ರುಚಿಗೂ ಆರೋಗ್ಯಕ್ಕೂ ಹೊಸ ತಿನಿಸು : ಕುಂಬಳಕಾಯಿ ದೋಸೆ
ಹುಬ್ಬಳ್ಳಿ, 03 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ದೋಸೆ ಎಂದರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಿನ ತಿನಿಸು. ಸಾಮಾನ್ಯವಾಗಿ ಖಾಲಿ ದೋಸೆ, ಸೆಟ್ ದೋಸೆ, ಮಸಾಲೆ ದೋಸೆಗಳು ಹೆಚ್ಚು ಜನಪ್ರಿಯ. ಆದರೆ ಇತ್ತೀಚೆಗೆ ಆರೋಗ್ಯದತ್ತ ಹೆಚ್ಚು ಒತ್ತು ನೀಡುತ್ತಿರುವ ಜನರು ವಿಭಿನ್ನ ರೀತಿಯ ದೋಸೆಗಳನ್ನು ಪ್ರಯತ್ನಿಸುತ್
Pumpkin Dosa


ಹುಬ್ಬಳ್ಳಿ, 03 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ದೋಸೆ ಎಂದರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಿನ ತಿನಿಸು. ಸಾಮಾನ್ಯವಾಗಿ ಖಾಲಿ ದೋಸೆ, ಸೆಟ್ ದೋಸೆ, ಮಸಾಲೆ ದೋಸೆಗಳು ಹೆಚ್ಚು ಜನಪ್ರಿಯ. ಆದರೆ ಇತ್ತೀಚೆಗೆ ಆರೋಗ್ಯದತ್ತ ಹೆಚ್ಚು ಒತ್ತು ನೀಡುತ್ತಿರುವ ಜನರು ವಿಭಿನ್ನ ರೀತಿಯ ದೋಸೆಗಳನ್ನು ಪ್ರಯತ್ನಿಸುತ್ತಿದ್ದಾರೆ. ಅದರಲ್ಲೇ ಒಂದು ಹೊಸ ತಿನಿಸು ಎಂದರೆ ಕುಂಬಳಕಾಯಿ ದೋಸೆ.

ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿರುವ ಕುಂಬಳಕಾಯಿಯನ್ನು ದೋಸೆ ರೂಪದಲ್ಲಿ ಸೇವಿಸುವುದರಿಂದ ಮಕ್ಕಳಿಂದ ಹಿರಿಯರ ತನಕ ಎಲ್ಲರಿಗೂ ಇಷ್ಟವಾಗುತ್ತದೆ. ಕುಂಬಳಕಾಯಿಯಲ್ಲಿ ವಿಟಮಿನ್ A, C, ಫೈಬರ್ ಹಾಗೂ ಆಂಟಿ-ಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು, ದೇಹಕ್ಕೆ ಶಕ್ತಿಯ ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ದೋಸೆ ತಯಾರಿಸುವ ವಿಧಾನ:

ಅಕ್ಕಿಯನ್ನು ಮೂರು ಗಂಟೆಗಳ ಕಾಲ ನೆನೆಸಿಟ್ಟ ಬಳಿಕ ರುಬ್ಬಿ. ಕುಂಬಳಕಾಯಿ, ತೆಂಗಿನ ತುರಿ, ಶುಂಠಿ, ಕರಿಬೇವು ಹಾಗೂ ಒಣಮೆಣಸಿನಕಾಯಿ ಹಾಕಿ ಪೇಸ್ಟ್ ಮಾಡಿ. ನಂತರ ಇದನ್ನು ಅಕ್ಕಿ ಹಿಟ್ಟಿಗೆ ಸೇರಿಸಿ ಉಪ್ಪು ಹಾಕಿ ಮಿಶ್ರಣ ಮಾಡಬೇಕು. ಬಿಸಿ ತವೆಯ ಮೇಲೆ ಹಾಯಿಸಿ ಬೇಯಿಸಿದ ಬಳಿಕ ಸ್ವಲ್ಪ ತುಪ್ಪ ಸವರಿದರೆ ಗರಿಗರಿಯಾದ ಕುಂಬಳಕಾಯಿ ದೋಸೆ ಸವಿಯಲು ಸಿದ್ಧವಾಗುತ್ತದೆ.

ಪರಂಪರಾಗತ ದೋಸೆಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿ ಹಣ್ಣು-ತರಕಾರಿ ಸೇರಿಸುವುದರಿಂದ ರುಚಿಯ ಜೊತೆಗೆ ಪೌಷ್ಠಿಕ ಮೌಲ್ಯ ಹೆಚ್ಚುತ್ತದೆ. ಕುಂಬಳಕಾಯಿ ದೋಸೆ ಅದರ ಉತ್ತಮ ಉದಾಹರಣೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande