ಕೋಲಾರ, 0೪ಸೆಪ್ಟೆಂಬರ್(ಹಿ.ಸ.) :
ಆ್ಯಂಕರ್ : ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸುವ ಮೂಲಕ ಬಲಿಷ್ಟ ಭಾರತಕ್ಕೆ ಕೊಡುಗೆ ನೀಡಿ ಎಂದು ಜೆಡಿಎಸ್ ಮುಖಂಡ ಹಾಗೂ ಸಮಾಜಸೇವಕ ಸಿಎಂಆರ್.ಶ್ರೀನಾಥ್ ಕರೆ ನೀಡಿದರು.
ಸೇವಾದಳದಿಂದ ಕೊಡಮಾಡುವ ೨೦೨೪-೨೫ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರನ್ನು ತಮ್ಮನಿವಾಸದಲ್ಲಿ ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಇಂದು ಶಿಕ್ಷಣ ವ್ಯವಸ್ಥೆಯ ಸುಧಾರಣೆ ಅಗತ್ಯವಿದೆ, ಆಧುನಿಕತೆಗೆ ತಕ್ಕಂತೆ ಶಾಲೆಗಳಲ್ಲಿ ಸುಸಜ್ಜಿತ ಸೌಲಭ್ಯಗಳನ್ನು ಒದಗಿಸುವ ಅಗತ್ಯವಿದೆ ಎಂದ ಅವರು, ಸರ್ಕಾರಗಳು ಸಹಾ ಖಾಸಗಿ ಪೈಪೋಟಿಗೆ ಅನುಗುಣವಾಗಿ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ನೆರವಾಗಲು ಮನವಿ ಮಾಡಿದರು.
ಸರ್ಕಾರಿ ಶಾಲೆಗಳಲ್ಲಿ ಸಾವಿರಾರು ಶಿಕ್ಷಕರ ಹುದ್ದೆ ಖಾಲಿ ಇದೆ, ಶಿಕ್ಷಣ ಸಚಿವರು, ಪ್ರತಿನಿತ್ಯ ಹುದ್ದೆ ತುಂಬುವ ಹೇಳಿಕೆ ನೀಡುತ್ತಿಲೇ ಇದ್ದಾರೆ, ಅದರೆ ಈವರೆಗೂ ಒಂದೇ ಒಂದು ನೇಮಕಾಗಿ ಅಧಿಸೂಚನೆ ಹೊರಬರಲಿಲ್ಲ ಎಂದರು.
ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು ಇಂದು ಅಗತ್ಯವಿದೆ, ಸರ್ಕಾರ ಶಾಲೆಗಳಲ್ಲಿ ನರ್ಸರಿ ತರಗತಿ ಆರಂಭಿಸಬೇಕು, ಇಂಗ್ಲೀಷ್ ಮಾಧ್ಯಮ ಶಿಕ್ಷಣ ನೀಡಬೇಕು, ಖಾಸಗಿ ಪೈಪೋಟಿ ಸಮರ್ಥವಾಗಿ ಎದುರಿಸಲು ಸಜ್ಜುಗೊಳಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಕೆಜಿಎಫ್ ತಾಲ್ಲೂಕಿನ ಪಾರಂಡಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಹೆಚ್.ಕೆ.ರಾಜಶ್ರೀ, ಬಂಗಾರಪೇಟೆ ತಾಲ್ಲೂಕು ಹುಲಿಬೆಲೆ ಶಾಲೆ ಮುಖ್ಯಶಿಕ್ಷಕ ಸಂಜೀವಪ್ಪ, ಮಾಲೂರು ತಾಲ್ಲೂಕಿನ ಚವರಮಂಗಲ ಶಾಲೆ ಮುಖ್ಯ ಶಿಕ್ಷಕ ತಿಮ್ಮರಾಯಪ್ಪ, ಕೋಲಾರ ತಾಲೂಕಿನ ಹುತ್ತೂರು ಸರ್ಕಾರಿ ಶಾಲೆ ಶಿಕ್ಷಕ ಎಲ್.ಶ್ರೀನಿವಾಸ್, ಮುಳಬಾಗಿಲು ತಾಲ್ಲೂಕು ಮುಡಿಯನೂರು ಶಾಲೆ ಶಿಕ್ಷಕ ಎನ್.ಸುರೇಶ್ಅವರನ್ನು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸೇವಾದಳ ಜಿಲ್ಲಾ ಕಾರ್ಯದರ್ಶಿ ರೋಟರಿ ಅಧ್ಯಕ್ಷ ಸುಧಾಕರ್, ಬಡ್ತಿ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್, ಕೋಲಾರ ತಾಲ್ಲೂಕು ಅಧ್ಯಕ್ಷ ಸಿ.ವಿ.ನಾಗರಾಜ್, ಖಜಾಂಚಿ ಜಗನ್ನಾಥ್, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಶಿವಣ್ಣ, ಮುಖ್ಯಶಿಕ್ಷಕ ಗೋವಿಂದಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಲ್.ಶ್ರೀನಿವಾಸ್, ಮುಖ್ಯಶಿಕ್ಷಕರದ ಸುಬ್ರಮಣಿ, ಸುರೇಶ್, ಜಯಲಕ್ಷ್ಮಿ, ತುಳಸೀರಾಮ್, ಕೆಜಿಎಫ್ ಅಧ್ಯಕ್ಷ ಶ್ರೀನಿವಾಸ್, ಕೋಲಾರ ಜಿಲ್ಲಾ ಉಪಾಧ್ಯಕ್ಷ ಮುನಿನಾರಾಯಣಪ್ಪ, ರೋಟರಿ ಸಂಸ್ಥೆಯ ಕೆ.ಶ್ರೀನಿವಾಸ್ ಮತ್ತಿತರರಿದ್ದರು.
ಚಿತ್ರ : ಸೇವಾದಳದಿಂದ ಕೊಡಮಾಡುವ ೨೦೨೪-೨೫ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರನ್ನು ಸಮಾಜಸೇವಕ ಸಿಎಂಆರ್.ಶ್ರೀನಾಥ್ ಕೋಲಾರದಲ್ಲಿ ಸನ್ಮಾನಿಸಿದರು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್