ಸೆಪ್ಟಂಬರ್ 6ರ ಶನಿವಾರ `ವಚನ ಸಂಸ್ಕೃತಿ ಅಭಿಯಾನ' ಬಳ್ಳಾರಿಗೆ
ಬಳ್ಳಾರಿ, 03 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಶರಣ ಮತ್ತು ವಚನ ಸಂಸ್ಕೃತಿ ಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಹಮ್ಮಿಕೊಂಡಿರುವ `ವಚನ ಸಂಸ್ಕೃತಿ ಅಭಿಯಾನ'' ಬಳ್ಳಾರಿ ನಗರಕ್ಕೆ ಸೆಪ್ಟಂಬರ್ 6ರ ಶನಿವಾರ ಆಗಮಿಸಲಿದೆ ಎಂದು ಬಸವ ಸಂಸ್ಕೃತಿ ಅಭಿಯಾನದ ಬಳ್ಳಾರಿ
ಸೆಪ್ಟಂಬರ್ 6ರ ಶನಿವಾರ `ವಚನ ಸಂಸ್ಕøತಿ ಅಭಿಯಾನ' ಬಳ್ಳಾರಿಗೆ


`Vachanan Sanskoti Abhiyan' to be held in Ballari on Saturday, September 6th


ಬಳ್ಳಾರಿ, 03 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಶರಣ ಮತ್ತು ವಚನ ಸಂಸ್ಕೃತಿ ಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಹಮ್ಮಿಕೊಂಡಿರುವ `ವಚನ ಸಂಸ್ಕೃತಿ ಅಭಿಯಾನ' ಬಳ್ಳಾರಿ ನಗರಕ್ಕೆ ಸೆಪ್ಟಂಬರ್ 6ರ ಶನಿವಾರ ಆಗಮಿಸಲಿದೆ ಎಂದು ಬಸವ ಸಂಸ್ಕೃತಿ ಅಭಿಯಾನದ ಬಳ್ಳಾರಿ ಜಿಲ್ಲಾ ಸಂಚಾಲಕ ಸಿರಿಗೇರಿ ಪನ್ನರಾಜ್ ಅವರು ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಪತ್ರಕರ್ತರಿಗೆ ಬುಧವಾರ ಈ ಮಾಹಿತಿ ನೀಡಿ, ವಚನ ಸಾಹಿತ್ಯವನ್ನು ಸಂರಕ್ಷಿಸುವ ಮತ್ತು ಪ್ರಸರಿಸುವ ಉದ್ದೇಶದಿಂದ ಬಸವ ಸಂಸ್ಕøತಿ ಅಭಿಯಾನವನ್ನು ಆಯೋಜಿಸಲಾಗಿದೆ. ಲಿಂಗಾಯತ ಮಠಾಧಿಪತಿಗಳ ಒಕ್ಕೂಟ. ಬಸವಲಿಂಗ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಬಾಲ್ಕಿ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ, ಡಾ. ಶ್ರೀ ತೋಂಟದ ಸಿದ್ಧರಾಮ ಸ್ವಾಮಿಗಳು ಇನ್ನಿತರರ ಸಾನಿಧ್ಯದಲ್ಲಿ ಸೆಪ್ಟಂಬರ್ 1 ರಿಂದ ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯಿಂದ ಅಭಿಯಾನ ಪ್ರಾರಂಭವಾಗಿದೆ. ಅಭಿಯಾನವು ಸೆಪ್ಟಂಬರ್ 6ರ ಶನಿವಾರ ಬಳ್ಳಾರಿಗೆ ಆಗಮಿಸಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಅಕ್ಟೋಬರ್ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾರೋಪಗೊಳ್ಳಲಿದೆ ಎಂದರು.

ಆಂದ್ರಪ್ರದೇಶದ ಮೂಲಕ ಬಳ್ಳಾರಿಗೆ ಆಗಮಿಸುವ ರಥವನ್ನು ನಗರದ ಸಂಗನಕಲ್ಲು ರಸ್ತೆಯ ಕೆ.ಆರ್.ಎಸ್. ಪಂಕ್ಷನ್ ಹಾಲ್ ಬಳಿ ಸೆಪ್ಟಂಬರ್ 6ರ ಬೆಳಿಗ್ಗೆ 9 ಕ್ಕೆ ಸ್ವಾಗತಿಸಿ, ಬೈಕ್ ರ್ಯಾಲಿಯಲ್ಲಿ ಬಸವೇಶ್ವರ ಸರ್ಕಲ್, ದುರ್ಗಮ್ಮಗುಡಿ ಸರ್ಕಲ್, ಅಂಡರ್ ಬ್ರಿಡ್ಜ್, ಗಡಗಿ ಚೆನ್ನಪ್ಪ ಸರ್ಕಲ್, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ ಸರ್ಕಲ್, ತೇರು ಬೀದಿ, ಎಚ್.ಆರ್. ಗವಿಯಪ್ಪ ಸರ್ಕಲ್‍ನಲ್ಲಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ರೈಲ್ವೆ ಓವರ್ ಬ್ರಿಡ್ಜ್ ಮೂಲಕ ವಾಲ್ಮೀಕಿ ಸರ್ಕಲ್‍ನಲ್ಲಿ ವಾಲ್ಮೀಕಿ ಪ್ರತಿಮೆಗೆ

ಮಾಲಾರ್ಪಣೆ ನಂತರ ಪಾರ್ವತಿ ನಗರದ ಮುಖ್ಯ ರಸ್ತೆ ಮೂಲಕ ಕಪ್ಪಗಲ್ಲು ರಸ್ತೆಯಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಆವರಣದಲ್ಲಿ ಅಂತ್ಯಗೊಳ್ಳಲಿದೆ.

ಅಂದು ಬೆಳಿಗ್ಗೆ 10.30 ಕ್ಕೆ ಅಲ್ಲಂ ಸುಮಂಗಳಮ್ಮ ಕಾಲೇಜಿನಲ್ಲಿ ಶಿಕ್ಷಣದಲ್ಲಿ ವಚನ ಸಾಹಿತ್ಯದ ಪಾತ್ರ ಕುರಿತು ಉಪನ್ಯಾಸ ಮತ್ತು ವಿದ್ಯಾರ್ಥಿಗಳು, ಸಾರ್ವಜನಿಕರೊಂದಿಗೆ ಸಂವಾದ ನಡೆಯಲಿದೆ. ಸಂಜೆ 4 ಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯಿಂದ ದುರ್ಗಮ್ಮ ದೇವಸ್ಥಾನದ ಮೂಲಕ ಬಸವ ಭವನಕ್ಕೆ ಅಭಿಯಾನದ ಮೆರವಣಿಗೆ ನೂರಾರು ಸಂಖ್ಯೆಯ ಸಮುದಾಯದ ಜನತೆ ಮತ್ತು ಜನಪದ ವಾದ್ಯಗಳ ಮೂಲಕ ತೆರಳಲಿದೆ.

ನಂತರ 6 ಗಂಟೆಗೆ ನಗರದ ಬಸವ ಭವನದಲ್ಲಿ ಶ್ರೀಗಳಿಂದ ಉಪನ್ಯಾಸ, ನಂತರ ಸಾಣೆಹಳ್ಳಿ ತಂಡದಿಂದ ಜಂಗಮದೆಡೆಗೆ ನಾಟಕ ಪ್ರದರ್ಶನ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯಸ್ಥ ಎಂ.ಜಿ. ಬಸರಾಜಪ್ಪ, ಸಂಗನಕಲ್ಲು ಹಿಮಂತರಾಜ್, ಜಾನೆಕುಂಟೆ ನೇಪಾಕ್ಷಪ್ಪ, ಬಾಗೇವಾಡಿ ಯೋಗಿರಾಜ, ಎನ್. ನೀಲನಗೌಡ, ಡಾ. ಶಂಕರ ಜೀರಂಕಳಿ, ಮೀನಳ್ಳಿ ಚಂದ್ರಶೇಖರ, ಚಂದ್ರಮೌಳಿ, ಗಂಗಾವತಿ ವೀರೇಶ್, ಕೇಣಿ ಬಸಪ್ಪ, ಸುರೇಶ್, ಕ.ಮ. ರವಿಶಂಕರ್, ಶರಣಬಸವ, ಹೆಚ್. ತಿಮ್ಮನಗೌಡ, ಮಲ್ಲಿಕಾರ್ಜುನಗೌಡ ಇನ್ನಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande