ಮಾತೃ ಸ್ವರೂಪಕ್ಕೆ ನಿಂದಿಸಿದ ರಾಹುಲ್ ಗಾಂಧಿ ದೇಶದ ತಾಯಂದಿರ ಕ್ಷಮೆ ಕೇಳಲು ಆಗ್ರಹ : ರಾಜು ಕುರುಡಗಿ
ಗದಗ, 03 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿಹಾರದಲ್ಲಿ ನಡೆಸಿದ್ದ ಓಟರ್ ಅಧಿಕಾರ ಯಾತ್ರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಎನ್ನಲಾದ ವ್ಯಕ್ತಿಯೊಬ್ಬ ಮೋದಿರವರ ತಾಯಿಯ ವಿರುದ್ಧ ಅವಾಚ್ಯ ಪದಗಳಲ್ಲಿ ನಿಂದಿಸಿದ್ದು, ರಾಹುಲ್ ಗಾಂಧಿ ಸಮ್ಮುಖದಲ್ಲಿ ನಡೆದ ಘಟನೆಯಾಗಿದೆ. ಇತ್ತ
ಪೋಟೋ


ಗದಗ, 03 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿಹಾರದಲ್ಲಿ ನಡೆಸಿದ್ದ ಓಟರ್ ಅಧಿಕಾರ ಯಾತ್ರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಎನ್ನಲಾದ ವ್ಯಕ್ತಿಯೊಬ್ಬ ಮೋದಿರವರ ತಾಯಿಯ ವಿರುದ್ಧ ಅವಾಚ್ಯ ಪದಗಳಲ್ಲಿ ನಿಂದಿಸಿದ್ದು, ರಾಹುಲ್ ಗಾಂಧಿ ಸಮ್ಮುಖದಲ್ಲಿ ನಡೆದ ಘಟನೆಯಾಗಿದೆ.

ಇತ್ತಿಚೆಗೆ ರಾಹುಲ್ ಗಾಂಧಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಾ ದೇಶದ ಜನರ ಎದುರು ಸಣ್ಣವರಾಗಿ ವರ್ತಿಸುತ್ತಿದ್ದು ಇದು ಮುಂದುವರೆದು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀಯವರ ಮಾತೃ ಹೃದಯಿಗೆ ಅವಹೇಳನವಾಗಿ ಮಾತನಾಡಿರುವದು ಇವರ ನೀಚ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅವರಿಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ವಿಶ್ವವೇ ಕೊಂಡಾಡುತ್ತಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳು ದೇಶ ಅಭಿವೃದ್ಧಿ, ದೇಶದ ಪ್ರಗತಿ ಮೋದಿಜಿ ಆಳ್ವಿಕೆಯಲ್ಲಿ ಭಾರತ ಇವತ್ತು ಸ್ವಾವಲಂಬಿ ದೇಶವಾಗಿ, ರಫ್ತು ದೇಶವಾಗಿ, ಆರ್ಥಿಕ ಸದೃಢ ದೇಶವಾಗಿ ಬಲಿಷ್ಠವಾಗಿದ್ದು ಇದನ್ನು ಸಹಿಸಲಾರದ ಸಣ್ಣ ಹುಡುಗನಂತೆ ವರ್ತಿಸುತ್ತಿರುವ ರಾಹುಲ್ ಗಾಂಧಿ ನಿಂದಿಸಿದ್ದು ಮೋದಿಜೀರವರ ತಾಯಿಗಷ್ಟೆ ಅಲ್ಲಾ, ಈ ಅವಮಾನ ಇಡೀ ದೇಶದ ತಾಯಿಂದರಿಗೆ ಹಾಗು ಎಲ್ಲ ಹೆಣ್ಣು ಮಕ್ಕಳಿಗೆ ನಿಂದಿಸಿದಂತೆ. ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲದ ಪ್ರಧಾನಿಯವರ ತಾಯಿಯನ್ನು ಕಾಂಗ್ರೆಸ್ ವೇದಿಕೆಯಲ್ಲಿ ನಿಂದಿಸಿದ್ದು ದುಃಖಕರ.

ರಾಹುಲ್ ಗಾಂಧಿ ಯಾವ ಮನಸ್ಥೀತಿಯಲ್ಲಿದ್ದಾರೆ ಎಂದು ಜನರು ಇವತ್ತು ದೇಶದಲ್ಲಿ ಕಾಂಗ್ರೆಸಿಗರನ್ನು ತೀರಸ್ಕರಿಸಿ ದೇಶದಲ್ಲಿ ಕಾಂಗ್ರೆಸ್‌ ಸ್ಥಿತಿ ಹೀನಾಯವಾಗಿದೆ.

ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಈ ಸ್ಥಿತಿ ಕಾಂಗ್ರೆಸ್‌ ಸಂಸ್ಕೃತಿ ಸಿಗಲಿದೆ. ತಕ್ಷಣ ರಾಹುಲ್ ಗಾಂಧಿ ದೇಶದ ಎಲ್ಲ ಮಹಿಳಾ ತಾಯಿಂದಿರ ಕ್ಷಮೆ ಕೇಳಬೇಕು ಇಲ್ಲವಾದರೆ ತಾಯಿಂದರ ನಿಂದನಾ ಶಾಪ ರಾಹುಲ್ ಗಾಂಧಿಗೆ ತಟ್ಟಲಿದೆ ಎಂದು ರಾಜು ಕುರುಡಗಿರವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande