ನವದೆಹಲಿ, 06 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಉತ್ತರ ಭಾರತದ ಹಲವು ರಾಜ್ಯಗಳು, ವಿಶೇಷವಾಗಿ ದೆಹಲಿ, ಪಂಜಾಬ್, ಹರಿಯಾಣ, ಪ್ರವಾಹದಿಂದ ಬಾಧಿತರಾಗಿವೆ.
ಪ್ರವಾಹದಿಂದ ಪಂಜಾಬ್ ಅತ್ಯಂತ ಹೆಚ್ಚು ಹಾನಿಗೊಳಗಾಗಿದೆ. ಹತಿನಿಕುಂಡ್ ಮತ್ತು ವಜೀರಾಬಾದ್ ಬ್ಯಾರೇಜ್‌ಗಳಿಂದ ನಿರಂತರವಾಗಿ ನೀರು ಬಿಡುಗಡೆ ಮಾಡಲಾಗುತ್ತಿದೆ. ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇ, ಮಯೂರ್ ವಿಹಾರ್, ಕಾಶ್ಮೀರಿ ಗೇಟ್ ಸೇರಿದಂತೆ ನದಿ ತಗ್ಗು ಪ್ರದೇಶಗಳಲ್ಲಿ ತಾತ್ಕಾಲಿಕ ವಸತಿ ಶಿಬಿರಗಳು ಸ್ಥಾಪಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.
ಸೇನೆಯ ಸಹಾಯದಿಂದ ಉತ್ತರ ಭಾರತದಲ್ಲಿ ಸತತವಾಗಿ ಜನರ ಸುರಕ್ಷತೆ ಮತ್ತು ನಿವಾರಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ ಹಾಗೂ ಪಂಜಾಬ್‌ನ ಕೆಲವು ಭಾಗಗಳು ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಸೇರಿವೆ.
ಭಾರಿ ಮಳೆಯಾಗಿರುವ ರಾಜ್ಯಗಳಲ್ಲಿ ನದಿಗಳ ಹರಿವು ಅಪಾಯದ ಮಟ್ಟವನ್ನು ತಲುಪಿದ್ದು, ಅಧಿಕಾರಿಗಳು ಜಾಗೃತಿಯಿಂದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa