ಮರಳಿ ಮನ ಸಾಗಿದೆ ಪುಸ್ತಕ ಬಿಡುಗಡೆ
ಕೊಪ್ಪಳ, 28 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸಮಾಜದಲ್ಲಿ ಲೇಖಕನಿಗೆ ತನ್ನದೇ ಆದ ಬಹುದೊಡ್ಡ ಜವಾಬ್ದಾರಿಯಿದೆ ಎಂದು ಹಿರಿಯ ಸಾಹಿತಿ ಈಶ್ವರ ಹತ್ತಿ ಅವರು ಹೇಳಿದ್ದಾರೆ. ನಗರದ ರಾಜ್ಯ ಸರಕಾರಿ ನೌಕರರ ಸಾಂಸ್ಕøತಿಕ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಶ್ರೀ ಅನ್ನದಾನೇಶ್ವರ ಶಿಕ್ಷಣಾ ಸೇವಾ ಟ್ರಸ್ಟ್(
ಮರಳಿ ಮನ ಸಾಗಿದೆ ಪುಸ್ತಕ ಬಿಡುಗಡೆ


ಕೊಪ್ಪಳ, 28 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸಮಾಜದಲ್ಲಿ ಲೇಖಕನಿಗೆ ತನ್ನದೇ ಆದ ಬಹುದೊಡ್ಡ ಜವಾಬ್ದಾರಿಯಿದೆ ಎಂದು ಹಿರಿಯ ಸಾಹಿತಿ ಈಶ್ವರ ಹತ್ತಿ ಅವರು ಹೇಳಿದ್ದಾರೆ.

ನಗರದ ರಾಜ್ಯ ಸರಕಾರಿ ನೌಕರರ ಸಾಂಸ್ಕøತಿಕ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಶ್ರೀ ಅನ್ನದಾನೇಶ್ವರ ಶಿಕ್ಷಣಾ ಸೇವಾ ಟ್ರಸ್ಟ್( ರಿ) ಬೆಣಕಲ್ ಪ್ರಕಾಶನ ಪ್ರಕಟಿಸಿರುವ ಲೇಖಕ ಪಿ.ಎಸ್.ಅಮರದೀಪ್ ಅವರ ಪ್ರಥಮ ಕೃತಿ ಮರಳಿ ಮನ ಸಾಗಿದೆ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬರವಣಿಗೆಗೆ ತಪ್ಪಸ್ಸು, ಓದು ಬೇಕು. ಅಲ್ಲದೆ, ಬರಹಗಾರ ಯಾವಾಗಲೂ ತನ್ನ ಕಾಲದ ಹಾಗು-ಹೋಗುಗಳಿಗೆ ಮುಖಾಮುಖಿಯಾಗುತ್ತಾನೆ.

ತನ್ನ ವೈಯಕ್ತಿಕ ನೆಲೆಯ ವಿಷಯಗಳನ್ನು ಸಾರ್ವತ್ರಿಕಗೊಳಿಸಿ, ಜನರೊಂದಿಗೆ ಹಂಚಿಕೊಳ್ಳುತ್ತಾನೆ. ಇದಕ್ಕೆ ತಾಳ್ಮೆ, ವ್ಯವದಾನ ಅವಶ್ಯ

ಅಂತೆಯೇ ಅಮರದೀಪ ಮತ್ತೊಬ್ಬ ಪ್ರಬಂಧಕರರಾಗಿ ಸಾಹಿತ್ಯ ಲೋಕಕ್ಕೆ ಹೊಸದಾಗಿ ಬಂದಿದ್ದಾರೆ. ಅವರು ಬರೆದಿರುವ ಕಥನಗಳನ್ನು ಓದುತ್ತಾ ಹೋದಂತೆ ನಾನು ಇಂತಹ ಪರಿಸ್ಥಿತಿಯಲ್ಲಿದ್ದೆ ಎಂಬ ಅನುಭವ ಓದುಗರಿಗೆ ತಮ್ಮದಾಗುತ್ತದೆ.

ಪ್ರಮುಖವಾಗಿ ಈ ಪುಸ್ತಕದಲ್ಲಿ ಕಲ್ಪನೆಯಿಲ್ಲ. ಕಲ್ಪನೆ ಹೆಚ್ಚಾದಾಗ ವಾಸ್ತವತೆ ಕಡಿಮೆಯಾಗುತ್ತದೆ. ಲೇಖಕರು ತಮ್ಮ ಬದುಕಿನ ಅನುಭವಗಳನ್ನು ಬರಹರದ ರೂಪದಲ್ಲಿ ಕಟ್ಟಿ ಕೊಟ್ಟಿದ್ದಾರೆ. ಮಧ್ಯಮ ವರ್ಗದ ವ್ಯಕ್ತಿಯ ತೋಳಲಾಟಗಳು ಈ ಪುಸ್ತಕದಲ್ಲಿ ಅಡಕವಾಗಿವೆ. ಬಡತನ, ಅವಮಾನ, ಸಂಘರ್ಷ, ಪ್ರೀತಿ, ದ್ವೇಷ ಒಳಗೊಂಡ ಎಲ್ಲ ಅಂಶಗಳು ಪುಸ್ತಕದಲ್ಲಿ ಸೇರ್ಪಡೆಯಾಗಿವೆ ಎಂದರು.

ಪುಸ್ತಕ ಬಿಡುಗಡೆಗೊಳಿಸಿದ ಕೇಂದ್ರ ಜಿಎಸ್‍ಟಿ ಇಲಾಖೆಯ ಆಯುಕ್ತ ಡಾ.ಕೊಟ್ರಸ್ವಾಮಿ.ಎಂ. ಮಾತನಾಡಿ, ಲೇಖಕ ತನ್ನ ಜೀವನದಲ್ಲಾದ ಘಟನೆಗಳನ್ನು ಪುಸಕ್ತದ ರೂಪದಲ್ಲಿ ದಾಖಲಿಸಿದ್ದಾರೆ. ಮರಳಿ ಮನ ಸಾಗಿದೆ ಎನ್ನುವ ಪುಸ್ತಕ ಓದಿದರೇ ಅಮರದೀಪ ಅವರ ಜೀವನ ಚಿತ್ರಣ ಕಣ್ಣಿಗೆ ಕಂಡು ಬರುತ್ತದೆ.

ಒಬ್ಬ ವ್ಯಕ್ತಿಯ ಮಧ್ಯಮ ವರ್ಗದ ತೋಳಲಾಟಗಳು ಪುಸ್ತಕದಲ್ಲಿ ಕಂಡು ಬರುತ್ತವೆ ಎಂದರು.

ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿ, ಯಾವುದೇ ಬರಹ ಓದುಗನನ್ನು ಒಳಗೊಂಡಾಗ ಯಶಸ್ವಿ ಲೇಖನವಾಗುತ್ತದೆ. ಅಂತಹ ಬರಹಗಳು ಮರಳಿ ಮನ ಸಾಗಿದೆ ಪುಸ್ತಕದಲ್ಲಿವೆ.

ಕನ್ನಡದ ಸಾಹಿತ್ಯ ಲೋಕಕ್ಕೆ ಅಮರದೀಪ ಅವರು ಪುಸ್ತಕ ಕೊಡುವ ಮೂಲಕ ಸಾಹಿತ್ಯ ಲೋಕಕ್ಕೆ ಕಾಲಿಟ್ಟಿದ್ದಾರೆ. ಒಬ್ಬ ಅಧಿಕಾರಿಯಾಗಿ ಕೆಲಸದ ಒತ್ತಡದ ಮಧ್ಯೆ ಬರಹದ ಅಭಿರೂಚಿ ಒಳಗೊಂಡಿರುವುದು ಸಂತಸ ತಂದಿದೆ ಎಂದರು.

ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಜುಮ್ಮನ್ನವರ ಮಾತನಾಡಿ, ಅಮರದೀಪ ಅವರ ಪುಸ್ತಕ ಓದಿದರೇ ಅವರೊಂದಿಗೆ ಮತ್ತಷ್ಟು ಹತ್ತಿರವಾಗುತ್ತೇವೆ. ಇದೇ ರೀತಿ ಅವರ ಅನೇಕ ಕೃತಿಗಳು ಹೊರ ಬರಲಿ ಎಂದರು.

ಪಂಜು ಅಂತರ್ಜಾಲ ಪತ್ರಿಕೆಯ ಸಂಪಾದಕ ಡಾ.ನಟರಾಜು ಎಸ್.ಎಂ ಕಾರ್ಯಕ್ರಮ ಉದ್ಘಾಟಿಸಿದರು. ಕಿನ್ನಾಳ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರಾಜಶೇಖರ ಪಾಟೀಲ್ ಅವರು ಪ್ರಾಸ್ತವಿಕವಾಗಿ,

ಹಿರಿಯ ಲೇಖಕ ಈರಪ್ಪ ಕಂಬಳಿ ಅವರು ಪುಸ್ತಕ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಡ್ಲಿ ಸುವರ್ಣ ಶಿವರಾಜ, ಕಡ್ಲಿ ಹೇಮಲತಾ ಗುರುಬಸವರಾಜ ಅವರನ್ನು ಸನ್ಮಾನಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande