ನವದೆಹಲಿ, 04 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಿಎಸ್‌ಟಿ ಕೌನ್ಸಿಲ್ ಜನಸಾಮಾನ್ಯರಿಗೆ ದೊಡ್ಡ ಪರಿಹಾರ ನೀಡಿದೆ. ಈಗ ವೈಯಕ್ತಿಕ ಜೀವ ವಿಮೆ ಮತ್ತು ಆರೋಗ್ಯ ವಿಮಾ ಪಾಲಿಸಿಗಳ ಪ್ರೀಮಿಯಂಗಳು ಜಿಎಸ್‌ಟಿ ವಿನಾಯಿತಿ ಪಡೆಯುತ್ತವೆ. ಈ ಬದಲಾವಣೆಗಳು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿವೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜಿಎಸ್‌ಟಿ ಮಂಡಳಿಯ 56ನೇ ಸಭೆಯ ಬಳಿಕ ಈ ಘೋಷಣೆ ಮಾಡಿದ್ದು, “ಇನ್ನು ಮುಂದೆ ಟರ್ಮ್ ಲೈಫ್, ಯುಲಿಪ್, ಎಂಡೋಮೆಂಟ್ ಪಾಲಿಸಿಗಳು ಸೇರಿದಂತೆ ಎಲ್ಲಾ ವೈಯಕ್ತಿಕ ಜೀವ ವಿಮೆ ಹಾಗೂ ಆರೋಗ್ಯ ವಿಮಾ ಪಾಲಿಸಿಗಳು ಮತ್ತು ಅವುಗಳ ಮರುವಿಮೆ ಜಿಎಸ್‌ಟಿ ಶೂನ್ಯ ದರದ ಅಡಿಯಲ್ಲಿ ಬರುತ್ತವೆ” ಎಂದು ಹೇಳಿದರು.
ಈಗಾಗಲೇ 18% ಜಿಎಸ್‌ಟಿ ವಿಧಿಸಲಾಗುತ್ತಿದ್ದರೂ, ಮುಂದೆ ಸಂಪೂರ್ಣ ವಿನಾಯಿತಿ ದೊರೆಯಲಿದೆ. ಫ್ಯಾಮಿಲಿ ಫ್ಲೋಟರ್, ಹಿರಿಯ ನಾಗರಿಕ ಯೋಜನೆಗಳು ಸಹ ಇದರಲ್ಲಿ ಸೇರಿವೆ. ವಿಮಾ ಪ್ರೀಮಿಯಂ ಕಡಿಮೆಯಾಗುವುದರಿಂದ ಜನರಿಗೆ ಹೆಚ್ಚು ಕೈಗೆಟುಕುವ ದರದಲ್ಲಿ ವಿಮಾ ಸೌಲಭ್ಯ ಲಭ್ಯವಾಗಲಿದೆ. ದೇಶದಾದ್ಯಂತ ವಿಮಾ ವ್ಯಾಪ್ತಿ ವಿಸ್ತಾರವಾಗಲು ಸಹಾಯವಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa