ಬೆಳೆ ಹಾನಿ ; ಜಿಲ್ಲಾಧಿಕಾರಿ ಪರಿಶೀಲನೆ
ವಿಜಯಪುರ, 03 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆಯಿಂದ ಹಾನಿಗೊಳಗಾದ ತೊಗರಿ, ಹೆಸರು, ಸೂರ್ಯಕ್ರಾಂತಿ, ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳ ಹಾನಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಭೇಟಿ ನೀಡಿ ಪರಿಶೀಲಿಸಿದರು.
ಮಳೆ


ವಿಜಯಪುರ, 03 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆಯಿಂದ ಹಾನಿಗೊಳಗಾದ ತೊಗರಿ, ಹೆಸರು, ಸೂರ್ಯಕ್ರಾಂತಿ, ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳ ಹಾನಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಮಂಗಳವಾರ ಹುನಗುಂದ ತಾಲೂಕಿನ ರಕ್ಕಸಗಿ, ಬೇವಿನಮಟ್ಟಿ, ಹಿರೇಬಾದವಾಡಗಿ, ಹಿರೇಯರಣಕೇರಿ, ರಾಮತಾಳ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ವಿವಿಧ ಬೆಳೆಗಳನ್ನು ವೀಕ್ಷಣೆ ಮಾಡಿದರು. ಪ್ರಸ್ತುತ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳು ಬಹಳ ಸೂಕ್ಷö್ಮ ಬೆಳೆಗಳಾಗಿದ್ದು, ಹೆಚ್ಚಿನ ತೇವಾಂಶದಿ0ದ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿ ಬೇರುಗಳಲ್ಲಿ ಕೊಳೆ ಬರಲು ಪ್ರಾರಂಭವಾಗಿದ್ದು, ಇದೇ ರೀತಿ ಮಳೆ ಮುಂದುವರೆದರೆ ಹೆಚ್ಚಿನ ಹಾನಿ ಉಂಟಾಗಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟರು.

ಕೃಷಿ ಬೆಳೆಗಳಾದ ಸೂರ್ಯಕಾಂತಿ, ತೊಗರಿ ಹಾಗೂ ಹೆಸರು ಬೆಳೆಗಳು ಮಳೆಗೆ ಹಾನಿಯಾಗಿದ್ದು, ಹೆಚ್ಚಿನ ಮಳೆಯಿಂದ ಸೂರ್ಯಕಾಂತಿಯಲ್ಲಿ ಕಾಳು ಕಟ್ಟದೆ ಇರುವುದು ಮತ್ತು ಹೆಸರು ಬೆಳೆಯಲ್ಲಿ ಕೊಯ್ಲು ಮಾಡಲು ಸಹ ಮಳೆ ಬಿಡುತ್ತಿಲ್ಲವೆಂದು ಸ್ಥಳೀಯ ರೈತರು ಹಾಗೂ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಸಂಬ0ಧಿಸಿದ0ತೆ ವಿಜ್ಞಾನಿಗಳು ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ರೀತಿಯಲ್ಲಿ ಬೆಳೆಯನ್ನು ವೀಕ್ಷಿಸಿ ಮುಂಬರುವ ದಿನಗಳಲ್ಲಿ ರೈತರಿಗೆ ಅವಶ್ಯವಿರುವ ಮಾಹಿತಿಯನ್ನು ನೀಡಲು ತಿಳಿಸಿದರು. ಈಗಾಗಲೇ ಹಾನಿಗೊಳಗಾದ ಬೆಳೆಗಳ ಕುರಿತು ಸಮಗ್ರ ಮಾಹಿತಿ ನೀಡಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಹಿರೇಬಾದವಾಡಗಿ ಗ್ರಾಮದ ಮಹಾಂತವ್ವ ಮೇಟಿ ಸ.ನಂ೩೬/೨ರಲ್ಲಿ ಬೆಳೆಯಲಾದ ಮೆಣಸಿನಕಾಯಿ ಬೆಳೆ ಹಾನಿ ವೀಕ್ಷಿಸಿದರು. ಅದೇ ರೀತಿ ಶರಣಪ್ಪ ರೇವಡಿ ಜಮೀನಿನಲ್ಲಿ ಬೆಳೆದ ಈರುಳ್ಳಿ, ಮೆಣಸಿನಕಾಯಿ, ಬೇವಿನಮಟ್ಟಿ ಗ್ರಾಮದ ಸಂಗಪ್ಪ ಮಹಾಂತಪ್ಪನವ, ವೀರಭದ್ರಪ್ಪ ಅಕ್ಕಿ, ಶಿವುಪುತ್ರಪ್ಪ ಹೊನವಾಡ, ಹಿರೇಯರನಕೇರಿ ಗ್ರಾಮದ ಸಿದ್ದಲಿಂಗಪ್ಪ ಹಡಗಲಿ ಅವರ ಜಮೀನಲ್ಲಿ ಬೆಳೆದ ಈರುಳ್ಳಿ, ರಾಮಥಾಳ ಗ್ರಾಮದ ಕಸ್ತೂರೆವ್ವ ಸೀಮಿಕೇರಿ, ಭೀಮರಾಯಪ್ಪ ಹುಗ್ಗಿ ಅವರ ಜಮೀನಿನಲ್ಲಿ ಬೆಳೆದ ತೊಗರಿ, ಬಸವರಾಜ ಕೊಪ್ಪದ ಬೆಳೆದ ಸೂರ್ಯಕ್ರಾಂತಿ ಬೆಳೆ ಹಾನಿಯನ್ನು ವೀಕ್ಷಿಸಲಾಯಿತು.

ಬೇವಿನಮಟ್ಟಿ ಗ್ರಾಮದ ಚಂದ್ರಶೇಖರ ಹಳ್ಳೂರ, ಬಸಪ್ಪ ಸೂಳೇಭಾವಿ, ಮಹಾಂತಗೌಡ ದೊಡಮನಿ, ರಮೇಶ ಸುಂಕದ, ಪ್ರಶಾಂತ ತನಹಳ್ಳಿ, ಹಿರೇಬಾದವಾಡಗಿ ಗ್ರಾಮದ ಬಸವಣೆಪ್ಪ ಹಳ್ಳೂರ, ಸಾವಿತ್ರಮ್ಮ ತುಂಬರಮಟ್ಟಿ, ಹುನಗುಂದನ ಅಮರಪ್ಪ ಹಕಾರಿ, ಗಂಗಮ್ಮ ತೋಟಗೇರ ಬೆಳೆದ ತೊಗರಿ ಬೆಳೆ ಹಾನಿಯನ್ನು ವೀಕ್ಷಣೆ ಮಾಡಿದರು. ಈಗಾಗಲೇ ಕ್ಷೇತ್ರ ಮಟ್ಟದಲ್ಲಿ ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಗ್ರಾಮ ಅಭಿವೃದ್ದಿ ಅಧಿಕಾರಿಗಳ ಜಂಟಿ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಭೇಟಿ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಲಕ್ಷö್ಮಣ ಕಳ್ಳೇನ್ನವರ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟಿ, ಕೃಷಿ ಉಪನಿರ್ದೇಶಕ ಎಲ್.ಐ.ರೂಢಗಿ, ಸಹಾಯಕ ಕೃಷಿ ನಿರ್ದೇಶಕ ಸೋಮಲಿಂಗಪ್ಪ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಸುಭಾಷ ಸುಲ್ಪಿ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವಿಜ್ಞಾನಿಗಳಾದ ಡಾ.ಶಶಿಕಾಂತ, ಡಾ.ಸತ್ಯನಾರಾಯಣ ಸಿ, ನೂರುಲ್ಲ ಹಾವೇರಿ ಸೇರಿದಂತೆ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande