ಶಿವಮೊಗ್ಗ, 04 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮರಾಠ ಲೈಟ್ ಇನ್‌ಫೆಂಟ್ರಿಯಲ್ಲಿನ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಹಾಗೂ ವೀರನಾರಿಯರ ಕುಂದು-ಕೊರತೆಗಳನ್ನು ಪರಿಹರಿಸಲು ಅ. 19 ರಂದು ಶಿವಾಜಿ ಕ್ರೀಡಾಂಗಣ, ಬೆಳಗಾವಿಯಲ್ಲಿ ಶಿಬಿರವನ್ನು ಹಮ್ಮಿಕೊಂಡಿದ್ದು, ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಹಾಗೂ ವೀರನಾರಿಯರು ತಮ್ಮ ಕುಂದುಕೊರತೆ, ದೂರುಗಳನ್ನು ವಾಟ್ಸಪ್ ನಂ- 8317350584, ಇಮೇಲ್ -greatgorillaa nic.in ಹಾಗೂ ಸ್ಥಿರ ದೂರವಾಣಿ- 0831-2402821 ಮೂಲಕ ಮುಂಗಡವಾಗಿ ನೋಂದಾಯಿಸಿಕೊಳ್ಳಲು ಕೋರಿರುತ್ತಾರೆ.
ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಹಾಗೂ ವೀರನಾರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದರಿ ಶಿಬಿರದ ಪ್ರಯೋಜನೆಗಳನ್ನು ಪಡೆದುಕೊಳ್ಳಬೇಕೆಂದು ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa