ಬಳ್ಳಾರಿ, 03 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪೈಗಂಬರ್ ಮಹಮ್ಮದ್ ಅವರ ನ್ಯಾಯ ಮತ್ತು ಮಾನವೀಯತೆಯ ಸಂದೇಶಗಳನ್ನು ನಾಡಿನ ಜನತೆಗೆ ತಿಳಿಸುವ ನಿಟ್ಟಿನಲ್ಲಿ ಹಾಗೂ ಪೈಗಂಬರ್ ಮಹಮ್ಮದ್ ಅವರ ಕುರಿತಾಗಿ ಇರುವ ತಪ್ಪು ಕಲ್ಪನೆಗಳನ್ನು ನಿವಾರಣೆ ಮಾಡಿ ಧರ್ಮ ಸಹಿಷ್ಣುತೆಯನ್ನು ಬೆಳೆಸಲಿಕ್ಕಾಗಿ ಸೆಪ್ಟಂಬರ್ 03 ರಿಂದ ಸೆಪ್ಟಂಬರ್ 14ರವರೆಗೆ `ಸೀರತ್ ಅಭಿಯಾನ'ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕದ ಜಮಾ ಅತೆ ಇಸ್ಲಾಮಿ ಹಿಂದ್‍ನ ಮುಖಂಡ ನಾಸಿರುದ್ದೀನ್ ಅವರು ತಿಳಿಸಿದ್ದಾರೆ.
ಅಭಿಯಾನದ ಅಂಗವಾಗಿ ಶಾಂತಿ ಪ್ರಕಾಶನ ಪ್ರಕಟಿಸಿರುವ `ಪೈಗಂಬರರ ಬದುಕು ಮತ್ತು ಸಂದೇಶಗಳ ಕುರಿತು ಬೆಳಕು ಚೆಲ್ಲುವ ಭಾರತೀಯ ಸಮಾಜದಲ್ಲಿ ಪ್ರವಾದಿ ಮಹಮ್ಮದರ (ಸ) ಆದರ್ಶದ ಔಚಿತ್ಯ ಮತ್ತು ಪ್ರವಾದಿ ಮಹಮ್ಮದ್ (ಸ) ಅರಿಯಿರಿ' ಪುಸ್ತಕಗಳನ್ನು ಪತ್ರಿಕಾ ಭವನದಲ್ಲಿ ಬುಧವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
`ಸೀರತ್ ಅಭಿಯಾನ'ದ ಅಂಗವಾಗಿ ವಿವಿಧ ಸಮುದಾಯದ ಪ್ರಮುಖ ವ್ಯಕ್ತಿಗಳು, ಸಂಸ್ಥೆಗಳ, ಸಂಘಟನೆಗಳೊಂದಿಗೆ ಸಭೆಗಳು. ಗ್ರಾಮ ಸಭೆಗಳು, ವಾರ್ಡ್‍ವಾರು ಸಭೆಗಳನ್ನು ನಡೆಸಲಾಗುತ್ತಿದೆ. ಬಳ್ಳಾರಿ ತಾಲೂಕಿನ ಕೆ.ವೀರಾಪುರ ಹಾಗು ಚಾಲಿಬೆಂಚಿ ಗ್ರಾಮಗಳಲ್ಲಿ ಪೈಗಂಬರರ ಜೀವನ ಕುರಿತು ಪ್ರವಚನಗಳನ್ನು ನಡೆಸಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ. ಆಸ್ಪತ್ರೆ, ವೃದ್ಧಾಶ್ರಮ, ಅನಾಥಶ್ರಮಗಳ ಭೇಟಿ, ಪಾರ್ಕ್‍ನಲ್ಲಿ ಸ್ವಚ್ಛತಾ ಕಾರ್ಯ, ಸೆಪ್ಟಂಬರ್ 28 ರಂದು ಸಂಜೆ-6.30ಕ್ಕೆ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸಮಾರೋಪ. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.
ಜಮಾ ಅತೆ ಇಸ್ಲಾಮಿ ಹಿಂದ್, ಸ್ಥಾನೀಯ ಘಟಕದ ಅಧ್ಯಕ್ಷ ಸೈಯ್ಯದ್ ನಿಜಾಮುದ್ದೀನ್, ವೀರಶೈವ ಮುಖಂಡರಾದ ಸಿರಿಗೇರಿ ಪನ್ನರಾಜ್, ಗಂಗಾವತಿ ವೀರೇಶ್, ಕ.ಮ. ರವಿಶಂಕರ್, ಶಂಕರ್ ಜೀರಂಕಳಿ ಇನ್ನಿತರರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್