ಹುಬ್ಬಳ್ಳಿ, 29 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭಾರತ ಸಂವಿಧಾನ ಅನುಸುಚಿ 6ರ ಅನ್ವಯ ಲಡಾಕ್ ಗೆ ರಾಜ್ಯ ಸ್ಥಾನಮಾನ ನೀಡಬೇಕೆಂದು ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ರವರು
ಲೇಹ ಲಡಾಕ್ ಜನತೆಗೆ ತಮ್ಮ ಸ್ವಂತ ಭೂಮಿ, ಸಂಸ್ಕೃತಿ, ಪರಿಸರ ರಕ್ಷಣೆಗಾಗಿ ರಾಜ್ಯ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ.
ಹೋರಾಟ ಮಾಡುವಂತಹ ವ್ಯಕ್ತಿಗೆ ವಿದೇಶಿ ದೇಣಿಗೆ, ಆರ್ಥಿಕ ಅಕ್ರಮಗಳ ನೆಪದಿಂದ ಅವರ ಮೇಲೆ ಪ್ರಕರಣ ದಾಖಲಿಸಿರುವುದು ಕೇಂದ್ರ ಸರ್ಕಾರದ ನಡೆ ಖಂಡನೀಯ ಹಾಗೂ ಕೇಂದ್ರ ಸರ್ಕಾರವು ದ್ವೇಷ ರಾಜಕೀಯ ಮಾಡುತ್ತಿರುವುದ ಖೆದಕರ ಸಂಗತಿಯಾಗಿದ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ
ಕೇಂದ್ರ ಸರ್ಕಾರವು ಆದಷ್ಟು ಬೇಗನೆ ಲಡಾಕ್ ರಾಜ್ಯ ಸ್ಥಾನವನ್ನು ನೀಡಬೇಕೆಂದು ಆಗ್ರಹ ಪಡಿಸಿದ್ದು. ಮತ್ತು ಲಡಾಕನಲಿ ಶಾಂತಿ ನೆಲೆಸಬೇಕು ಎಂದು ಲೇಹ ಲಢಾಕ್ ಗೆ ಸರ್ಕಾರಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡಬೇಕು ಅಲ್ಲದೆ ಲೇಹ ಮತ್ತು ಕಾರ್ಗಿಲ್ ಗೆ ಪ್ರತ್ಯೇಕ ಲೋಕಸಭಾ ಸ್ಥಾನ ನೀಡಬೇಕು. ಇದರಿಂದ ಬುಡಕಟ್ಟು ಜನಾಂಗಕ್ಕೆ ಒಂದು ಉತ್ತಮ ಸ್ಥಾನಮಾನ ನೀಡಿದಂತೆ ಆಗುತ್ತದೆ. ಆದ್ದರಿಂದ ಗೌರವಾನ್ವಿತ ರಾಷ್ಟ್ರಪತಿಯವರು ಮಧ್ಯಪ್ರವೇಶಿಸಿ ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಧಾರವಾಡ ಜಿಲ್ಲಾ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷರಾದ ಬಸವರಾಜ ತೇರದಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅವಿನಾಶ ಸದಾನಂದ, ಸಂಘಟನಾ ಕಾರ್ಯದರ್ಶಿಗಳಾದ ಮಲ್ಲಪ್ಪ ತಡಸದ, ರಾಜಕೀಯ ಚಟುವಟಿಕೆಗಳ ಅಧ್ಯಕ್ಷರಾದ ರೇವಣಸಿದ್ದಪ್ಪ, ಹುಬ್ಬಳ್ಳಿ ಯುವ ಮುಖಂಡರಾದ ಹಸನ್ ಬಾಷಾ ಇನಾಮ್ದಾರ್, ಅಮಿತ ಚೌಹಾನ, ವಿಜಯ್ ಕುಮಾರ್ ಪಟವರ್ಧನ್ , ಮನೋಹರ್ ಕಮ್ಮಾರ , ನಾಗರಾಜ್ ಉಳ್ಳಿಕಾಶಿ , ಸರಸ್ವತಿ ಆಗ್ರಹಿಸಿ ಹುಬ್ಬಳ್ಳಿ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa