ಮತ್ಸ್ಯಾಶ್ರಯ ಯೋಜನೆ : ಮೀನುಗಾರರಿಗೆ ಮನೆ ನಿರ್ಮಾಣ ಸಹಾಯಧನ
ಗಂಗಾವತಿ, 03 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಗಂಗಾವತಿ ಮೀನುಗಾರಿಕ ಇಲಾಖೆಯಿಂದ 2024-25ನೇ ಸಾಲಿನ ಮತ್ಸ್ಯಾಶ್ರಯ ಯೋಜನೆಯಡಿ ನಿರ್ವಸತಿ ಮೀನುಗಾರರಿಗೆ ಮನೆ ನಿರ್ಮಾಣಕ್ಕೆ ನೀಡಲಾಗುವ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಮತ್ಸ್ಯಾಶ್ರಯ ಯೋಜನೆಯಡಿ ಕನಕಗಿರಿ ವಿಧಾನ ಸಭಾ ಕ್ಷೇತ್ರಕ್ಕೆ ಸಾಮ
ಮತ್ಸ್ಯಾಶ್ರಯ ಯೋಜನೆ : ಮೀನುಗಾರರಿಗೆ ಮನೆ ನಿರ್ಮಾಣ ಸಹಾಯಧನ


ಗಂಗಾವತಿ, 03 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಗಂಗಾವತಿ ಮೀನುಗಾರಿಕ ಇಲಾಖೆಯಿಂದ 2024-25ನೇ ಸಾಲಿನ ಮತ್ಸ್ಯಾಶ್ರಯ ಯೋಜನೆಯಡಿ ನಿರ್ವಸತಿ ಮೀನುಗಾರರಿಗೆ ಮನೆ ನಿರ್ಮಾಣಕ್ಕೆ ನೀಡಲಾಗುವ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಮತ್ಸ್ಯಾಶ್ರಯ ಯೋಜನೆಯಡಿ ಕನಕಗಿರಿ ವಿಧಾನ ಸಭಾ ಕ್ಷೇತ್ರಕ್ಕೆ ಸಾಮಾನ್ಯ ವರ್ಗ-38, ಪರಿಶಿಷ್ಟ ಜಾತಿ-9, ಪರಿಶಿಷ್ಟ ಪಂಗಡ-3 ಒಟ್ಟು 50 ಮನೆಗಳು ಹಂಚಿಕೆಯಾಗಿದ್ದು, ಕನಕಗಿರಿ ಮತ್ತು ಕಾರಟಗಿ ತಾಲೂಕಿನ ಮೀನುಗಾರರ ಸಹಕಾರ ಸಂಘಗಳ ಸದಸ್ಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಈ ಯೋಜನೆಯಡಿ ನಿರ್ವಸತಿ ಮೀನುಗಾರರಿಗೆ ಮನೆಗಳನ್ನು ನಿರ್ಮಿಸಿಕೊಳ್ಳಲು ಸಹಾಯಧನ ವಿತರಿಸಲಾಗುತ್ತಿದ್ದು, ನಿರ್ವಸತಿ ಮೀನುಗಾರರು ಸೆಪ್ಟೆಂಬರ್ 15 ರೊಳಗಾಗಿ ಗಂಗಾವತಿ ಮೀನುಗಾರಿಕೆ ಸಹಾಯಕ ನಿರ್ದೇಶಕರಲ್ಲಿಗೆ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸುವಂತೆ ಗಂಗಾವತಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande