ಲಿಸ್ಬನ್, 04 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪೋರ್ಚುಗಲ್ ರಾಜಧಾನಿ ಲಿಸ್ಬನ್‌ನಲ್ಲಿ ನಡೆದ ಭೀಕರ ಟ್ರಾಮ್ ಅಪಘಾತದಲ್ಲಿ 15 ಮಂದಿ ಸಾವನ್ನಪ್ಪಿ, 18 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ವಿದೇಶಿ ಪ್ರಜೆಗಳು ಮತ್ತು ಒಂದು ಮಗು ಸೇರಿವೆ.
ನಿನ್ನೆ ಸಂಜೆ ಪ್ರವಾಸಿಗರಲ್ಲಿ ಜನಪ್ರಿಯವಾಗಿರುವ ಟ್ರಾಮ್ ಕೇಬಲ್ ಬಿಚ್ಚಿಕೊಂಡು ನಿಯಂತ್ರಣ ತಪ್ಪಿ ಕಟ್ಟಡಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿತು. ತುರ್ತು ಸೇವೆಗಳು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿವೆ.
ಪೋರ್ಚುಗಲ್ ಅಧ್ಯಕ್ಷ ಮಾರ್ಸೆಲೊ ರೆಬೆಲೊ ಡಿ ಸೌಸಾ ಮತ್ತು ಯುರೋಪಿಯನ್ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವಾನ್ ಬಲಿಪಶುಗಳಿಗೆ ಸಂತಾಪ ಸೂಚಿಸಿದ್ದಾರೆ.
ಲಿಸ್ಬನ್ ಮೇಯರ್ ಮೂರು ದಿನಗಳ ಶೋಕಾಚರಣೆ ಘೋಷಿಸಿದ್ದಾರೆ. ಸರ್ಕಾರ ಅಪಘಾತದ ತನಿಖೆಗೆ ಆದೇಶಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa