ಬೆಂಗಳೂರು, 04 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಧಾರವಾಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೌಶಲ್ಯ ತರಬೇತಿ ಕೇಂದ್ರಗಳಿಗೆ ಕುರಿತಂತೆ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಇಂದು ಸಮಾಲೋಚನಾ ಸಭೆ ನಡೆಸಿದರು.
ವಿಕಾಸ ಸೌಧದಲ್ಲಿ ವಿದ್ಯುತ್ ಮತ್ತು ಆಟೋಮೇಶನ್ ವಲಯದ ತಜ್ಞರೊಂದಿಗೆ ಸಭೆ ನಡೆಸಿದರು. ಪ್ರತಿನಿಧಿಗಳು ಮತ್ತು ಕನ್ಸೋರ್ಟಿಯಂ ಪ್ರಮುಖರು ಈ ವೇಳೆ ಹಾಜರಿದ್ದರು.
ಈ ಸಭೆಯಲ್ಲಿ ಸಂಸದರಾದ ಈ. ತುಕಾರಾಂ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯದರ್ಶಿಗಳಾದ ಭಾರತಿ ಡಿ, ಜಂಟಿ ಕಾರ್ಮಿಕ ಆಯುಕ್ತರು, ಕನ್ಸಲ್ಟೆಂಟ್ ಮುಖ್ಯಸ್ಥರು ಮತ್ತು ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa