ಭೀಮಾ ನದಿ ಪ್ರವಾಹ ಮತ್ತೆ ಹೆಚ್ಚಳ
ವಿಜಯಪುರ, 29 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಭೀಮಾ ನದಿ ಪ್ರವಾಹ ಮತ್ತೆ ಹೆಚ್ಚಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮಿರಗಿ ಗ್ರಾಮದಲ್ಲಿ ಜಮೀನಿನಲ್ಲಿ ವಾಸವಿದ್ದವರರು ದೋಣಿ ಮೂಲಕ ಸಂಚಾರ ಮಾಡುತ್ತಿದ್ದಾರೆ. ಸ್ಥಳೀಯ ಮೀನುಗಾರರು ದೋಣಿ ಬಳಸಿ‌‌‌ ಕೆಲಸಕ್ಕೆ ಹೋಗುತ್ತಿದ್ದಾರೆ. ಇನ್ನು ಜಿಲ್ಲ
ಪ್ರವಾಹ


ವಿಜಯಪುರ, 29 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಭೀಮಾ ನದಿ ಪ್ರವಾಹ ಮತ್ತೆ ಹೆಚ್ಚಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮಿರಗಿ ಗ್ರಾಮದಲ್ಲಿ ಜಮೀನಿನಲ್ಲಿ ವಾಸವಿದ್ದವರರು ದೋಣಿ ಮೂಲಕ ಸಂಚಾರ ಮಾಡುತ್ತಿದ್ದಾರೆ.

ಸ್ಥಳೀಯ ಮೀನುಗಾರರು ದೋಣಿ ಬಳಸಿ‌‌‌ ಕೆಲಸಕ್ಕೆ ಹೋಗುತ್ತಿದ್ದಾರೆ. ಇನ್ನು ಜಿಲ್ಲಾಡಳಿತದಿಂದ ದೋಣಿ ವ್ಯವಸ್ಥೆ ಇಲ್ಲ.‌ ಸ್ಥಳೀಯ ಮೀನುಗಾರರು ದೋಣಿಯಲ್ಲಿ ಸಂಚಿರಿಸುವರಿಗಿಲ್ಲ ಲೈಫ್ ಜಾಕೇಟ್‌ನ ವ್ಯವಸ್ಥೆ ಇಲ್ಲ. ಭೀಮಾ ನದಿಗೆ ಸೇರುವ ಮಿರಗಿ ಗ್ರಾಮದ ಹಳ್ಳ ಜಮೀನು ಸುತ್ತುವರಿದೆ. 15ಕ್ಕೂ ಹೆಚ್ಚು ಕುಟುಂಬಗಳು ಜಮೀನಿನಲ್ಲಿ ವಾಸಿಸುತ್ತಾರೆ.

ಈಗ ಸೇತುವೆ ಮೇಲೆ ಹರಿಯುತ್ತಿರುವ ನೀರಿನಿಂದ ಸಂಚಾರ‌ ಬಂದ್ ಆಗಿದೆ. ದೋಣಿ ಮೂಲಕ ಮಕ್ಕಳು, ವೃದ್ಧರು ಜಮೀನಿಂದ ಮಿರಗಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಜಿಲ್ಲಾಡಳಿತದಿಂದ ದೋಣಿ ವ್ಯವಸ್ಥೆ ಮಾಡುವ ಭರವಸೆಯ ನ್ನು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande