ವಿಜಯಪುರ, 05 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನ ಆಚರಿಸಲಾಯಿತು.
ಇಂದು ಶುಕ್ರವಾರ ಡೀಮ್ಡ್ ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಶಿಕ್ಷಕರು ಸಮಾಜದ ನಿಜವಾದ ದಾರಿದೀಪ. ಅವರ ಮಾರ್ಗದರ್ಶನವಿಲ್ಲದೆ ಉತ್ತಮ ವಿದ್ಯಾರ್ಥಿಗಳನ್ನು ತಯಾರಿಸುವುದು ಅಸಾಧ್ಯ. ಶಿಕ್ಷಕರು ಕೇವಲ ಪಾಠ ಕಲಿಸುವವರಲ್ಲ. ಅವರು ಮೌಲ್ಯಗಳನ್ನು ಬೆಳೆಸುತ್ತ ವಿದ್ಯಾರ್ಥಿಗಳ ಜೀವನವನ್ನು ರೂಪಿಸುತ್ತಾರೆ. ಬಿ.ಎಲ್.ಡಿ.ಇ ವಿವಿ ಶ್ರೇಷ್ಠ ಶಿಕ್ಷಣ, ಗುಣಮಟ್ಟದ ಸಂಶೋಧನೆ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವ ದಿಸೆಯಲ್ಲಿ ಸದಾ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಂಗಾಮಿ ಕುಲಪತಿ ಡಾ. ಅರುಣ ಇನಾಮದಾರ, ಕುಲಸಚಿವ ಡಾ. ಆರ್. ವಿ. ಕುಲಕರ್ಣಿ, ಅಲೈಡ್ ಹೆಲ್ತ ಸೈನ್ಸ ಡೀನ್ ಡಾ. ಎಸ್. ವಿ. ಪಾಟೀಲ, ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ. ಆನಂದ ಪಿ. ಅಂಬಲಿ, ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ವೈದ್ಯಕೀಯ ಅಧೀಕ್ಷಕ, ಡಾ. ಆರ್. ಎಂ. ಹೊನ್ನುಟಗಿ, ಪ್ಯಾಥಲಾಜಿ ವಿಭಾಗದ ಮುಖ್ಯಸ್ಥೆ ಡಾ. ಸುರೇಖಾ ಹಿಪ್ಪರಗಿ, ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥ, ಡಾ. ಶ್ರೀನಿವಾಸ ರಾಯ್ಕರ, ಉಪಕುಲಸಚಿವ ಸತೀಶ ಪಾಟೀಲ, ಸಹಾಯಕ ಕುಲಸಚಿವ, ಡಾ. ಶ್ರೀಧರ ಬಗಲಿ, ಹಣಕಾಸು ಅಧಿಕಾರಿ ಬಿ. ಎಸ್. ಪಾಟೀಲ, ಸಹಾಯಕ ಕಾನೂನು ಅಧಿಕಾರಿ, ಐ. ಬಿ. ಮಠಪತಿ ಹಾಗೂ ವಿವಿ ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande