ವಿಧಾನ ಪರಿಷತ್‌ಗೆ ನಾಲ್ವರ ನಾಮನಿರ್ದೇಶನ
ಬೆಂಗಳೂರು, 07 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಹಲವು ತಿಂಗಳಿಂದ ಖಾಲಿ ಇದ್ದ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ರಾಜ್ಯ ಸರ್ಕಾರ ಭಾನುವಾರ ನಾಮನಿರ್ದೇಶನ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ರಾಜ್ಯಪಾಲರು ಸರ್ಕಾರ ಶಿಫಾರಸು ಮಾಡಿದ ನಾಲ್ಕು ಹೆಸರುಗಳಿಗೆ ಅಂಕಿತ ಹಾಕಿದ್ದಾರೆ. ನಾಮನಿರ್ದೇಶನಗೊಂಡವರು
Nomination


ಬೆಂಗಳೂರು, 07 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಹಲವು ತಿಂಗಳಿಂದ ಖಾಲಿ ಇದ್ದ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ರಾಜ್ಯ ಸರ್ಕಾರ ಭಾನುವಾರ ನಾಮನಿರ್ದೇಶನ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ರಾಜ್ಯಪಾಲರು ಸರ್ಕಾರ ಶಿಫಾರಸು ಮಾಡಿದ ನಾಲ್ಕು ಹೆಸರುಗಳಿಗೆ ಅಂಕಿತ ಹಾಕಿದ್ದಾರೆ.

ನಾಮನಿರ್ದೇಶನಗೊಂಡವರು ಪಿಸಿಸಿ ಸಂವಹನ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಹಿರಿಯ ಪತ್ರಕರ್ತ ಕೆ. ಶಿವಕುಮಾರ್ ಹಾಗೂ ದಲಿತ ಮುಖಂಡ ಎಫ್. ಹೆಚ್. ಜಕ್ಕಪ್ಪನವರ್. ಇವರಲ್ಲಿ ಮೂವರು 6 ವರ್ಷಗಳ ಅವಧಿಗೆ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು, ರಮೇಶ್ ಬಾಬು ಅವರ ಅವಧಿ ಮಾತ್ರ 2026ರ ಜುಲೈ 21ರವರೆಗೆ ಮಾತ್ರ ಸೀಮಿತವಾಗಿದೆ.

ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್ ಹಾಗೂ ಪ್ರಕಾಶ್ ಕೆ. ರಾಥೋಡ್ ಅವರ ಅವಧಿ 2024ರ ಅಕ್ಟೋಬರ್‌ನಲ್ಲಿ ಮುಕ್ತಾಯಗೊಂಡಿತ್ತು. ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಅವರ ಅವಧಿ 2025ರ ಜನವರಿಯಲ್ಲಿ ಕೊನೆಗೊಂಡಿತ್ತು. ಉಪ ಚುನಾವಣೆಗೆ ಸ್ಪರ್ಧಿಸಲು ಸಿ.ಪಿ. ಯೋಗೇಶ್ವರ್ ರಾಜೀನಾಮೆ ನೀಡಿದ್ದರಿಂದ ಮತ್ತೊಂದು ಸ್ಥಾನ ಖಾಲಿಯಾಗಿತ್ತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande