ಭಾಗ್ಯಲಕ್ಷ್ಮಿ ಯೋಜನೆ : ದಾಖಲೆಗಳ ಸಲ್ಲಿಕೆಗೆ ಅವಕಾಶ
ಹುಬ್ಬಳ್ಳಿ, 29 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಭಾಗ್ಯಲಕ‌್ಷ್ಮಿ ಯೋಜನೆಯ ಫಲಾನುಭವಿಗಳು ಭಾಗ್ಯಲಕ‌್ಷ್ಮಿ ಯೋಜನೆಯಡಿ ಪರಿಪಕ್ವ ಮೊತ್ತವನ್ನು ಪಡೆಯಲು ಅವಶ್ಯಕ ದಾಖಲೆಗಳ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. 2006 - 2007ನೇ ಸಾಲಿನಲ್ಲಿ ಜನಿಸಿದ 18 ವರ್ಷ ಪೂರ್ಣಗೊಂಡ ಭಾಗ್ಯಲಕ‌್ಷ್ಮಿ ಯೋಜನೆಯ ಫಲಾನು
ಭಾಗ್ಯಲಕ್ಷ್ಮಿ ಯೋಜನೆ : ದಾಖಲೆಗಳ ಸಲ್ಲಿಕೆಗೆ ಅವಕಾಶ


ಹುಬ್ಬಳ್ಳಿ, 29 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಭಾಗ್ಯಲಕ‌್ಷ್ಮಿ ಯೋಜನೆಯ ಫಲಾನುಭವಿಗಳು ಭಾಗ್ಯಲಕ‌್ಷ್ಮಿ ಯೋಜನೆಯಡಿ ಪರಿಪಕ್ವ ಮೊತ್ತವನ್ನು ಪಡೆಯಲು ಅವಶ್ಯಕ ದಾಖಲೆಗಳ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.

2006 - 2007ನೇ ಸಾಲಿನಲ್ಲಿ ಜನಿಸಿದ 18 ವರ್ಷ ಪೂರ್ಣಗೊಂಡ ಭಾಗ್ಯಲಕ‌್ಷ್ಮಿ ಯೋಜನೆಯ ಫಲಾನುಭವಿಗಳು ಪರಿಪಕ್ವ ಮೊತ್ತ ಪಡೆಯಲು ಅರ್ಜಿಗಳನ್ನು ಪಡೆದು ಮಂಜೂರಾತಿಗಾಗಿ ಸಲ್ಲಿಸುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ.

ಪರಿಪಕ್ವ ಮೊತ್ತಕ್ಕಾಗಿ ಅರ್ಜಿ ಸಲ್ಲಿಸದೆ ಇರುವ ಫಲಾನುಭವಿಗಳು ಅಕ್ಟೋಬರ್ 30ರ ಒಳಗಾಗಿ ಹುಬ್ಬಳ್ಳಿ ಧಾರವಾಡ ಶಹರ ಯೋಜನಾ ವ್ಯಾಪ್ತಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗೆ ಖುದ್ದಾಗಿ ಭೇಟಿ ನೀಡಿ ಮೂಲ ದಾಖಲಾತಿಗಳನ್ನು ಸಲ್ಲಿಸಬೇಕು. ಅವಧಿ ಮುಗಿದ ಮೇಲೆ ಬಂದ ಅರ್ಜಿಗಳನ್ನು ಆನಲೈನ್‌ನಲ್ಲಿ ಅಳವಡಿಸಲು ಸಾಧ್ಯವಾಗದ ಕಾರಣ ಪರಿಗಣಿಸಲಾಗುವುದಿಲ್ಲ ಎಂದು ಹುಬ್ಬಳ್ಳಿ ಧಾರವಾಡ ಶಹರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande