ರಸ್ತೆ ಅಗೆಯುತ್ತಿದ್ದ ಗುತ್ತಿಗೆದಾರನಿಗೆ ತರಾಟೆಗೆ ತೆಗೆದುಕೊಂಡ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಹಾಗೂ ಸಾರ್ವಜನಿಕರು
ವಿಜಯಪುರ, 04 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಸ್ತೆ ಅಗೆಯುತ್ತಿದ್ದ ಗುತ್ತಿಗೆದಾರನಿಗೆ ಪಾಲಿಕೆ ಸದಸ್ಯ ಹಾಗೂ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ. ಯಾವುದೇ ಅನುಮತಿ ಪತ್ರ ತೋರಿಸದೇ ಗ್ಯಾಸ್ ಪೈಪ್ ಅಳವಡಿಸುವ ಕಾಮಗಾರಿಯು ವಾರ್ಡ್ ನಂ.32. ರಲ್ಲಿ ನಡೆಯುತ್ತಿತ್ತು‌
ಪಾಲಿಕೆ


ವಿಜಯಪುರ, 04 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಸ್ತೆ ಅಗೆಯುತ್ತಿದ್ದ ಗುತ್ತಿಗೆದಾರನಿಗೆ ಪಾಲಿಕೆ ಸದಸ್ಯ ಹಾಗೂ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ.

ಯಾವುದೇ ಅನುಮತಿ ಪತ್ರ ತೋರಿಸದೇ ಗ್ಯಾಸ್ ಪೈಪ್ ಅಳವಡಿಸುವ ಕಾಮಗಾರಿಯು ವಾರ್ಡ್ ನಂ.32. ರಲ್ಲಿ ನಡೆಯುತ್ತಿತ್ತು‌. ಅಲ್ಲದೆ, ಪಾಲಿಕೆ ಸದಸ್ಯರ ಗಮನಕ್ಕೆ ತಾರದೆ ರಸ್ತೆ ಅಗೆಯುತ್ತಿದ್ದರು. ಹೀಗಾಗಿ ವಾರ್ಡ್ ನಂ.32 ರ ಸದಸ್ಯ ಶಿವರುದ್ರ ಬಾಗಲಕೋಟ ತರಾಟೆಗೆ ತೆಗೆದುಕೊಂಡರು.

ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ಎರಡು ಗಂಟೆ ಕಾಯ್ದರೂ ಬಾರದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಮಗಾರಿಯಲ್ಲಿ‌ ನೀರಿನ ಪೈಪ್ ಹಾಗೂ ಡ್ರ್ಯಾನೇಜ್ ಪೈಪ್ ಗಳಿಗೆ ಹಾನಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಮಗಾರಿ ಅನುಮತಿ ತೋರಿಸುವಂತೆ ಸಾರ್ವಜನಿಕರು ಹಾಗೂ ಪಾಲಿಕೆ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು. ಬಳಿಕ ಕಾಮಗಾರಿ ನಿಲ್ಲಿಸಿ ಪಾಲಿಕೆ ಅಧಿಕಾರಿಗಳ ವಿರುದ್ಧವೂ ಸಾರ್ವಜನಿಕರು ಹರಿಹಾಯ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande