ಲೈಂಗಿಕ ಶೋಷಣೆ ಆರೋಪ ; ಸ್ವಾಮಿ ಚೈತನ್ಯಾನಂದ ಬಂಧನ
ನವದೆಹಲಿ, 28 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ಎಸಗಿದ ಆರೋಪದ ಮೇಲೆ ಸ್ವಾಮಿ ಚೈತನ್ಯಾನಂದ ಸರಸ್ವತಿ ಅಲಿಯಾಸ್ ಪಾರ್ಥ್ ಸಾರಥಿ ಅವರನ್ನು ದೆಹಲಿ ಪೊಲೀಸರು ಆಗ್ರಾದಲ್ಲಿ ಬಂಧಿಸಿದ್ದಾರೆ. ನೈಋತ್ಯ ಜಿಲ್ಲಾ ಡಿಸಿಪಿ ಅಮಿತ್ ಗೋಯಲ್ ನೀ
ಲೈಂಗಿಕ ಶೋಷಣೆ ಆರೋಪ ; ಸ್ವಾಮಿ ಚೈತನ್ಯಾನಂದ ಬಂಧನ


ನವದೆಹಲಿ, 28 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ಎಸಗಿದ ಆರೋಪದ ಮೇಲೆ ಸ್ವಾಮಿ ಚೈತನ್ಯಾನಂದ ಸರಸ್ವತಿ ಅಲಿಯಾಸ್ ಪಾರ್ಥ್ ಸಾರಥಿ ಅವರನ್ನು ದೆಹಲಿ ಪೊಲೀಸರು ಆಗ್ರಾದಲ್ಲಿ ಬಂಧಿಸಿದ್ದಾರೆ.

ನೈಋತ್ಯ ಜಿಲ್ಲಾ ಡಿಸಿಪಿ ಅಮಿತ್ ಗೋಯಲ್ ನೀಡಿರುವ ಮಾಹಿತಿಯಂತೆ, ನಿನ್ನೆ ತಡರಾತ್ರಿ ಆಗ್ರಾದ ಹೋಟೆಲ್‌ನಿಂದ ಸ್ವಾಮಿಯನ್ನು ಬಂಧಿಸಲಾಗಿದ್ದು, ಅವರನ್ನು ದೆಹಲಿಗೆ ಕರೆತರಲಾಗುತ್ತಿದೆ. ಇಂದೇ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ವಸಂತ್ ಕುಂಜ್‌ನ ಆಶ್ರಮ ಶಾಖೆಯ ನಿರ್ದೇಶಕರಾಗಿದ್ದ ಸ್ವಾಮಿಯ ವಿರುದ್ಧ 15 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ದೂರು ನೀಡಿದ್ದರು. ಅವರ ಮೇಲೆ ಅಶ್ಲೀಲ ಭಾಷೆ ಬಳಕೆ, ವಾಟ್ಸಾಪ್/ಎಸ್‌ಎಂಎಸ್ ಮೂಲಕ ಅಶ್ಲೀಲ ಸಂದೇಶ ಕಳುಹಿಸುವುದು ಮತ್ತು ಅನಗತ್ಯ ದೈಹಿಕ ಸಂಪರ್ಕದ ಆರೋಪಗಳಿವೆ. 32 ವಿದ್ಯಾರ್ಥಿನಿಯರಿಂದ ಹೇಳಿಕೆಗಳನ್ನು ದಾಖಲಿಸಿದ್ದು, ಅವರಲ್ಲಿ 17 ಮಂದಿ ನೇರವಾಗಿ ಶೋಷಣೆಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ.

ಪರಾರಿಯಾಗಿದ್ದ ಸ್ವಾಮಿಯ ಟ್ರಸ್ಟ್‌ಗೆ ಸೇರಿದ 18 ಬ್ಯಾಂಕ್ ಖಾತೆಗಳು ಹಾಗೂ 28 ಸ್ಥಿರ ಠೇವಣಿ ಖಾತೆಗಳನ್ನು ಪೊಲೀಸರು ಸ್ಥಗಿತಗೊಳಿಸಿದ್ದು, ಸುಮಾರು ₹8 ಕೋಟಿ ಹಣವನ್ನು ಫ್ರೀಜ್ ಮಾಡಿದ್ದಾರೆ. ಜೊತೆಗೆ ಅವರ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನೂ ನಿರ್ಬಂಧಿಸಲಾಗಿದೆ.

ಮಹಿಳಾ ಅಧ್ಯಾಪಕಿಯರಿಗೂ ಆರೋಪಿಯ ಒತ್ತಡ ಮತ್ತು ಬೇಡಿಕೆಗಳನ್ನು ಪೂರೈಸುವಂತೆ ಪ್ರಚೋದನೆ ನೀಡಲಾಗುತ್ತಿತ್ತು ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande