ್ಯಕ್ರಮದಡಿ ವೈಯಕ್ತಿಕ ಹರಿಯುವ ನೀರು ಶೌಚಾಲಯ ಹೊಂದಿರದ ಪರಿಶಿಷ್ಟ ಜಾತಿ ಕುಟುಂಬಗಳಿಗೆ ಸೇರಿದ ಪ್ರತಿ ಕುಟುಂಬಕ್ಕೆ ಸ್ವಂತ ಸೆಪ್ಟಿಕ್ ಟ್ಯಾಂಕ್ ಶೌಚಾಲಯ ನಿರ್ಮಾಣಕ್ಕೆ ಗರಿಷ್ಟ 15,000 ರೂ.ಗಳಿಗೆ ಮಿತಿಗೊಳಿಸಲಾಗಿದೆ. ಮತ್ತು ಯುಜಿಡಿ ಸಂಪರ್ಕ ಹೊಂದುವ ಶೌಚಾಲಯ ನಿರ್ಮಾಣಕ್ಕೆ ಗರಿಷ್ಟ 10,000 ರೂ.ಗಳಿಗೆ ನಿಗದಿಪಡಿಸಲಾಗಿದೆ.
ದಾಖಲಾತಿಗಳು: ಸೌಲಭ್ಯಕ್ಕಾಗಿ ನಿಗಧಿತ ನಮೂನೆಯಲ್ಲಿ ಅರ್ಜಿ, ದೃಢೀಕೃತ ಜಾತಿ ಮತ್ತು ಅದಾಯ ಪ್ರಮಾಣ ಪತ್ರ, ದೃಢೀಕೃತ ವಾಸಸ್ಥಳಕ್ಕೆ ಗುರುತಿನ ಚೀಟಿ/ರೇಷನ್ ಕಾರ್ಡ, ಪಾಸ್ ಪೋಟೋ ಅಳತೆಯ ಭಾವ ಚಿತ್ರ-2, ಬ್ಯಾಂಕ್ ಪಾಸ್ ಪುಸ್ತಕ್ ಹಾಗು ಐ.ಎಫ್.ಎಸ್.ಸಿ ಕೋಡ್‌ನೊಂದಿಗೆ ಬ್ಯಾಂಕ್ ವಿವರ, ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಜಾಗದ ಛಾಯಾಚಿತ್ರ ಹಾಗೂ ಮೋಬೈಲ್ ನಂಬರ್‌ನೊಂದಿಗೆ ಸೆಪ್ಟೆಂಬರ್ 22ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಸರಿಯಾದ ದಾಖಲಾತಿಗಳು ಸಲ್ಲಿಸದೇ ಇದ್ದ ಪಕ್ಷದಲ್ಲಿ ತಮಗೆ ಯಾವುದೇ ಹಿಂಬರಹ ಕಳುಹಿಸದೇ ನೇರವಾಗಿ ವಿಭಾಗದ ಸಿಬ್ಬಂದಿಯವರು ತಿರಸ್ಕೃತ ಮಾಡಲಾಗುವುದು ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಾಪಾತ್ರ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್