ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಮರಣೋತ್ತರವಾಗಿ ನಾಡೋಜ ಡಾ. ಎಂ. ಎಂ. ಕಲಬುರ್ಗಿ ಆಯ್ಕೆ
ಗದಗ, 29 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಪೂರ್ವಾಶ್ರಮದಲ್ಲಿ ಡಾ. ಎಂ. ಎಂ ಕಲಬುರ್ಗಿಯವರ ವಿದ್ಯಾರ್ಥಿಯಾಗಿದ್ದರು. ಡಾ. ಎಂ. ಎಂ ಕಲಬುರ್ಗಿಯವರ ಬಹುಮುಖ ವ್ಯಕ್ತಿತ್ವ, ಬಹುಮುಖ ಪ್ರತಿಭೆಯೊಂದಿಗೆ ಕನ್ನಡದ ಶ್ರೇಷ್ಟ ಪ್ರಾಧ್ಯಾಪಕರಾಗಿ, ಉನ್ನತ ಶ್ರೇಣಿಯ ಸಂಶೋಧಕರಾಗ
ಪೋಟೋ


ಗದಗ, 29 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಪೂರ್ವಾಶ್ರಮದಲ್ಲಿ ಡಾ. ಎಂ. ಎಂ ಕಲಬುರ್ಗಿಯವರ ವಿದ್ಯಾರ್ಥಿಯಾಗಿದ್ದರು. ಡಾ. ಎಂ. ಎಂ ಕಲಬುರ್ಗಿಯವರ ಬಹುಮುಖ ವ್ಯಕ್ತಿತ್ವ, ಬಹುಮುಖ ಪ್ರತಿಭೆಯೊಂದಿಗೆ ಕನ್ನಡದ ಶ್ರೇಷ್ಟ ಪ್ರಾಧ್ಯಾಪಕರಾಗಿ, ಉನ್ನತ ಶ್ರೇಣಿಯ ಸಂಶೋಧಕರಾಗಿ, ಕನ್ನಡ ಅಧ್ಯಯನ ಪೀಠದ ದಕ್ಷ ಅಧ್ಯಕ್ಷರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾದರಿಯ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕಂತಿಕ ಸಂಘ ಸಂಸ್ಥೆಗಳ ನಿರ್ದೇಶಕರಾಗಿದ್ದರು.

ಕನ್ನಡ ನಾಡು-ನುಡಿ-ಸಾಹಿತ್ಯ-ಸಂಸ್ಕೃತಿಕ ಉತ್ಕಟ ಚಿಂತಕರಾಗಿ, ಬಹುಶಿಸ್ತಿನ ಅಧ್ಯಯನದ ಬರಹಗಾರರಾಗಿದ್ದರು, ಈ ದೇಶದ ಪ್ರಸಿದ್ಧ ಸಂಶೋಧಕರಾಗಿದ್ದರು, ಅವರಷ್ಷಟ ಶಿಲಾ ಶಾಸನಗಳನ್ನು ಯಾರು ಅಧ್ಯಯನ ಮಾಡಿರುವದಿಲ್ಲಾ, ಅವರು ಬದುಕಿನುದ್ದಕ್ಕೂ ಮಾಡಿದ ಕಾರ್ಯ, ತೋರಿದ ದಾರಿ, ಬೀರಿದ ಪ್ರಭಾವ ನಾಡಿನ ಜನತೆಗೆ ಬೆರಗು ಹುಟ್ಟಿಸುವಂತಹವು, ಅಭಿಮಾನ ಉಕ್ಕಿಸುವಂತಹವು. ಅವರದು ಸತ್ಯನಿಷ್ಠತೆ, ನ್ಯಾಯ-ನಿಷ್ಠುರತೆಯ ತತ್ವಬದ್ಧ ಬದುಕಾಗಿತ್ತು. ‘ಕಾಲ ಕೆಳಗಿನ ಬೆಂಕಿಗಿಂತ-ಕಣ್ಣ ಮುಂದಿನ ಬೆಳಕು ದೊಡ್ಡದು’ ಎಂದು ನಂಬಿದ್ದರು. ‘ಗೆಲವು ದೀವಳಿಗೆ, ಸೋಲು ಶಿವರಾತ್ರಿ, ಮರಣವೇ ಮಹಾನವಮಿ’ ಎಂದು ಪರಿಗಣಿಸಿದ್ದರು. ಅವರು “ಕನ್ನಡ ಮತ್ತು ಬಸವಣ್ಣ” ತಮ್ಮ ಪ್ರಾಣ ಜೀವಾಳವೆಂದು ನಂಬಿದ್ದರು, ಸತ್ಯ-ತತ್ವ-ಸಮಾಜಕ್ಕಾಗಿ ಪ್ರಾಣವನ್ನು ಪಣವಾಗಿ ಇಟ್ಟವರು. ಅವರ ಈ ನಾಡು-ನುಡಿ, ವಚನಸಾಹಿತ್ಯ, ಬಸವತತ್ವ ಹಾಗೂ ಸಮಾಜಕ್ಕಾಗಿ ಸಲ್ಲಿಸಿದ ಅಪಾರ ಸೇವೆಯನ್ನು ಗುರುತಿಸಿ ಗದುಗಿನ ತೋಂಟದಾರ್ಯ ಮಠದಿಂದ 2025ನೇ ಸಾಲಿನ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಮರಣೋತ್ತರವಾಗಿ ನಾಡೋಜ ಲಿಂ. ಡಾ. ಎಂ. ಎಂ. ಕಲಬುರ್ಗಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ 5ಲಕ್ಷರೂಪಾಯಿ ಮೊತ್ತ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರ ಸನ್ನಿಧಿಯಲ್ಲಿ ಡಾ. ಎಂ. ಎಂ. ಕಲಬುರ್ಗಿ ಅವರ ಧರ್ಮಪತ್ನಿಯವರಾದ ಉಮಾದೇವಿ ಎಂ. ಕಲಬುರ್ಗಿ ಇವರು ಸ್ವೀಕರಿಸುವರು ಎಂದು ಪೂಜ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸಮಿತಿಯ ಕಾರ್ಯದರ್ಶಿಗಳಾದ ಎಸ್.ಎಸ್.ಪಟಣಶೆಟ್ಟರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande