ಜಿಎಸ್‌ಟಿ ಸುಧಾರಣೆಗಳಿಂದ ಷೇರು ಮಾರುಕಟ್ಟೆಯಲ್ಲಿ ಉತ್ಸಾಹ
ನವದೆಹಲಿ, 04 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಜಿಎಸ್‌ಟಿ ದರಗಳಲ್ಲಿ ಮಾಡಿದ ಇಳಿಕೆಯಿಂದಾಗಿ ಇಂದು ದೇಶೀಯ ಷೇರು ಮಾರುಕಟ್ಟೆಯಲ್ಲಿ ಉತ್ಸಾಹದ ವಾತಾವರಣ ಉಂಟಾಗಿದೆ. ಬೆಳಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 390 ಅಂಕಗಳ ಏರಿಕೆಯೊಂದಿಗೆ 80,957 ಕ್ಕೆ ಹಾಗೂ ನಿಫ್ಟಿ 120 ಅಂಕಗಳ ಏರಿಕೆಯೊಂದಿಗೆ 24,835 ಕ್ಕ
Stock market


ನವದೆಹಲಿ, 04 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜಿಎಸ್‌ಟಿ ದರಗಳಲ್ಲಿ ಮಾಡಿದ ಇಳಿಕೆಯಿಂದಾಗಿ ಇಂದು ದೇಶೀಯ ಷೇರು ಮಾರುಕಟ್ಟೆಯಲ್ಲಿ ಉತ್ಸಾಹದ ವಾತಾವರಣ ಉಂಟಾಗಿದೆ.

ಬೆಳಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 390 ಅಂಕಗಳ ಏರಿಕೆಯೊಂದಿಗೆ 80,957 ಕ್ಕೆ ಹಾಗೂ ನಿಫ್ಟಿ 120 ಅಂಕಗಳ ಏರಿಕೆಯೊಂದಿಗೆ 24,835 ಕ್ಕೆ ತಲುಪಿದೆ.

ಬಜಾಜ್ ಫೈನಾನ್ಸ್, ಟಾಟಾ ಮೋಟಾರ್ಸ್, ಹಿಂದೂಸ್ತಾನ್ ಯೂನಿಲಿವರ್ ಮುಂತಾದ ಪ್ರಮುಖ ಷೇರುಗಳು ಲಾಭದ ವಲಯದಲ್ಲಿ ಸಾಗುತ್ತಿದ್ದರೆ, ಒಎನ್‌ಜಿಸಿ, ಕೋಲ್ ಇಂಡಿಯಾ, ರಿಲಯನ್ಸ್ ಇಂಡಸ್ಟ್ರೀಸ್ ಸೇರಿದಂತೆ ಕೆಲ ಷೇರುಗಳು ಒತ್ತಡದಲ್ಲಿವೆ. ಒಟ್ಟಾರೆ ಮಾರುಕಟ್ಟೆಯಲ್ಲಿ ಹಸಿರು ವಲಯದ ವಹಿವಾಟು ಮೇಲುಗೈ ಸಾಧಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande