ವಿಜಯಪುರ, 29 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುವಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಶೆಡ್ಡ್‌ನಲ್ಲಿ ನಡೆದಿದೆ.
ಗಫೂರ ಮೋಮಿನ, ಮಲ್ಲಪ್ಪ ಬಬಲೇಶ್ವರ, ಉಮರ ಮೋಮಿನ ಬಂಧಿತ ಆರೋಪಿಗಳು. ಇನ್ನು ಬಂಧಿತ ಆರೋಪಿಗಳಿಂದ 4 ಗೃಹ ಬಳಕೆಯ ತುಂಬಿದ ಸಿಲಿಂಡರ್, 23 ಖಾಲಿ ಗೃಹ ಬಳಕೆಯ ಸಿಲಿಂಡರ್, ಒಂದು ಯಂತ್ರ, ಒಂದು ರೀಫಿಲ್ಲಿಂಗ್ ಮಷಿನ್‌ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕುರಿತು ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande