ವಿಜಯಪುರ, 05 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಇತ್ತೀಚೆಗೆ ಸುರಿದ ಮಳೆಯಿಂದ
ಡೋಣಿ ನದಿ ಪ್ರವಾಹದಿಂದ
ಉಂಟಾದ ಬೆಳೆ ಹಾನಿ ಪರಿಹಾರವನ್ನು ಪಾವತಿಸಲು ಬಬಲೇಶ್ವರ ತಾಲೂಕಿನ
ಬೆಳೆ ಹಾನಿಯಾದ ರೈತರ ಪಟ್ಟಿಯನ್ನು ಸಂಬಂಧಿಸಿದ ಗ್ರಾಮ ಪಂಚಾಯತಿಯ ಕಾರ್ಯಾಲಯದಲ್ಲಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ.
ಪ್ರಕಟಿತ ಪಟ್ಟಿಗೆ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಬಬಲೇಶ್ವರದ ಕೃಷಿ ಅಧಿಕಾರಿ ಮಲ್ಲಿಕಾರ್ಜುನ್ ಪೂಜಾರಿ ಮೊ:7259856890,ಬಬಲೇಶ್ವರದ ತೋಟಗಾರಿಕಾ ಅಧಿಕಾರಿ ಸುರೇಶ ಚವ್ಹಾಣ ಮೊ:9845729261 ಹಾಗೂ ಕಂದಾಯ ನಿರೀಕ್ಷಕರಾದ ವಿನಯ ಕುಲಕರ್ಣಿ ಮೊ: 7411794305 ಇವರಿಗೆ ದಿನಾಂಕ:10-09-2025ರೊಳಗಾಗಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಬಬಲೇಶ್ವರ ತಹಶಿಲ್ದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande