ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆ ಪ್ರಶಸ್ತಿ ಪ್ರಧಾನ
ಗದಗ, 04 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸಹಕಾರ ಇಲಾಖೆ, ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ, ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯ, ಗದಗ ಇವರ ಸಹಯೋಗದೊಂದಿಗೆ ದಿನಾಂಕ:02.09.2025 ಮಂಗಳವಾರ ರಂದು ಆಯ್ದ ಪ್ರೌಢಶಾಲೆ ವಿದ್ಯಾರ್ಥಿ/ವಿದ್
ಪೋಟೋ


ಗದಗ, 04 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸಹಕಾರ ಇಲಾಖೆ, ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ, ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯ, ಗದಗ ಇವರ ಸಹಯೋಗದೊಂದಿಗೆ ದಿನಾಂಕ:02.09.2025 ಮಂಗಳವಾರ ರಂದು ಆಯ್ದ ಪ್ರೌಢಶಾಲೆ ವಿದ್ಯಾರ್ಥಿ/ವಿದ್ಯಾರ್ಥಿನಿಯರುಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಹಾಗೂ ದಿನಾಂಕ: 03.09.2025 ರಂದು ಶ್ರೀ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಆಡಿಟೋರಿಯಂ ಹಾಲ್, ಗದಗ ಇದರ ಸಭಾಭವನದಲ್ಲಿ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿಯರುಗಳಿಗೆ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಯಿತು.

ದಿನಾಂಕ: 03.09.2025 ರಂದು ಬುಧವಾರ ಸಾಯಂಕಾಲ 4.00 ಘಂಟೆಗೆ ಪ್ರಶಸ್ತಿ ಪತ್ರ ವಿತರಣಾ ಸಮಾರಂಭ ಜರುಗಿತು. ಸದರ ಕಾರ್ಯಕ್ರಮವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಗದಗ ಉಪನಿರ್ದೇಶಕರಾದ ಸಿದ್ದಲಿಂಗ ಬಂಡು ಮಸನಾಯಕ ಉದ್ಘಾಟಿಸಿ ಮಾತನಾಡುತ್ತಾ ಸಹಕಾರ ಕ್ಷೇತ್ರದ ಅಭಿವೃದ್ಧಿ ವಿಚಾರವು ಬಂದಾಗಲೆಲ್ಲ ಯುವಕರ ಪಾತ್ರ ಬಹಳ ಮುಖ್ಯ ಎನ್ನುವುದು ಸ್ವಾತಂತ್ರ ಹೋರಾಟದಲ್ಲೂ ನೋಡಬಹುದು ಅದೇ ರೀತಿ ಈ ಅಭಿವೃದ್ಧಿಗೆ ಯುವಜನರು ಭಾವನಾ ಜೀವಿಗಳು ಜಾತಿ, ಮತ, ಧರ್ಮ, ಕನಸುಕಾಣುವ ಯುವಕರು ಅಭಿವೃದ್ಧಿಯ ಮನೋಭಾವದಿಂದ ಕಾರ್ಯೊನ್ಮುಖರಾಗುವ ವಿಶ್ವಾಸವೇ ಪ್ರಮುಖ ಹಾಗೂ ಶಾಲಾ ಕಾಲೇಜು ಪಠ್ಯದಲ್ಲಿ ಸಹಕಾರ ವಿಷಯ ಸೇರ್ಪಡೆ ಹಾಗೂ ಸಹಕಾರ ವಿಶ್ವವಿದ್ಯಾಲಯಗಳ ಸ್ಥಾಪನೆಯಿಂದ ಸಹಕಾರಿ ವ್ಯವಸ್ಥೆ ಸದೃಡಗೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರುಗಳಾದ ಎಸ್. ಎಸ್. ಪಟ್ಟಣಶೆಟ್ಟಿ, ಮಾತನಾಡುತ್ತಾ ವಿಶೇಷವಾಗಿ ಕೇಂದ್ರ ಸರ್ಕಾರವು ಸಹಕಾರ ಸಚಿವಾಲಯ ಪ್ರಾರಂಭ ಮಾಡುವುದರ ಜೊತೆಗೆ ವಿಶಿಷ್ಟ ಯೋಜನೆಗಳನ್ನು ಹಾಕಿಕೊಂಡು ಅದಕ್ಕನುಗುಣವಾಗಿ ಹಣ ಬಿಡುಗಡೆ ಮಾಡಿ ಈ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದರು ಹಾಗೂ ರಾಜ್ಯ ಸರ್ಕಾರದ ಹಲವಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಯೋಜನೆಗಳನ್ನು ಪ್ರಕಟಿಸಿದ್ದು ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡೆ ರೂಪಿಸಲಾಗಿದೆ ಇದರಿಂದ ಸಹಕಾರ ವಲಯವು ಅಭಿವೃದ್ಧಿಯತ್ತ ಸಾಗಲು ಯುವಕರ ಪಾತ್ರ ಬಹಳ ಪ್ರಮುಖವಾಗಿದ್ದು ಕಾರಣ ಭಾಗವಹಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹೆಚ್ಚಿನ ಆಸಕ್ತಿ ವಹಿಸಿ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಹಾಗೂ ಈ ಕ್ಷೇತ್ರದ ಹಲವಾರು ಸೌಲಭ್ಯಗಳನ್ನು ಪಡೆದುಕೊಂಡು ಸಹಕಾರ ಸಂಘಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಆ ಸಂಘಗಳ ಸದಸ್ಯರಿಗೆ ಆರ್ಥಿಕ ಸೌಲಭ್ಯ ನೀಡುವ ಅವಕಾಶವನ್ನು ಬಳಸಿಕೊಳ್ಳಿ ಎಂದು ಹೇಳಿದರು.

ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯ ಗದಗ ಇದರ ಪ್ರಾಂಶುಪಾಲರಾದ ಪಿ. ಜಿ. ಪಾಟೀಲ ರವರು ಮಾತನಾಡುತ್ತಾ ಸಹಕಾರ ಎಂಬ ಪದವು ಎಲ್ಲರ ನರನಾಡಿಯಲ್ಲಿ ಒಳಗೊಂಡಿರುವ ಪದವಾಗಿದ್ದು ಕಣಗಿನಹಾಳದಲ್ಲಿ ಹುಟ್ಟಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇಡೀ ಏಷ್ಯಾ ಖಂಡದಲ್ಲಿ ಪ್ರಥಮ ಸಹಕಾರ ಸಂಘ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇಂದಿನ ಮಕ್ಕಳೆ ನಾಳಿನ ಪ್ರಜೆಗಳಾಗಿರುವಿರಿ ಆದ್ದರಿಂದ ತಾವೆಲ್ಲರೂ ಸಹಕಾರ ಕ್ಷೇತ್ರದ ಬಗ್ಗೆ ಅರಿತುಕೊಂಡು ತಮ್ಮ ಜೀವನದಲ್ಲಿ ಯಶಸ್ವಿಯಾಗಬೇಕು ಹಾಗೂ ವಿದ್ಯಾರ್ಥಿಗಳಿಗೆ ಸಹಕಾರ ಹಾಗೂ ಸಹಕಾರ ಸಂಘಗಳ ಕಾರ್ಯನಿರ್ವಹಣೆಯ ಪ್ರಾತ್ಯಕ್ಷತೆಯನ್ನು ನೀಡುವುದರಿಂದ ಸಹಕಾರಿ ವ್ಯವಸ್ಥೆಯ ಬೆಳವಣಿಗೆಗೆ ನೆರವಾಗಬಲ್ಲದು, ಇತ್ತೀಚಿಗೆ ಸಹಕಾರ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೇ ಬಹುಪಾಲು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದ್ದು ದೇಶದ ಅಭಿವೃದ್ಧಿಗೆ ಉತ್ತೇಜನಕಾರಿಯಾಗಿದೆ ಎಂದು ಹೇಳಿದರು.

ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಸಹಕಾರ ಯೂನಿಯನ್‌ದ ವಾಯ್. ಎಫ್. ಪಾಟೀಲ ರವರು ಸಹಕಾರ ಎಂಬ ಪದವು ಎಲ್ಲರ ನರನಾಡಿಯಲ್ಲಿ ಒಳಗೊಂಡಿರುವ ಪದವಾಗಿದ್ದು ಕಣಗಿನಹಾಳದಲ್ಲಿ ಹುಟ್ಟಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇಡೀ ಏಷ್ಯಾ ಖಂಡದಲ್ಲಿ ಪ್ರಥಮ ಸಹಕಾರ ಸಂಘ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇಂದಿನ ಮಕ್ಕಳೆ ನಾಳಿನ ಪ್ರಜೆಗಳಾಗಿರುವಿರಿ ಆದ್ದರಿಂದ ತಾವೆಲ್ಲರೂ ಸಹಕಾರ ಕ್ಷೇತ್ರದ ಬಗ್ಗೆ ಸರಿಯಾದ ತಿಳುವಳಿಕೆ ಪಡೆದು ಅದನ್ನು ಮನನ ಮಾಡಿಕೊಂಡು ಕ್ಷೇತ್ರದ ಪ್ರಗತಿಗೆ ಯವಕರು ಹೆಚ್ಚಿನ ರೀತಿಯಲ್ಲಿ ಭಾಗವಹಿಸುವ ಮೂಲಕ ತಮ್ಮ ಆಸಕ್ತಿಯನ್ನು ಈ ಕ್ಷೇತ್ರದಡೆಗೆ ಹರಿಸಬೇಕೆಂದು ಹಾಗೂ ತಮ್ಮ ವಿದ್ಯಾಭ್ಯಾಸ ಉತ್ತಮ ರೀತಿಯಲ್ಲಿ ಮಾಡುವುದರ ಜೊತೆಗೆ ವಿಶೇಷ ಕೌಶಲ್ಯಗಳನ್ನು ಅಳವಡಿಸಿಕೊಂಡು ತಮ್ಮ ಜೀವನದಲ್ಲಿ ಯಶಸ್ವಿಯಾಗಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಎಸ್.ಎಸ್.ಕಬಾಡೆ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ಪುಷ್ಪಾ ಕೆ. ಕಡಿವಾಳರ , ಪ್ರಶಾಂತ ಮುಧೋಳ, ಸಹಕಾರ ಅಭಿವೃದ್ಧಿ ಅಧಿಕಾರಿಗಳು, ರೋಣ, ಮುಖ್ಯ ಅತಿಥಿಗಳು ಹಾಗೂ ತೀರ್ಪುಗಾರರಾಗಿ ವಿಶ್ರಾಂತ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಂ. ಸಿ. ಉಪ್ಪಿನ, ಕ.ಹಾ.ಮ.ತರಬೇತಿ ಕೇಂದ್ರದ ನಿವೃತ್ತ ಜಂಟಿ ನಿರ್ದೇಶಕರಾದ ಎಂ. ಬಿ. ಮಡಿವಾಳರ ಮತ್ತು ಕೆ. ಆಯ್. ಸಿ. ಎಂ. ಇದರ ಪ್ರಾಂಶುಪಾಲರಾದ ಡಿ. ಆರ್. ವೆಂಕಟರಾಮ ಹಾಗೂ ದಿ ಮರ್ಚಂಟ ಅರ್ಬನ್ ಕೋ-ಆಪ್ ಬ್ಯಾಂಕ್ ಲಿ., ಗದಗ ಇದರ ವ್ಯವಸ್ಥಾಪಕ ನಿರ್ದೇಶಕರಾದ ಬಸವರಾಜ ನಾಯಕವಾಡಿ ಇವರು ಭಾಗವಹಿಸಿದ್ದರು.

ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ಈ ಕೆಳಕಂಡಂತೆ ವಿದ್ಯಾರ್ಥಿನಿಯರು ಬಹುಮಾನವನ್ನು ಪಡೆದರು.

ಪ್ರಬಂಧ ಸ್ಪರ್ಧೆ ವಿಜೇತರು

1. ಕುಮಾರಿ ಸಾಯಿಶ್ರೀ ಸಂಜೀವ ಹಬೀಬ

ಸೈಂಟ ಜಾನ್ಸ ಕನ್ನಡ ಮಾಧ್ಯಮ ಪ್ರೌಢಶಾಲೆ, ಗದಗ

ತಾ. ಜಿ.ಗದಗ - ಪ್ರಥಮ

2. ಕುಮಾರಿ ಪ್ರೀತಿ ಈಶ್ವರ ಸಮಗಂಡಿ

ಸೈಂಟ ಜಾನ್ಸ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಗದಗ

ತಾ. ಜಿ.ಗದಗ - ದ್ವಿತೀಯ

3. ಕುಮಾರಿ ಮೇಘನಾ ವಿ. ಅಗಸಿಮನಿ

ಶ್ರೀ ಸಿ.ಎಸ್.ಪಾಟೀಲ ಬಾಲಕೀಯರ ಕನ್ನಡ ಮಾಧ್ಯಮ

ಪ್ರೌಢಶಾಲೆ, ಗದಗ ತಾ. ಜಿ.ಗದಗ - ತೃತೀಯ

ಚರ್ಚಾ ಸ್ಪರ್ಧೆ ವಿಜೇತರು

ವಿಷಯದ ಪರವಾಗಿ:

1. ಕುಮಾರ ಭರತ ಎಸ್. ಮಿನಜಗಿ

ಶ್ರೀ ಡಿ.ಎಸ್.ಕೆ. ಪದವಿ. ಪೂರ್ವ ಕಾಲೇಜು, - ಪ್ರಥಮ

ಬೆಟಗೇರಿ ತಾ. ಜಿ.ಗದಗ

2. ಕುಮಾರಿ ಭುವನೇಶ್ವರಿ ಬಳ್ಳಾರಿ

ಎಸ್.ಜೆ.ಜೆ. ಎಂ. ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ - ದ್ವಿತೀಯ

ಮುಳಗುಂದ ತಾ.ಜಿ.ಗದಗ

3. ಕುಮಾರಿ ಶಿವಲೀಲಾ ಭದ್ರಗೌಡ

ಜಗದ್ಗುರು ತೋಂಟದಾರ್ಯ ವಿಜ್ಞಾನ, ವಾಣಿಜ್ಯ ಮತ್ತು ಕಲಾ - ತೃತೀಯ

ಪದವಿ ಪೂರ್ವ ಮಹಾವಿದ್ಯಾಲಯ ಗಜೇಂದ್ರಗಡ

ತಾ.ಗಜೇಂದ್ರಗಡ ಜಿ.ಗದಗ

ವಿಷಯದ ವಿರೋಧವಾಗಿ:

1. ಕುಮಾರ ರಾಹುಲ್ ಹೊಸಳ್ಳಿ - ಪ್ರಥಮ

ಶ್ರೀ ಡಿ.ಎಸ್.ಕೆ. ಪದವು ಪೂರ್ವ ಕಾಲೇಜು ಬೆಟಗೇರಿ

ತಾ.ಜಿ.ಗದಗ

2. ಕುಮಾರಿ ಫಾಲ್ಗುಣಿ ವಾರಕರ

ಜಗದ್ಗುರು ತೋಂಟದಾರ್ಯ ಪದವಿ ಪೂರ್ವ ಮಹಾವಿದ್ಯಾಲಯ - ದ್ವಿತೀಯ

ಗದಗ-ಬೇಟಗೇರಿ ತಾ.ಜಿ.ಗದಗ

3. ಕುಮಾರಿ ಶ್ರೀದೇವಿ ಹೊನ್ನಳ್ಳಿ

ತೋಂಟದ ಸಿದ್ದೇಶ್ವರ ವಿಜ್ಞಾನ, ವಾಣಿಜ್ಯ ಹಾಗೂ ಕಲಾ

ಮತ್ತು ಕಲಾ ಪದವಿ ಪೂರ್ವ ಕಾಲೇಜು,

ಗದಗ ತಾ.ಜಿ.ಗದಗ - ತೃತೀಯ

ಸದರಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ, ದ್ವಿತೀಯ ಮತ್ತು ತೃತೀಯ ಈ ರೀತಿಯಾಗಿ ವಿದ್ಯಾರ್ಥಿ/ವಿದ್ಯಾರ್ಥಿನಿಯರುಗಳಿಗೆ ನಗದು ಬಹುಮಾನ, ಮೆಡಲ್, ಪ್ರಮಾಣ ಪತ್ರ ಹಾಗೂ ಪಾರಿತೊಷಕ ನೀಡಲಾಯಿತು. ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಗೆ ಹಾಜರಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರುಗಳಿಗೆ ಭಾಗವಹಿಸಿದಕ್ಕೆ ಪ್ರಮಾಣಪತ್ರ ನೀಡಲಾಗಿದೆ. ಚರ್ಚಾಸ್ಪರ್ಧೆಯ ವಿಷಯದ ಪರವಾಗಿ ಪ್ರಥಮ ಮತ್ತು ವಿಷಯದ ವಿರೋಧವಾಗಿ ಪ್ರಥಮವಾಗಿ ಆಯ್ಕೆಯಾದ ವಿದ್ಯಾರ್ಥಿಗಳ ಹೆಸರು ಮತ್ತು ವಿವರವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇಲ್ಲಿಗೆ ರಾಜ್ಯಮಟ್ಟದ ಚರ್ಚಾಸ್ಪರ್ಧೆಗೆ ಕಳುಹಿಸಿಕೊಡಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕುಮಾರಿ ಕಾವೇರಿ ಹೂಗಾರ ಮತ್ತು ಶಿವಗಂಗಾ ಚವಡಿ ಸಿ.ಎಸ್.ಸಿ.ಎಸ್.ಪ.ಪೂ. ಕಾಲೇಜ್, ಬಳಗಾನೂರ ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು. ಚಂದ್ರಶೇಖರ ಎಸ್. ಕರಿಯಪ್ಪನವರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಇವರು ಸ್ವಾಗತಿಸಿ, ನಿರೂಪಿಸಿದರು ಮತ್ತು ಶ್ರೀಮತಿ ರಶೀದಾಬಾನು ಸಿ. ಯಲಿಗಾರ, ಮಹಿಳಾ ಸಹಕಾರ ಶಿಕ್ಷಕಿ, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande