ಕೋಲಾರ, 0೪ ಸೆಪ್ಟೆಂಬರ್(ಹಿ.ಸ.) :
ಆ್ಯಂಕರ್ : ಕೋಲಾರ ಸಂಸದ ಬಗ್ಗೆ ನನಗೆ ಗೌರವವಿದೆ ನನ್ನಂತೆ ಅವರು ಸಹ ಚುನಾಯಿತ ಪ್ರತಿನಿಧಿಯಾಗಿದ್ದಾರೆ ಆದರೆ ಯಾವ ವಿಚಾರದಲ್ಲಿ ನಾನು ಸ್ಪಂಧಿಸಿಲ್ಲ ಎಂಬುದನ್ನು ಸ್ಪಷ್ಠಪಡಿಸಬೇಕು ಸುಖಸುಮ್ಮನೆ ಅಭಿವೃದ್ದಿ ವಿಚಾರದಲ್ಲಿ ಸ್ಪಂದಿಸಿಲ್ಲ ಎಂದು ಹೇಳುವುದು ಉಚಿತವಲ್ಲ ನನ್ನ ಕ್ಷೇತ್ರದ ಅಭಿವೃದ್ದಿಯೇ ನನಗೆ ಮುಖ್ಯವೆಂದು ಶಾಸಕಿ ರೂಪಕಲಾಶಶಿದರ್ ಹೇಳಿದರು.
ಕೆಜಿಎಫ್ ನಗರಸಭೆ ವ್ಯಾಪ್ತಿಯ ವಾರ್ಡ್ ೯ರ ಆರ್.ಅಂಡ್ ಡಿ ಬಡವಾಣೆಯಲ್ಲಿ ನಗರೋತ್ತನ ಯೋಜನೆಯಡಿ ಬಿಡುಗಡೆಗೊಂಡಿರುವ ೨೦ ಲಕ್ಷ ವೆಚ್ಚದಲ್ಲಿ ನಿರ್ಮೀಸಲು ಉದ್ದೇಶಿಸಿರುವ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರೆವೆರೆಸಿ ಸುದ್ದಿಗಾರರೊಂದಿಗೆ ಮಾತನಾಡಿದದರು.
ಸಂಸದರು ಉರಿಗಾಂ ರೈಲ್ವೆ ಗೇಟ್ ಬಳಿ ಮೇಲ್ಸುತುವೆ ನಿರ್ಮಾಣ ವಿಚಾರವಾಗಿ ಮಾತನಾಡುತ್ತಾರೆ ಆದರೆ ಉಳಿದ ಅಂಡರ್ಪಾಸ್ ಕಾಮಗಾರಿಗಳ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನೆ ಮಾಡಿ ಸಂಸದರು ಉರಿಗಾಂ ಮೇಲ್ಸುತುವೆ ನಿರ್ಮಾಣ ವಿಚಾರವಾಗಿ ಅಧಿಕಾರಿಗಳು ಸಹ ನನ್ನ ಗಮನಕ್ಕೆ ತಂದಿಲ್ಲ ಅಧಿಕಾರಿಗಳು ನನ್ನ ಗಮನಕ್ಕೆ ತಂದರೆ ಖಂಡಿತವಾಗಿಯು ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ನಗರೋತ್ತನ ೪ ನೇ ಯೋಜನೆಯಡಿಯಲ್ಲಿ ೧೯ ಕೋಟಿ ಅನುದಾನ ಬಿಡುಗಡೆಗೊಂಡಿತ್ತು ನಗರೋತ್ತನ ೪ ನೇ ಯೋಜನೆಯ ಅನುದಾನ ಹಾಗೂ ಕಾಮಗಾರಿ ಪೂರ್ಣಗೊಂಡರೆ ಮಾತ್ರ ನಗರೋತ್ತನ ೫ ನೇ ಯೋಜನೆ ಜಾರಿಗೆ ಡಿಪಿಆರ್ ಮಾಡಲು ಮತ್ತು ಸರ್ಕಾರದ ಮುಂದೆ ಪ್ರಸ್ಥಾವನೆ ಸಲ್ಲಿಸಲು ಸಾಧ್ಯ ಆದ್ದರಿಂದ ಗುತ್ತಿಗೆದಾರರ ಮೇಲೆ ಒತ್ತಡ ತಂದು ಕಾಮಗಾರಿಗೆ ಚಾಲನೆ ನೀಡಲಾಗಿದೆ ಆದರೆ ನಗರೋತ್ತನ ೪ ನೇ ಯೋಜನೆಯಲ್ಲಿ ನಡೆದಿರುವ ಕಾಮಗಾರಿಯು ಶೇಕಡ ೩೦ ರಷ್ಟು ಮಾತ್ರ ಪ್ರಗತಿ ಕಾಣಲಾಗಿದೆ ಆದ್ದರಿಂದ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಲು ಆದೇಶ ನೀಡಲಾಗಿದೆ ಹಾಗೂ ಚೆಲ್ಲಪ್ಪ ಲೈನ್ ನ ಆರ್ ಅಂಡ್ ಡಿ ಬಡಾವಣೆಯಲ್ಲಿ ಹಲವು ವರ್ಷಗಳಿಂದ ರಸ್ತೆ ನಿರ್ಮಿಸುವಂತೆ ಭೇಡಿಕೆಯನ್ನು ಈ ಭಾಗದ ನಗರಸಭೆ ಸದಸ್ಯೆ ಶಾಂತಿ ಅನ್ಬು ಹಾಗೂ ನಾಗರೀಕರು ಮುಂದಿಟ್ಟಿದ್ದರು ಈ ಹಿನ್ನಲೆಯಲ್ಲಿ ಸಿಸಿ ರಸ್ತೆಯನ್ನು ೨೦ ಲಕ್ಷ ವೆಚ್ಚೆದಲ್ಲಿ ನಿರ್ಮೀಸಲು ಚಾಲನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಇಂಧಿರಾ ಗಾಂಧಿದಯಶಂಕರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್ಮುನಿಸ್ವಾಮಿ ಮಾಜಿ ಕೆಡಿಎ ಅಧ್ಯಕ್ಷ ಜಯಪಾಲ್, ನಗರಸಭೆ ಸದಸ್ಯ ವೇಣುಗೋಪಾಲ್ ಹಾಜರಿದ್ದರು.
ಚಿತ್ರ : ಕೆಜಿಎಫ್ ನಗರಸಭೆ ವ್ಯಾಪ್ತಿಯ ವಾರ್ಡ್ ೯ರ ಆರ್.ಅಂಡ್ ಡಿ ಬಡವಾಣೆಯಲ್ಲಿ ನಗರೋತ್ತನ ಯೋಜನೆಯಡಿ ಬಿಡುಗಡೆಗೊಂಡಿರುವ ೨೦ ಲಕ್ಷ ವೆಚ್ಚದಲ್ಲಿ ನಿರ್ಮೀಸಲು ಉದ್ದೇಶಿಸಿರುವ ಸಿಸಿ ರಸ್ತೆ ಕಾಮಗಾರಿಗೆ ಶಾಸಕಿ ರೂಪಕಲಾ ಶಶಿಧರ್ ಭೂಮಿ ಪೂಜೆ ನೆರವೇರಿಸದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್