ಬೆಂಗಳೂರು, 29 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಹೃದಯಾಘಾತಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಹಲವರ ಹೃದಯ ಮಿಡಿತವನ್ನ ಜೀವಂತವಾಗಿರುಸುವಲ್ಲಿ ಯಶಸ್ವಿಯಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಯೋಜನೆ ಮುಖಾಂತರ ಇಲ್ಲಿಯ ವರೆಗು 9,21,020 ಜನರ ಇಸಿಜಿ ತೆಗೆಯಲಾಗಿದೆ. ಸುಮಾರು 13515 STEMI ಪ್ರಕರಣಗಳು ಕಂಡುಬಂದಿದ್ದು, Thrombolysis , Angioplasty, Stent & CABG ಸೇರಿದಂತೆ ಹೃದಯ ಸಮಸ್ಯೆ ಇರುವ 7815 ಜನರು ಚಿಕಿತ್ಸೆ ಪಡೆದುಕೊಂಡಿದ್ದಾರೆ.
ವಿಶೇಷವಾಗಿ ಟೆನೆಕ್ಟೇಪ್ಲೇಸ್ ಚುಚ್ಚುಮದ್ದು ನೀಡುವ ಮೂಲಕ 1106 ಜನರಿಗೆ ಹಠಾತ್ ಹೃದಯಾಘಾತ ಆಗುವುದನ್ನ ತಪ್ಪಿಸಲಾಗಿದೆ. ಸಹಸ್ರಾರು ಜನರ ಜೀವ ಉಳಿಸುವಲ್ಲಿ ಹೃದಯ ಜ್ಯೋತಿ ಯೋಜನೆ ಯಶಸ್ವಿಯಾಗಿದ್ದು, ವಿಶ್ವ ಹೃದಯ ದಿನಾಚರಣೆಯ ಈ ಸಂದರ್ಭದಲ್ಲಿ, ಯೋಜನೆಯನ್ನು ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಿಸಲಾಗುತ್ತಿದೆ ಎಂಬುದನ್ನು ತಿಳಿಸಲು ಬಯಸುತ್ತೇನೆ. ಯಾರಿಗೆ ಎದುನೋವು ಕಾಣಿಸಿಕೊಂಡರು ನಿರ್ಲಕ್ಷ್ಯೆ ಮಾಡದೇ ಹೃದಯ ಜ್ಯೋತಿ ಯೋಜನೆಯಡಿ ಉಚಿತ ತಪಾಸಣೆ ಮಾಡಿಸಿಕೊಂಡು, ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa