ಭಗವಂತ್ ಮಾನ್ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು
ಚಂಡೀಗಡ, 06 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಆದರೆ ಅವರು ಇನ್ನೂ ಮೊಹಾಲಿಯ ಫೋರ್ಟಿಸ್ ಹೃದಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲೆಕ್ಟ್ರೋಲೈಟ್ ಅಸಮತೋಲನದಿಂದಾಗಿ ಅವರ ನಾಡಿಮಿಡಿತ 44ಕ್ಕೆ ಇಳಿದ ಕಾರಣ, ಶುಕ್ರವಾರ ರಾತ್ರಿ
ಭಗವಂತ್ ಮಾನ್ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು


ಚಂಡೀಗಡ, 06 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಆದರೆ ಅವರು ಇನ್ನೂ ಮೊಹಾಲಿಯ ಫೋರ್ಟಿಸ್ ಹೃದಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎಲೆಕ್ಟ್ರೋಲೈಟ್ ಅಸಮತೋಲನದಿಂದಾಗಿ ಅವರ ನಾಡಿಮಿಡಿತ 44ಕ್ಕೆ ಇಳಿದ ಕಾರಣ, ಶುಕ್ರವಾರ ರಾತ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಮತ್ತು ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಚೀಮಾ ಅವರು ಶನಿವಾರ ಮಾನ್ ಅವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದರು.

ವೈದ್ಯರು ಇನ್ನೂ ಸಂಪೂರ್ಣ ಗುಣಮುಖರಾಗಿದ್ದಾರೆಂದು ಘೋಷಿಸಿಲ್ಲ. ನಿಯಮಿತ ಪರೀಕ್ಷೆ ಮುಂದುವರಿದಿದ್ದು, ಮುಂದಿನ ಒಂದು-ಎರಡು ದಿನಗಳಲ್ಲಿ ಅವರು ಜನಸೇವೆಗೆ ಹಿಂತಿರುಗುವ ನಿರೀಕ್ಷೆಯಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande