ಈರುಳ್ಳಿ : ಪ್ರಸ್ತುತ ಹವಾಮಾನದಲ್ಲಿ ರೋಗ ಮತ್ತು ಕೀಟಗಳ ನಿರ್ವಹಣೆ
ಗದಗ, 04 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯನ್ನು ಮಳೆಯಾಶ್ರಿತ ಮತ್ತು ನೀರಾವರಿ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಪ್ರಸ್ತುತ ಹವಾಮಾನದಲ್ಲಿ ಮೋಡಕವಿದ ವಾತಾವರಣ ಮತ್ತು ಮಳೆ ಆಗುತ್ತಿರುವುದರಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗುತ್ತಿದ್ದು, ಹೊಲಗಳಲ್ಲಿ
ಪೋಟೋ


ಗದಗ, 04 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯನ್ನು ಮಳೆಯಾಶ್ರಿತ ಮತ್ತು ನೀರಾವರಿ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಪ್ರಸ್ತುತ ಹವಾಮಾನದಲ್ಲಿ ಮೋಡಕವಿದ ವಾತಾವರಣ ಮತ್ತು ಮಳೆ ಆಗುತ್ತಿರುವುದರಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗುತ್ತಿದ್ದು, ಹೊಲಗಳಲ್ಲಿ ಅಲ್ಲಲ್ಲಿ ನೀರು ನಿಲ್ಲುತ್ತಿದ್ದು, ಇದರಿಂದ ಕೀಟ ಮತ್ತು ರೋಗದ ಬಾಧೆ ಉಲ್ಬಣವಾಗಿರುತ್ತದೆ.

ಪ್ರಸ್ತುತ ಹವಾಮಾನದಲ್ಲಿ ಈರುಳ್ಳಿ ಬೆಳೆಗೆ ಪ್ರಮುಖವಾಗಿ ತಿರುಗುಣಿ ರೋಗ, ಬೂಜೂತುಪ್ಪಟ ರೋಗ (ಡೌನಿ ರೋಗ), ನೇರಳೆ ಮಚ್ಚೆ ರೋಗ ಹಾಗೂ ಗಡ್ಡೆಕೊಳೆ ರೋಗ (ಶಿಲೀಂದ್ರ ಮತ್ತು ಬ್ಯಾಕ್ಟಿರಿಯಾ) ಭಾದಿಸುತ್ತಿರುವ ಸಾಧ್ಯತೆಗಳು ಹೆಚ್ಚಿರುವುದರಿಂದ ಈ ರೋಗಗಳ ಸಮಗ್ರ ನಿರ್ವಹಣೆಗಾಗಿ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು.

ಅಧಿಕ ಸಸಿಗಳ ಸಾಂದ್ರತೆ ಇರುವ ಜಾಗದಲ್ಲಿ ಹೆಚ್ಚುವರಿ ಸಸಿಗಳನ್ನು ತೆಗೆಯುವುದು. ನೀರು ನಿಲ್ಲುವ ಜಾಗದಲ್ಲಿ ಬಸಿದು ಹೋಗುವಂತೆ ಕ್ರಮ ಕೈಗೊಳ್ಳುವುದು. ಗಡ್ಡೆ ಕೊಳೆಯುವ ರೋಗ ಕಂಡುಬಂದಲ್ಲಿ 100 ಕೆ.ಜಿ. ಕೊಟ್ಟಿಗೆ ಗೊಬ್ಬರದ (ತಿಪ್ಪೆ ಗೊಬ್ಬರ) ಜೊತೆಗೆ ಉತ್ತಮ ಗುಣಮಟ್ಟದ ಜೈವಿಕ ಪೀಡೆನಾಶಕಗಳಾದ.+ಸೊಡೊಮೊನಾಸ್- 3ಕೆ.ಜಿ.ಮಿಶ್ರಣಮಾಡಿ ಮೇಲು ಗೊಬ್ಬರವಾಗಿ ಪ್ರತಿ ಎಕರೆಗೆ ಹಾಕುವುದು. ಸುರುಳಿ ರೋಗ /ತಿರುಗುಣಿ ರೋಗ ಬಾಧೆ ಕಂಡುಬಂದಲ್ಲಿ ಅಜಾಕ್ಸಿಸ್ಕೋಬಿನ್+ಟೆಬುಕೊನೊಜೋಲ್ 1 ಮಿ.ಲೀ ಪ್ರತಿ ಲೀಟರ್ ನೀರಿಗೆ ಅಥವಾ ಟೆಬುಕೊನಾಜೋಲ್ + ಟೈಫ್ಲಾಕ್ಸಿಸ್ಕೋಬಿನ್ 0.5 ಗ್ರಾಂ ಪ್ರತಿ ಲೀಟರ್ ನೀರಿಗೆ ಅಥವಾ ಕ್ಯಾಪ್ಟಾನ್ + ಹೆಕ್ಸಾಕೊನಾಜೊಲ್-2 ಗ್ರಾಂ ಪ್ರತಿ ಲೀಟರ್ ನೀರಿಗೆ ಈ ಮೇಲಿನ ಯಾವುದಾದರನ್ನು ಶಿಲೀಂದ್ರನಾಶಕದ ಜೊತೆಗೆ ಬೊರಾನ್ ಮಿಶ್ರಿತ ಲಘು ಪೋಷಕಾಂಶಗಳನ್ನು 1 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ 10 ದಿನಗಳ ಅಂತರದಲ್ಲಿ 2 ಬಾರಿ ಸಿಂಪಡಿಸುವದು.

ಗೊಣ್ಣೆ ಹುಳವಿನ ನಿರ್ವಹಣೆ :

ಬೆಳೆ ಇರುವ ಪ್ರದೇಶದಲ್ಲಿ 10% ಯನ್ನು 5 ಕೆ.ಜಿ. ಪ್ರತಿ ಎಕರೆಗೆ ಮಣ್ಣಿನಲ್ಲಿ ಚೆಲ್ಲಬೇಕು ಅಥವಾ ಗೊಣ್ಣೆ ಹುಳು ಬಾಧಿತ ತೋಟಗಳಲ್ಲಿ ಬೆಳೆಗಳಿಗೆ ಮೆಟರೈಜಿಯಂ ಅನಿಸೂಪಿಯಾ ಎಂಬ ಜೈವಿಕ ಕೀಟನಾಶಕ ಶೀಲಿಂದ್ರವನ್ನು 8-10 ಕಿ.ಗ್ರಾಂ ಪ್ರತಿ ಕ್ವಿಂಟಲ್ ಕೊಟ್ಟಿಗೆ ಗೊಬ್ಬರದೊಂದಿಗೆ ಸೇರಿಸಿ ಒಂದು ಎಕರೆ ಪ್ರದೇಶಕ್ಕೆ ಉಪಯೋಗಿಸುವುದರಿಂದ ಇದರ ಬಾಧೆಯನ್ನು ಹತೋಟಿ ಮಾಡಬಹುದು.

ಹಸಿರು ಹುಳವಿನ ನಿರ್ವಹಣೆ :

ಕೀಡೆ ನಿಯಂತ್ರಣಕ್ಕಾಗಿ ಪ್ಯೂಬೆಂಡಿಮೈಡ್ 39.35ಎಸ್.ಸಿ-0.3 ಮಿ.ಲೀ. ಅಥವಾ ಕ್ಲೋರಾಂಡ್ರಿನಿಲಿಪ್ರೋಲ್-18.5 ಎಸ್.ಸಿ-0.3 ಮಿ.ಲೀ. ಅಥವಾ ಇಮಾಮಕ್ಟಿನ್ ಬೆಂಜೋಯೆಟ್ 5ಎಸ್.ಜಿ-0.3 ಗ್ರಾಂ. ಅಥವಾ ಸ್ಪೋನೋಸಾಡ್ 45ಎಸ್.ಸಿ-0.3 ಮಿ.ಲೀ. ಅಥವಾ ಕ್ಲೋರ್ಪೆರಿಫಾಸ್ 50ಇ.ಸಿ + ಸೈಪರ್ ಮೆತ್ರಿನ್ 5ಇ.ಸಿ-1 ಮಿ.ಲೀ/ಪ್ರತೀ ಲೀಟರ್ ನೀರಿಗೆ ಸೇರಿಸಿ ಸಿಂಪಡಿಸುವದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತಾಲೂಕು ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande