2,96,230 ರೂ. ಮೌಲ್ಯದ ಗಾಂಜಾ ವಿಲೇವಾರಿ
ನಿರೀಕ್ಷಕ
2,96,230 ರೂ. ಮೌಲ್ಯದ ಗಾಂಜಾ ವಿಲೇವಾರಿ


2,96,230 ರೂ. ಮೌಲ್ಯದ ಗಾಂಜಾ ವಿಲೇವಾರಿ


ರಾಯಚೂರು, 29 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ನಗರದ ಠಾಣೆಗಳಲ್ಲಿ ಜಪ್ತಿ ಮಾಡಿದ್ದ 2,96,230 ರೂ.ಗಳ ಮೌಲ್ಯದ 7 ಕೆಜಿ 101 ಗ್ರಾಂ ಗಾಂಜಾವನ್ನು ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾ ನಿರೀಕ್ಷಕರು, ಕರ್ನಾಟಕ ರಾಜ್ಯ, ಬೆಂಗಳೂರು ಅವರ ಸೂಚನೆಯ ಮೇರೆಗೆ ನಗರದ ಯಕ್ಲಾಸಪುರ ರಸ್ತೆಯಲ್ಲಿರುವ ವೈದ್ಯಕೀಯ ತಾಜ್ಯ ವಿಲೇವಾರಿ ಘಟಕದಲ್ಲಿ ಸೆ.26ರಂದು ವಿಲೇವಾರಿ ಮಾಡಲಾಯಿತು.

2023ನೇ ಹಾಗೂ 2025ನೇ ಸಾಲಿನಲ್ಲಿ ವರದಿಯಾದ ಒಟ್ಟು 12 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಗಾಂಜಾವನ್ನು ಮಾದಕ ವಸ್ತು ವಿಲೇವಾರಿ ಸಮಿತಿಯ ಅಧ್ಯಕ್ಷರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ ಪುಟ್ಟಮಾದಯ್ಯ ಅವರ ನೇತೃತ್ವದಲ್ಲಿ ವಿಲೇವಾರಿ ಮಾಡಲಾಯಿತು.

ರಾಯಚೂರು ಪಶ್ಚಿಮ ಠಾಣೆ, ಯರಗೇರಾ ಪೊಲೀಸ್ ಠಾಣೆ, ಬಳಗಾನೂರು ಪೊಲೀಸ್ ಠಾಣೆ, ಇಡಪನೂರು ಪೊಲೀಸ್ ಠಾಣೆ, ಸಿರವಾರ ಪೊಲೀಸ್ ಠಾಣೆ, ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ, ನೇತಾಜಿನಗರ ಪೊಲೀಸ್ ಠಾಣೆ, ರಾಯಚೂರು ಗ್ರಾಮೀಣ ಠಾಣೆಗಳಲ್ಲಿ ಈ ಗಾಂಜಾವನ್ನು ಜಪ್ತಿ ಮಾಡಲಾಗಿತ್ತು.

ರಾಯಚೂರು ಉಪ ವಿಭಾಗದ ಡಿ.ಎಸ್.ಪಿ ಆಗಿರುವ ಸಮಿತಿಯ ಸದಸ್ಯರಾದ ಶಾಂತವೀರ, ಸಿ.ಇ.ಎನ್ ಪೊಲೀಸ್ ಠಾಣೆಯ ಡಿಎಸ್‍ಪಿ ವೆಂಕಟೇಶ, ಆರ್‍ಐಎಮ್‍ಎಸಿಟಿ ಅಧ್ಯಕ್ಷರಾದ ಡಾ.ಶ್ರೀಶೈಲೇಶ್ ಅಮರಖೇಡ್, ಟೆಕ್ನಿಕಲ್ ಆಫೀಸರ್ ಜಯಕುಮಾರ, ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಪರಿಸರ ಅಧಿಕಾರಿ ಗಿರೀಶ್, ಡಿಸಿಆರ್‍ಬಿ ಘಟಕದ ಪೊಲೀಸ್ ಇನ್ಸಪೆಕ್ಟರ್ ತಿಮ್ಮಣ್ಣ. ಎಸ್., ಡಿಸಿಆರ್‍ಬಿ ಘಟಕದ ಪಿ.ಎಸ್.ಐ ಶಾರದಾ, ಅಬಕಾರಿ ಅಧೀಕ್ಷಕರು ಚಂದ್ರಶೇಖರ, ಅರಣ್ಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ರಾಮಯ್ಯ ಇವರ ಸಮಕ್ಷಮದಲ್ಲಿ ನಗರದ ಯಕ್ಲಾಸಪುರ ರಸ್ತೆಯಲ್ಲಿರುವ ವೈದ್ಯಕೀಯ ತಾಜ್ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande