ರಾಯಚೂರು ಜಿಲ್ಲಾಡಳಿತದಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ
ರಾಯಚೂರು, 07 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೆಪ್ಟೆಂಬರ್ 07ರಂದು ರಾಯಚೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ ಕಾರ್ಯಕ್ರಮಗಳು ನಡೆದವು. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂ
ರಾಯಚೂರು: ಜಿಲ್ಲಾಡಳಿತದಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ


ರಾಯಚೂರು: ಜಿಲ್ಲಾಡಳಿತದಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ


ರಾಯಚೂರು: ಜಿಲ್ಲಾಡಳಿತದಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ


ರಾಯಚೂರು, 07 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೆಪ್ಟೆಂಬರ್ 07ರಂದು ರಾಯಚೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ ಕಾರ್ಯಕ್ರಮಗಳು ನಡೆದವು.

ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು, ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ. ಎಸ್ ಶಿವರಾಜ ಪಾಟೀಲ್, ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯರಾದ ಎ ವಸಂತಕುಮಾರ, ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ ಅವರು, ಬ್ರಹ್ಮಶ್ರೀ ನಾರಾಯಣ ಗುರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತ್ಯುತ್ಸವದ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಯು ನಗರದ ಎಚ್‌ಎಸ್‌ಅರ್ ಬಡಾವಣೆಯ ಮೂಲಕ ಜೈಲ್ ರಸ್ತೆ, ತಹಶಿಲ್ದಾರ್ ಕಚೇರಿ, ಬಸ್ ನಿಲ್ದಾಣದ ಮುಂಭಾಗದಿ0ದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಸಾರ್ವಜನಿಕ ಉದ್ಯಾನವನದ ಮಾರ್ಗವಾಗಿ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮ0ದಿರದವರೆಗೆ ಸಾಗಿತು.

ಮಹಾನಗರ ಪಾಲಿಕೆಯ ಉಪಾಧ್ಯಕ್ಷ ಸಾಜಿದ್ ಸಮೀರ್, ತಹಸೀಲ್ದಾರ ಸುರೇಶ ವರ್ಮ, ಮುಖಂಡರಾದ ಕೆ ಶಾಂತಪ್ಪ ಕಡಗೊಲ್, ರವಿ ಬೋಸರಾಜ್, ಸಮಾಜದ ಮುಖಂಡರಾದ ನರಸಿಂಹ ಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿ ಡಾ.ದಂಡಪ್ಪ ಬಿರಾದಾರ, ಮಹಾನಗರ ಪಾಲಿಕೆಯ ವ್ಯವಸ್ಥಾಪಕ ರಾಜು, ಆರ್ಯ ಈಡಿಗ ಸಮಾಜದ ಮುಖಂಡರಾದ ಬಸವರಾಜ್ ಗೌಡ, ರಾಜನ ಗೌಡ, ಅಶೋಕ್ ಗುತ್ತೇದಾರ್, ಈರಪ್ಪ ಗೌಡ, ಅನಂತರಾಜು ಗೌಡ, ತಾಯನ ಗೌಡ, ಖಾಜನ ಗೌಡ, ರಂಗಲಿAಗನ ಗೌಡ, ಪರಶುರಾಮ್ ಹಾಗೂ ಸಮುದಾಯದ ಹಿರಿಯರು, ಮಹಿಳೆಯರು, ಯುವಕರು ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಮೆರವಣಿಗೆಯ ಕಳೆ ಹೆಚ್ಚಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿನೋದ್ ಮತ್ತು ಇಸ್ಮಾಯಿಲ್ ಅವರು ಕಲಾ ತಂಡಗಳ ನಿರ್ವಹಣೆ ಮಾಡಿದರು.

ಬಳಿಕ ರಂಗಮ0ದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ ಅವರು ವೇದಿಕೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಉಡುಪಿಯ ನಿವೃತ್ತ ಉಪನ್ಯಾಸಕ ದಯಾನಂದ.ಡಿ ಅವರು ವಿಶೇಷ ಉಪನ್ಯಾಸ ನೀಡಿ, ಕೇರಳದ ಬಸವಣ್ಣ ಎಂದೇ ಪ್ರಖ್ಯಾತಿ ಹೊಂದಿದ್ದ ನಾರಾಯಣ ಗುರುಗಳು ತಮ್ಮ ಇಡೀ ಜೀವನವನ್ನು ಸಮಾಜ ಸುಧಾರಣೆಗಾಗಿ ಮುಡುಪಾಗಿಟ್ಟಿದ್ದರು. ಕೆಳಜಾತಿಯವರ ಮೇಲೆ ಆಗುತ್ತಿದ್ದ ದೌರ್ಜನ್ಯ, ಹೆಣ್ಣು ಮಕ್ಕಳ ಮೇಲೆ ವಿಧಿಸಿದ್ದ ನಿಬಂಧನೆಗಳನ್ನು ಅಹಿಂಸಾತ್ಮಕವಾಗಿ ವಿರೋಧಿಸಿ ಮಾನವಕುಲ ಒಂದೇ ಎಂಬ ಸಿದ್ಧಾಂತವನ್ನು ಸಮಾಜದಲ್ಲಿ ಸಾರಿದ್ದರು ಎಂದು ತಿಳಿಸಿದರು.

ಅವರವರ ಕೆಲಸ ಕಾರ್ಯಗಳಿಂದ ಜಾತಿ ಸೃಷ್ಟಿಯಾಗಿವೇ ಹೊರತು ಅದಕ್ಕೆ ಯಾವುದೇ ಮೂಲಾಧಾರಗಳಿಲ್ಲ. ಮೇಲಜಾತಿಯವರಿಂದ ಕೆಳಜಾತಿಯವರು ಸಾಕಷ್ಟು ದೂರ ಇರುವ ಸ್ಥಿತಿ ಕೇರಳ ರಾಜ್ಯದಲ್ಲಿ ಸಹ ಇತ್ತು. ಮೇಲ್ಜಾತಿಯ ಜನರು ಓಡಾಡುವ ರಸ್ತೆಯಲ್ಲಿ ಕೆಳಜಾತಿಯವರು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ದೇವಸ್ಥಾನ, ಕೆರೆ, ಕಾಲುವೆಗಳಲ್ಲಿ ಕೆಳ ಜಾತಿಯ ಜನರಿಗೆ ಅವಕಾಶ ಇರಲಿಲ್ಲ. ಅಲ್ಲಿರುವ ಜಾತಿ ವ್ಯವಸ್ಥೆಯನ್ನು ನೋಡಿ ಆ ಕಾಲದ ಸಮಾಜ ಸುಧಾರಕರು ಬೇಸರ ವ್ಯಕ್ತಪಡಿಸುತ್ತಿದ್ದರು. ಆ ಅವ್ಯವಸ್ಥೆಯನ್ನು ಸರಿಪಡಿಸಲು ಜನ್ಮ ತಾಳಿದವರೇ ನಾರಾಯಣ ಗುರುಗಳಾಗಿದ್ದಾರೆ. ಮೂಢನಂಬಿಕೆ, ಜಾತಿ ಪದ್ಧತಿಯನ್ನು ನಾರಾಯಣ ಗುರುಗಳು ಖಂಡಿಸಿದ್ದರು ಎಂದು ತಿಳಿಸಿದರು.

ಸಮಾರಂಭದಲ್ಲಿ ರಾಯಚೂರು ತಹಸೀಲ್ದಾರ್ ಸುರೇಶ್ ವರ್ಮಾ, ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿಯ ತಹಸೀಲ್ದಾರ್ ಪರಶುರಾಮ, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ.ಶಾಂತಪ್ಪ, ಮುಖಂಡರಾದ ಎನ್. ಶಂಕ್ರಪ್ಪ, ಹರವಿ ನಾಗನಗೌಡ, ಆಂಜನೇಯ ಕಡಗೋಲ್, ನಾಗಿರಡ್ಡಿ, ಶ್ರೀನಿವಾಸ ರೆಡ್ಡಿ, ಶ್ರೀಕಾಂತ್ ವಕೀಲ್, ಶ್ರೀನಿವಾಸ್, ಬಸವರಾಜ ಪಾಟೀಲ್, ಎಂ.ವಿರುಪಾಕ್ಷಿ, ಖಾಜನಗೌಡ, ಚನ್ನಪ ನಾಗೋಲಿ, ಪರಶುರಾಮ, ನರಸನಗೌಡ, ಲಚ್ಚನಗೌಡ, ರಾಚನಗೌಡ, ಅಶೋಕಗೌಡ, ಈರಪ್ಪಗೌಡ, ಹನುಮಂತಪ್ಪಗೌಡ, ರಂಗಲಿ0ಗನಗೌಡ, ತಾಯನಗೌಡ, ಬಸವರಾಜಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande