ಹುಬ್ಬಳ್ಳಿ, 04 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಹುಬ್ಬಳ್ಳಿಯ ಗಿರಣಿಚಾಳ ಪ್ರದೇಶದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಒಟ್ಟಿಗೆ ಗಣೇಶ ಚತುರ್ಥಿಯನ್ನು ಹರ್ಷೋಲ್ಲಾಸದಿಂದ ಆಚರಿಸುತ್ತಿದ್ದಾರೆ.
ಸ್ಥಳೀಯ ಯುವಕರು ಹಾಗೂ ಹಿರಿಯರು ಕೈಜೋಡಿಸಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ಭಜನೆ-ಕೀರ್ತನೆಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದ್ದಾರೆ. ಉಭಯ ಸಮುದಾಯದ ಮಹಿಳೆಯರೂ ಸಹ ಭಾಗವಹಿಸಿ ಸಾಂಪ್ರದಾಯಿಕ ವಾದ್ಯ, ನೃತ್ಯಗಳ ಮೂಲಕ ಉತ್ಸವಕ್ಕೆ ಕಳೆ ಹೆಚ್ಚಿಸಿದ್ದಾರೆ.
ಈ ಸಂದರ್ಭದಲ್ಲಿ ಗಣೇಶೋತ್ಸವವನ್ನು ಧಾರ್ಮಿಕ ಮಿತಿಗಳಿಗೆ ಸೀಮಿತಗೊಳಿಸದೇ, ಸೌಹಾರ್ದದ ಹಬ್ಬವನ್ನಾಗಿ ರೂಪಿಸುವುದು ನಮ್ಮ ಉದ್ದೇಶ ಎಂದು ಆಯೋಜಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa