ಶ್ರೀನಗರ, 06 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಮ್ಮು–ಕಾಶ್ಮೀರದಲ್ಲಿ ಭೂಕುಸಿತ ಮತ್ತು ಭಾರಿ ಮಳೆಯಿಂದ ಉಂಟಾದ ಹಾನಿಯ ನಂತರ, ಕಿಶ್ತ್ವಾರ್ ಮತ್ತು ಉಧಂಪುರ ಜಿಲ್ಲೆಗಳಲ್ಲಿ ಮುಚ್ಚಿದ ರಸ್ತೆ ಸಂಪರ್ಕವನ್ನು ಪುನಃಸ್ಥಾಪಿಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಈ ಎಕ್ಸನಲ್ಲಿ ಮಾಹಿತಿ ನೀಡಿರುವ ಡಾ. ಸಿಂಗ್ , ರಾಷ್ಟ್ರೀಯ ಹೆದ್ದಾರಿ 244 ರಲ್ಲಿ ಥಾಥ್ರಿಯಿಂದ ಕಿಶ್ತ್ವಾರ್ ವರೆಗೆ ಭೂಕುಸಿತ ಪ್ರದೇಶವನ್ನು ಬೈಪಾಸ್ ಮಾಡಿ ತೆರೆಯಲಾಗಿದೆ. ಕಿಶ್ತ್ವಾರ್-ಚತ್ರು-ಸಿಂಥನ್ ಟಾಪ್ ರಸ್ತೆಯಲ್ಲಿಯೂ ಭಾರೀ ಬಂಡೆಗಳನ್ನು ತೆಗೆದುಹಾಕಲು ಶುಕ್ರವಾರ ಬ್ಲಾಸ್ಟಿಂಗ್ ಕಾರ್ಯ ನಡೆಯಿತು. ಇಂದು ಈ ರಸ್ತೆ ತೆರೆಯಲು ನಿರೀಕ್ಷಿಸಲಾಗಿದೆ. ಉಧಂಪುರ ಜಿಲ್ಲೆಯಲ್ಲಿ ಹಾನಿಗೊಳಗಾದ 400ಕ್ಕೂ ಹೆಚ್ಚು ರಸ್ತೆಗಳನ್ನು ಈಗಾಗಲೇ ಪುನಃಸ್ಥಾಪಿಸಲಾಗಿದೆ. ಪ್ರತಿಕೂಲ ಹವಾಮಾನದ ನಡುವೆಯೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ ಮತ್ತು ಒಂದು ಅಥವಾ ಎರಡು ದಿನಗಳಲ್ಲಿ ಸುಗಮ ಸಂಚಾರಕ್ಕೆ ರಸ್ತೆಗಳನ್ನು ಮುಕ್ತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಗೋರ್ಡಿ, ಲಟ್ಟಿ, ದುಡು ಮತ್ತು ಬಸಂತ್‌ಗಢದಂತಹ ಬಾಹ್ಯ ಪ್ರದೇಶಗಳಲ್ಲಿ ಸಂಚಾರ ಸಂಪರ್ಕವನ್ನು ಪುನಃಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ. ರಾಮನಗರ, ಮೌಂಗರಿ, ಲಟ್ಟಿ ಮತ್ತು ಬಸಂತ್‌ಗಢದ ಕೆಲವು ಭಾಗಗಳಲ್ಲಿ ನೀರು ಸರಬರಾಜು ಇನ್ನೂ ವ್ಯತ್ಯಯಗೊಂಡಿದ್ದರೂ, ಟ್ಯಾಂಕರ್‌ಗಳ ಮೂಲಕ ಪರ್ಯಾಯ ಪೂರೈಕೆಯನ್ನು ನೀಡಲಾಗುತ್ತಿದೆ ಎಂದು ಡಾ. ಸಿಂಗ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa