ಕಾನೂನು ಸೇವೆಗಳ ಪ್ರಾಧಿಕಾರದಿಂದ ಛಾಯಾಚಿತ್ರ, ವರ್ಣಚಿತ್ರ, ವಿಡಿಯೋಗಳ ಆಹ್ವಾನ
ಹೊಸಪೇಟೆ, 29 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ಕಾನೂನು ಸೇವೆಗಳ ದಿನದ ಸ್ಮರಣಾರ್ಥ ಎಲ್ಲಾರಿಗೂ ನ್ಯಾಯ ಕಾನೂನು ನೆರವಿನ ಲೆನ್ಸ್ ಮೂಲಕ ಎಂಬ ಶೀರ್ಷಿಕೆಯ ರಾಷ್ಟ್ರೀಯ ಛಾಯಾಗ್ರಹಣ ಮತ್ತು ಕಲಾ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇ
ಕಾನೂನು ಸೇವೆಗಳ ಪ್ರಾಧಿಕಾರದಿಂದ ಛಾಯಾಚಿತ್ರ, ವರ್ಣಚಿತ್ರ, ವಿಡಿಯೋಗಳ ಆಹ್ವಾನ


ಹೊಸಪೇಟೆ, 29 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ಕಾನೂನು ಸೇವೆಗಳ ದಿನದ ಸ್ಮರಣಾರ್ಥ ಎಲ್ಲಾರಿಗೂ ನ್ಯಾಯ ಕಾನೂನು ನೆರವಿನ ಲೆನ್ಸ್ ಮೂಲಕ ಎಂಬ ಶೀರ್ಷಿಕೆಯ ರಾಷ್ಟ್ರೀಯ ಛಾಯಾಗ್ರಹಣ ಮತ್ತು ಕಲಾ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್ ಎನ್.ಹೊಸಮನೆ ತಿಳಿಸಿದ್ದಾರೆ.

ನವದೆಹಲಿಯಲ್ಲಿ ನವೆಂಬರ್ 08 ಮತ್ತು 09 ರಂದು ರಾಷ್ಟ್ರೀಯ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಕಾನೂನು ನೆರವು ವೃತ್ತಿಪರರು, ಕಾನೂನು ಸಮುದಾಯದ ಸದಸ್ಯರು, ವಿದ್ಯಾರ್ಥಿಗಳು, ಪ್ಯಾರಾ ಲೀಗಲ್ ಸ್ವಯಂ ಸೇವಕರು ಮತ್ತು ಸಾರ್ವಜನಿಕರಿಂದ ದೈನಂದಿನ ಹೋರಾಟಗಳು, ದಿಟ್ಟತನ ಮತ್ತು ಕಾನೂನು ಸಹಾಯದಿಂದ ಸಕ್ರಿಯಗೊಳಿಸಲಾದ ಸಬಲೀಕರಣದ ಕಥೆಗಳನ್ನು ಬಿಂಬಿಸುವ ಛಾಯಾಚಿತ್ರಗಳು, ವರ್ಣಚಿತ್ರಗಳು, ರೇಖಾ ಚಿತ್ರಗಳು ಮತ್ತು ವಿಡೀಯೋಗಳನ್ನು (ಗರಿಷ್ಟ ಅವಧಿ 1 ನಿಮಿಷ) ಅಹ್ವಾನಿಸಲಾಗಿದೆ. ಪ್ರಾಧಿಕಾರಕ್ಕೆ ಅಕ್ಟೋಬರ್ 10 ರೊಳಗಾಗಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande