ಹುಬ್ಬಳ್ಳಿ, 28 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದು, ಗಣತಿದಾರರಿಗೆ ನಾನು ಯಾವುದೇ ಮಾಹಿತಿ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಡಾಟಾವನ್ನು ಮಾರಿಕೊಳ್ಳುವಷ್ಟು ದರಿದ್ರ ಪಕ್ಷ ಕಾಂಗ್ರೆಸ್ ಎಂದು ಕಿಡಿಕಾರಿದ್ದಾರೆ.
ಜಾತಿ ಜನಗಣತಿ ವಿವರ ಬಹಿರಂಗ ಪಡಿಸುತ್ತಿದ್ದೆ , ಜನಗಣತಿ ವಿವರ ಸುರಕ್ಷಿತವಾಗಿಲ್ಲ ಎಂದು ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ಈ ಮೊದಲು ಮಾಡಿದ ಸರ್ವೆ ಮಾಹಿತಿ ಎಲ್ಲರ ಬಳಿಯೂ ಇದೆ. ಹೀಗಾಗಿ ನಾನು ಯಾವುದೇ ರೀತಿಯ ಮಾಹಿತಿ ಕೊಡುವುದಿಲ್ಲ. ನಮ್ಮ ಮನೆಯವರು ಮಾಹಿತಿ ಹಂಚಿಕೊಳ್ಳುವುದಿಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa