ವೇತನಕ್ಕಾಗಿ ಆಗ್ರಹಿಸಿ ನೌಕರರ ಪ್ರತಿಭಟನೆ
ವಿಜಯಪುರ, 29 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ನೌಕರರ ಸಂಬಳ ನೀಡುವಂತೆ ಆಗ್ರಹಿಸಿ ವಿಜಯಪುರ ನಗರದ ಜಿಲ್ಲಾಡಳಿತ ಕಚೇರಿಯ ಎದುರು ಪ್ರಭಂಜನ್ ಗಾರ್ಮೆಂಟ್ಸ್‌ನ ನೌಕರರು ಪ್ರತಿಭಟನೆ ನಡೆಸಿದರು. ಪ್ರಭಂಜನ್ ಗಾರ್ಮೆಂಟ್ಸ್‌ನ ನೌಕರರಿಗೆ ಕಳೆದ ಐದು ತಿಂಗಳಿಂದ ಮಾಲೀಕರಾದ ಕ್ರಾಂತಿಕಿರಣ ಚೌಡಪ್ಪ, ರಾಘವೇಂದ್ರ
ಪ್ರತಿಭಟನೆ


ವಿಜಯಪುರ, 29 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ನೌಕರರ ಸಂಬಳ ನೀಡುವಂತೆ ಆಗ್ರಹಿಸಿ ವಿಜಯಪುರ ನಗರದ ಜಿಲ್ಲಾಡಳಿತ ಕಚೇರಿಯ ಎದುರು ಪ್ರಭಂಜನ್ ಗಾರ್ಮೆಂಟ್ಸ್‌ನ ನೌಕರರು ಪ್ರತಿಭಟನೆ ನಡೆಸಿದರು.

ಪ್ರಭಂಜನ್ ಗಾರ್ಮೆಂಟ್ಸ್‌ನ ನೌಕರರಿಗೆ ಕಳೆದ ಐದು ತಿಂಗಳಿಂದ ಮಾಲೀಕರಾದ ಕ್ರಾಂತಿಕಿರಣ ಚೌಡಪ್ಪ, ರಾಘವೇಂದ್ರ ಮೇಲಗಿರಿ ಐದು ತಿಂಗಳ ವೇತನ, ಇಎಸ್‌ಐ, ಪಿಎಫ್ ನೀಡದೆ ಗಾರ್ಮೆಂಟ್ಸ್‌ಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದಾರೆ ಎಂದು ನೌಕರರು ಆರೋಪಿಸಿದರು.

1 ಕೋಟಿ 5 ಲಕ್ಷ ಹಣ ಬಾಕಿ ಇದ್ದು, ಅದರಲ್ಲಿ 17 ಲಕ್ಷ ಹಣ ನೀಡಿದ್ದಾರೆ. ಆದ್ರೇ, ಉಳಿದ 85 ಲಕ್ಷ ಹಣ ಇಲ್ಲಿಯವರೆಗೂ ನೀಡಿಲ್ಲ ಎಂದು ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ನೌಕರರ ವೇತನ‌ ಹಾಗೂ ಉಳಿದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande