ತುಮಕೂರು, 04 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮಾಜಿ ಸಚಿವ ಕೆ.ಎನ್. ರಾಜಣ್ಣ ಸತತ 6ನೇ ಬಾರಿ ತುಮಕೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅವರ ಆಪ್ತ ಜಿ.ಜೆ. ರಾಜಣ್ಣ ಆಯ್ಕೆಯಾದರು.
ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ರಾಜಣ್ಣ, ರೈತರ ಬದುಕನ್ನು ಹಸನಗೊಳಿಸುವುದೇ ನಮ್ಮ ಉದ್ದೇಶ. ದೇಶದ ಜಿಡಿಪಿಗೆ ಹಳ್ಳಿಗಳ ರೈತರ ಕೊಡುಗೆ ಅಪಾರ. ಅವರಿಗೆ ಅನುಕೂಲವಾಗುವಂತೆ ಬ್ಯಾಂಕಿನ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ನಬಾರ್ಡ್‌ನಿಂದ ಅಫೆಕ್ಸ್ ಬ್ಯಾಂಕ್‌ಗೆ ಬರಬೇಕಾಗಿದ್ದ ₹5,500 ಕೋಟಿಗಳಲ್ಲಿ ಈ ಬಾರಿ ಕೇವಲ ₹2,340 ಕೋಟಿ ಮಾತ್ರ ಬಂದಿರುವುದರಿಂದ ಜಿಲ್ಲಾ ಬ್ಯಾಂಕುಗಳಿಗೆ ನಷ್ಟ ಉಂಟಾಗಲಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸದ್ಯ ಸಾಲಮನ್ನಾ ಒತ್ತಾಯ ಮಾಡುವುದಿಲ್ಲ. ಆದರೆ ಕುಮಾರಸ್ವಾಮಿ ಕಾಲದಲ್ಲಿ ಮನ್ನಾ ಆಗಿದ್ದ ರೈತರ ₹258 ಕೋಟಿ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತೇನೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa