ನವದೆಹಲಿ, 29 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬಿಹಾರಕ್ಕೆ ಮೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ಹಾಗೂ ನಾಲ್ಕು ಪ್ಯಾಸೆಂಜರ್ ರೈಲುಗಳಿಗೆ ಚಾಲನೆ ನೀಡಿದರು.
ದರ್ಭಂಗಾ–ಅಜ್ಮೀರ್, ಮುಜಫರ್ಪುರ್–ಹೈದರಾಬಾದ್ ಮತ್ತು ಛಪ್ರಾ–ದೆಹಲಿ ಮಾರ್ಗಗಳಲ್ಲಿ ಅಮೃತ್ ಭಾರತ್ ರೈಲುಗಳು ಸಂಚರಿಸಲಿದ್ದು, ಬಿಹಾರದ ದಕ್ಷಿಣ ಭಾರತದೊಂದಿಗೆ ನೇರ ಸಂಪರ್ಕ ಸಾಧಿಸಲಿವೆ.
ಪಾಟ್ನಾ–ಬಕ್ಸರ್, ಝಾಝಾ–ದಾನಾಪುರ, ಪಾಟ್ನಾ–ಇಸ್ಲಾಂಪುರ್ ಮತ್ತು ನವಾಡಾ–ಪಾಟ್ನಾ ಹೊಸ ಪ್ಯಾಸೆಂಜರ್ ರೈಲುಗಳೂ ಚಾಲನೆ ಪಡೆದಿವೆ. ರೈಲುಗಳಲ್ಲಿ ಆಧುನಿಕ ಭದ್ರತಾ ಸೌಲಭ್ಯಗಳನ್ನು ಅಳವಡಿಸಲಾಗಿದ್ದು, ಬಿಹಾರದ ರೈಲ್ವೆ ಬಜೆಟ್ ₹10,000 ಕೋಟಿಗೆ ಏರಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ₹1 ಲಕ್ಷ ಕೋಟಿ ಮೌಲ್ಯದ ಯೋಜನೆಗಳು ಜಾರಿಯಲ್ಲಿವೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa