ಬಾಯಿ ಆರೋಗ್ಯ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಿ-ಡಾ. ಶ್ರೀವಿದ್ಯಾ
ಕೊಪ್ಪಳ, 03 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಮನುಷ್ಯನ ಜೀವನದಲ್ಲಿ ಬಾಯಿಯ ಆರೋಗ್ಯ ಪ್ರಮುಖ ಪಾತ್ರವಹಿಸುತ್ತದೆ. ಬಾಯಿಯ ಆರೋಗ್ಯ ಮತ್ತು ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಯ ದಂತ ವೈದ್ಯರಾದ ಡಾ. ಶ್ರೀವಿದ್ಯಾ ಅವರು ಹೇಳಿದರು. ಕೊಪ್
ಕೊಪ್ಪಳ : ಬಾಯಿಯ ಆರೋಗ್ಯ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಿ: ಡಾ. ಶ್ರೀವಿದ್ಯಾ


ಕೊಪ್ಪಳ : ಬಾಯಿಯ ಆರೋಗ್ಯ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಿ: ಡಾ. ಶ್ರೀವಿದ್ಯಾ


ಕೊಪ್ಪಳ, 03 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಮನುಷ್ಯನ ಜೀವನದಲ್ಲಿ ಬಾಯಿಯ ಆರೋಗ್ಯ ಪ್ರಮುಖ ಪಾತ್ರವಹಿಸುತ್ತದೆ. ಬಾಯಿಯ ಆರೋಗ್ಯ ಮತ್ತು ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಯ ದಂತ ವೈದ್ಯರಾದ ಡಾ. ಶ್ರೀವಿದ್ಯಾ ಅವರು ಹೇಳಿದರು.

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಷ್ಟಗಿ ತಾಲೂಕ ಸಾರ್ವಜನಿಕ ಆಸ್ಪತ್ರೆ ಹಾಗೂ ಕುಷ್ಟಗಿ ಸರಕಾರಿ ಪಾಲಿಟೆಕ್ನಿಕಲ್ ಕಾಲೇಜ್, ಎನ್.ಎಸ್.ಎಸ್ ಘಟಕದ ಸಂಯುಕ್ತಾಶ್ರಯದಲ್ಲಿ ಸರಕಾರಿ ಪಾಲಿಟೆಕ್ನಿಕಲ್ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ದಂತ ತಪಾಸಣಾ ಶಿಬಿರ ಹಾಗೂ ಆರೋಗ್ಯ ಅರಿವು ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಂಬಾಕು ಸೇವನೆ ಹಾಗೂ ಹಾಲ್ಗೊಹಾಲ್ ಸೇವನೆಯಿಂದ ಕುಟುಂಬದ ಮೇಲೆ ಹಾಗೂ ಸಮಾಜದ ಮೇಲೆ ದುಷ್ಪರಿಣಾಮ ಉಂಟಾಗುವುದು. ಪ್ರತಿಯೊಬ್ಬರೂ ದಿನಕ್ಕೆ ಎರಡುಬಾರಿಯಂತೆ ಹಲ್ಲುಜ್ಜಬೇಕು ಮತ್ತು ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಹಾಗೂ ಯಾವುದೇ ರೀತಿಯ ತಂಬಾಕು ಉತ್ಪನ್ನಗಳು ಹಾಗೂ ಹಾಕ್ಕೋಹಾಲ್ ಸೇವನೆ ಮಾಡಬಾರದು. ಆಹಾರ ಸೇವೆನೆ ಮಾಡಿದಾಗ ಹಲ್ಲುಗಳ ಸಂದುಗಳಲ್ಲಿ ಆಹಾರದ ಕಣಗಳು ಉಳಿದುಕೊಂಡು ಸ್ವಚ್ಛತೆ ಕಾಪಾಡಿಕೊಳ್ಳದೇ ಇದ್ದರೆ ಹುಳುಕು ಹಲ್ಲು ಉಂಟಾಗುತ್ತವೆ ಮತ್ತು ಬಾಯಿಯ ದುರ್ವಾಸನೆ ಉಂಟಾಗುವುದಲ್ಲದೆ ಇದರಿಂದ ಅನಾರೋಗ್ಯ ಉಂಟಾಗಿತ್ತದೆ. ಯುವಕರು ವಿವಿಧ ರೀತಿಯ ಗುಟುಕಾ, ತಂಬಾಕು ಹಾಗೂ ಹಾಲ್ಗೊಹಾಲು ಸೇವನೆ ಮಾಡುವುದರಿಂದ ಬಾಯಿ ಕ್ಯಾನ್ಸರ್ ಮತ್ತು ಗಂಟಲು ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ ಎಂದರು.

ನಿರಂತರ ದಂತವೈದ್ಯರ ಹತ್ತಿರ ಬಾಯಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಯುವಕರು ಬೀಡಿ, ಸಿಗರೇಟ್, ಗುಟುಕಾ ಹಾಗೂ ಹಾಕ್ಕೋಹಾಲ್ ಸೇವನೆ ಮಾಡಬಾರದು. ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು. ಹಲ್ಲಿನ ಯಾವುದೇ ಸಮಸ್ಯೆ ಉಂಟಾದರೆ, ತಮ್ಮ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ, ದಂತ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಬೇಕು ಎಂದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ ಅವರು ಕಾರ್ಯಕ್ರಮ ಕುರಿತು ಮಾತನಾಡಿ, ಸೋಂಕಿತ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಚಿಕನ್‌ಗುನ್ಯಾ, ಆನೆಕಾಲು ರೋಗ, ಮೆದಳುಜ್ವರ, ಮಲೇರಿಯಾ, ಜಿಕಾವೈರಸ್ ಹರಡದಂತೆ, ಸೋಳ್ಳೆಗಳ ಉತ್ಪತ್ತಿತಾಣ ಗುರುತಿಸಿ, ಸ್ವಚ್ಛಗೊಳಿಸುತ್ತಿರಬೇಕು ಹಾಗೂ ವೈಯಕ್ತಿಕ ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕ್ಷಯರೋಗ ನಿರ್ಮೂಲನೆ ಮಾಡಲು ಎಲ್ಲರು ಸಹಕಾರ ಬಹಳ ಮುಖ್ಯ. ನಿಮ್ಮ ಅಕ್ಕ-ಪಕ್ಕದವರಿಗೆ ಯಾರಿಗಾದರೂ ಎರಡು ವಾರಗಳಿಂದ ಸತತ ಕೆಮ್ಮು, ಕಫದಲ್ಲಿ ರಕ್ತಬಿಳುವುದು. ಹಸಿವು ಆಗದೇ ಇರುವಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆ ಕಳುಹಿಸಿಕೋಡಿ. ಮೈಮೇಲೆ ತಿಳಿ-ಬಿಳಿ ತಾಮ್ರವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಕಂಡುಬಂದರೆ ಆರೋಗ್ಯ ಸಿಬ್ಬಂದಿಯನ್ನು ಭೇಟಿ ಮಾಡಬೇಕು ಎಂದರು.

ಯಾವುದೇ ಮಾನಸಿಕ ಸಮಸ್ಯೆ ಕಂಡುಬಂದರೆ, 14416 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬೇಕು ಹಾಗೂ ಜೀವನ ಶೈಲಿಯಿಂದ ಬರುವ ಖಾಯಿಲೆಗಳಾದ ಅಧೀಕ ರಕ್ತದೋತ್ತಡ, ಮಧುಮೇಹ, ಕ್ಯಾನ್ಸರ್, ಹೃದಯಘಾತ, ಸ್ಟೋಕ್ ಮತ್ತು ಬೇಡವಾದ ಬೊಜ್ಜು ಇವುಗಳಿಂದ ದೂರವಿರಲು ದೈಹಿಕ ಚಟುವಟಿಕೆ ಹಾಗೂ ಪೌಷ್ಠಿಕ ಆಹಾರ ಸೇವನೆ ಮಾಡಿ ಹಾಗೂ 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ನಿರಂತರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಪಾಲಕರಿಗೆ ಮತ್ತು ಸಾರ್ವಜನಿಕರಿಗೆ ತಿಳಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಆರ್.ಕೆ.ಎಸ್.ಕೆ ಆಪ್ತ ಸಮಾಲೋಚಕರಾದ ಖಾದರ್‌ಬಾಷಾ ಅವರು ಹದಿ-ಹರೆಯದವರ ಆರೋಗ್ಯ ರಕ್ಷಣೆ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಮತ್ತು ಪೌಷ್ಠಿಕ ಆಹಾರ ಸೇವೆನೆ ಕುರಿತು ವಿವರವಾಗಿ ಮಾತನಾಡಿದರು.

ಐ.ಸಿ.ಟಿ.ಸಿ ಆಪ್ತಸಮಾಲೋಚಕರಾದ ವಿಜಯಲಕ್ಷ್ಮಿ ಅವರು ಹೆಚ್.ಐ.ವಿ. ಏಡ್ಸ್ ನಿಯಂತ್ರಣ ಕುರಿತು ವಿಶೇಷ ಉಪನ್ಯಾಸ ನೀಡಿದರು.

ದಂತ ತಪಾಸಣಾ ಶಿಬಿರ ಮತ್ತು ಆರೋಗ್ಯ ಅರಿವು ಆಂದೋಲನ ಕಾರ್ಯಕ್ರಮದ ಅಂಗವಾಗಿ ಕುಷ್ಟಗಿ ಸರಕಾರಿ ಪಾಲಿಟೆಕ್ನಿಕಲ್ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಬಾಯಿ ಆರೋಗ್ಯ ತಪಾಸಣೆ ಮಾಡಲಾಯಿತು.

ಸರಕಾರಿ ಪಾಲಿಟೆಕ್ನಿಕಲ್ ಕಾಲೇಜ್ ಪ್ರಾಂಶುಪಾಲರಾದ ಸಿ.ಎಸ್. ಜನಾದ್ರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ ಇಲಾಖೆಯು ಹಮ್ಮಿಕೊಳ್ಳುವ ಇಂತಹ ಜಾಗೃತಿ ಕಾರ್ಯಕ್ರಮಗಳು ಹಾಗೂ ಆರೋಗ್ಯ ತಪಾಸಣಾ ಶಿಬಿರಗಳು ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯುಕ್ತವಾಗಿವೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಸೌಮ್ಯ ಸೇರಿದಂತೆ ಸಹ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande