ಕಾರ್ಖಾನೆ ಹಾಗೂ ನೌಕರರ ನಡುವಿನ ಸಮಸ್ಯೆ ; ಸಚಿವ ಸಂತೋಷ್ ಲಾಡ್‌ ಸರಣಿ ಸಭೆ
ಬೆಂಗಳೂರು, 03 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಇಂದು ವಿಕಾಸ ಸೌಧದಲ್ಲಿ ನಾನಾ ಕಾರ್ಖಾನೆಗಳ ಆಡಳಿತ ಮಂಡಳಿ ಮತ್ತು ನೌಕರರ ನಡುವಿನ ಸಮಸ್ಯೆಗಳನ್ನು ಪರಿಹರಿಸಲು ಸರಣಿ ಸಭೆಗಳನ್ನು ನಡೆಸಿದರು. ಇಂಡಾಲ್ಕೊ ಕಾರ್ಖಾನೆಯ ಸಭೆ ಬೆಳಗಾವಿಯ ಇಂಡಾಲ್ಕೊ ಕಾರ್ಖಾನೆ ನೌಕರರು
Meeting


ಬೆಂಗಳೂರು, 03 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಇಂದು ವಿಕಾಸ ಸೌಧದಲ್ಲಿ ನಾನಾ ಕಾರ್ಖಾನೆಗಳ ಆಡಳಿತ ಮಂಡಳಿ ಮತ್ತು ನೌಕರರ ನಡುವಿನ ಸಮಸ್ಯೆಗಳನ್ನು ಪರಿಹರಿಸಲು ಸರಣಿ ಸಭೆಗಳನ್ನು ನಡೆಸಿದರು.

ಇಂಡಾಲ್ಕೊ ಕಾರ್ಖಾನೆಯ ಸಭೆ

ಬೆಳಗಾವಿಯ ಇಂಡಾಲ್ಕೊ ಕಾರ್ಖಾನೆ ನೌಕರರು ಮತ್ತು ಆಡಳಿತ ಮಂಡಳಿಯವರ ನಡುವೆ ಉಂಟಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.

ಈ ಸಭೆಯಲ್ಲಿ ಬೆಳಗಾವಿ ಶಾಸಕರಾದ ಆಸೀಫ್ ಸೇಠ್, ಕಾರ್ಮಿಕ ಆಯುಕ್ತ ಡಾ. ಗೋಪಾಲಕೃಷ್ಣ, ಉಪ ಕಾರ್ಮಿಕ ಆಯುಕ್ತರು ನಾಗೇಶ್ ಮತ್ತು ವೆಂಕಟೇಶ್ ರಾಠೋಡ್, ಕಾರ್ಖಾನೆಗಳು ಮತ್ತು ಬಾಯ್ಲರುಗಳ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ವೆರ್ಜಾ ಅಟ್ಯಾಚ್‌ಮೆಂಟ್ ಕಾರ್ಮಿಕರ ಸಭೆ

ಕೋಲಾರ ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದಲ್ಲಿರುವ ವೆರ್ಜಾ ಅಟ್ಯಾಚ್‌ಮೆಂಟ್ ಕಂಪನಿಯ ನೌಕರರ ಸಂಘಟನೆ ಮತ್ತು ಆಡಳಿತ ಮಂಡಳಿಯ ನಡುವೆ ಉಂಟಾದ ಗೊಂದಲ ಪರಿಹಾರಕ್ಕಾಗಿ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಕಾರ್ಮಿಕ ಆಯುಕ್ತ ಗೋಪಾಲಕೃಷ್ಣ, ನಿರ್ದೇಶಕ ಶ್ರೀನಿವಾಸ್, ಅಪರ ನಿರ್ದೇಶಕ ಶ್ರೀ ನಂಜಪ್ಪ, ಸಹಾಯಕ ಕಾರ್ಮಿಕ ಆಯುಕ್ತ ಜಹೀರ್ ಭಾಷಾ, ಜಂಟಿ ನಿರ್ದೇಶಕ ನವನೀತ್ ಮೋಹನ್, ಕಾರ್ಮಿಕ ಅಧಿಕಾರಿ ವರಲಕ್ಷ್ಮಿ, ಕಂಪನಿಯ ಮ್ಯಾನೇಜರ್ ಮತ್ತು ನೌಕರರ ಸಂಘದ ಗೌಡ ಹಾಜರಿದ್ದರು.

ಎಂವಿ ಫೋಟೊ ವೋಲ್ಟಾಯಿಕ್ ಕಂಪನಿಯ ಸಭೆ

ಬೆಂಗಳೂರು ನಗರದಲ್ಲಿರುವ ಎಂವಿ ಫೋಟೊ ವೋಲ್ಟಾಯಿಕ್ ಕಾರ್ಖಾನೆಯ ನೌಕರರ ಸಮಸ್ಯೆಗಳ ಬಗ್ಗೆ ಸಹ ಸಚಿವರು ಪ್ರತ್ಯೇಕವಾಗಿ ಚರ್ಚೆ ನಡೆಸಿದರು.

ಸಭೆಗಳಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್‌ , ಕಾರ್ಮಿಕರ ಹಿತ ಕಾಯುವುದೇ ಸರಕಾರದ ಆದ್ಯತೆ, ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande