ಇಂದಿನಿಂದ ಜಿಎಸ್‌ಟಿ ಮಂಡಳಿ ಸಭೆ ಆರಂಭ
ನವದೆಹಲಿ, 03 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ದೆಹಲಿಯಲ್ಲಿ ಇಂದಿನಿಂದ ಆರಂಭವಾಗಲಿರುವ ಎರಡು ದಿನಗಳ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಸಾಮಾನ್ಯ ಜನರ ಖರ್ಚು ಮೇಲೆ ನೇರ ಪರಿಣಾಮ ಬೀರುವಂತಹ ಮಹತ್ವದ ನಿರ್ಧಾರಗಳು ಕೈಗೊಳ್ಳುವ ಸಾಧ್ಯತೆ ಇದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷ
ಇಂದಿನಿಂದ ಜಿಎಸ್‌ಟಿ ಮಂಡಳಿ ಸಭೆ ಆರಂಭ


ನವದೆಹಲಿ, 03 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ದೆಹಲಿಯಲ್ಲಿ ಇಂದಿನಿಂದ ಆರಂಭವಾಗಲಿರುವ ಎರಡು ದಿನಗಳ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಸಾಮಾನ್ಯ ಜನರ ಖರ್ಚು ಮೇಲೆ ನೇರ ಪರಿಣಾಮ ಬೀರುವಂತಹ ಮಹತ್ವದ ನಿರ್ಧಾರಗಳು ಕೈಗೊಳ್ಳುವ ಸಾಧ್ಯತೆ ಇದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

ಸಭೆಯಲ್ಲಿ ಜಿಎಸ್‌ಟಿ ಸುಧಾರಣೆಗಳ ಪ್ರಸ್ತಾವನೆಗಳ ಬಗ್ಗೆ ಚರ್ಚೆ ನಡೆಯಲಿದೆ. ಪ್ರಮುಖವಾಗಿ, ಪ್ರಸ್ತುತ ಜಾರಿಗೆ ಇರುವ ಶೇ.12 ಮತ್ತು ಶೇ.28 ರ ತೆರಿಗೆ ಸ್ಲ್ಯಾಬ್‌ಗಳನ್ನು ರದ್ದು ಮಾಡಿ, ಶೇ.5 ಮತ್ತು ಶೇ.18 ರ ಎರಡು ದರಗಳನ್ನು ಮಾತ್ರ ಉಳಿಸುವ ಬಗ್ಗೆ ಮಂಡಳಿ ಚರ್ಚೆ ನಡೆಸುವ ನಿರೀಕ್ಷೆ ಇದೆ. ಅಲ್ಲದೆ, ಕೆಲವು ಆಯ್ದ ವಸ್ತುಗಳಿಗೆ ಶೇ.40ರ ವಿಶೇಷ ತೆರಿಗೆ ದರ ಜಾರಿಗೊಳಿಸುವ ಪ್ರಸ್ತಾಪವೂ ಮುಂದಿಟ್ಟುಕೊಳ್ಳಲಾಗಿದೆ.

ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ ಸುಧಾರಣೆಗಳನ್ನು ಶೀಘ್ರದಲ್ಲಿ ಜಾರಿಗೆ ತರಲು ಸರ್ಕಾರ ತಯಾರಾಗುತ್ತಿದೆ ಎಂದು ಘೋಷಿಸಿದ್ದರು. ನಂತರ, ಕೇಂದ್ರ ಸರ್ಕಾರವು ಪ್ರಾಥಮಿಕ ಹಂತದಲ್ಲಿ ರಾಜ್ಯಗಳೊಂದಿಗೆ ಈ ಪ್ರಸ್ತಾಪದ ಕರಡನ್ನು ಹಂಚಿಕೊಂಡಿತ್ತು.

ಸಭೆಯಲ್ಲಿ ದಿನನಿತ್ಯದ ಬಳಕೆಯ ವಸ್ತುಗಳ ಮೇಲಿನ ತೆರಿಗೆ ಕಡಿತಗೊಂಡರೆ, ಜನಸಾಮಾನ್ಯರಿಗೆ ತಾತ್ಕಾಲಿಕ ನಿರಾಳತೆ ಸಿಗುವ ನಿರೀಕ್ಷೆಯಿದೆ. ಇದೇ ವೇಳೆ, ಕೇಂದ್ರ-ರಾಜ್ಯಗಳ ಆದಾಯ ಹಂಚಿಕೆ, ತೆರಿಗೆ ವಸೂಲಿ ಮತ್ತು ಜಿಎಸ್‌ಟಿ ವ್ಯವಸ್ಥೆಯ ಸರಳೀಕರಣ ಕುರಿತಂತೆ ಮಹತ್ವದ ನಿರ್ಣಯಗಳು ಕೈಗೊಳ್ಳುವ ನಿರೀಕ್ಷೆಯಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande