ಆರ್ ಎಸ್ಎಸ್ ಶತಮಾನೋತ್ಸವ ಕುರಿತು ಮನ್ ಕಿ ಬಾತನಲ್ಲಿ ಪ್ರಸ್ತಾಪಿಸಿದ ಪ್ರಧಾನಿ
ನವದೆಹಲಿ, 28 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಮಾಸಿಕ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ದೇಶದ ಜನತೆ ಉದ್ದೇಶಿಸಿ ಮಾತನಾಡಿದರು. ಈ ಬಾರಿ ಅವರ ಭಾಷಣದ ಕೇಂದ್ರ ಬಿಂದು, ಮುಂದಿನ ದಿನಗಳಲ್ಲಿ ಬರಲಿರುವ ವಿಜಯದಶಮಿ ಹಬ್ಬ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ
Pm


ನವದೆಹಲಿ, 28 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಮಾಸಿಕ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ದೇಶದ ಜನತೆ ಉದ್ದೇಶಿಸಿ ಮಾತನಾಡಿದರು. ಈ ಬಾರಿ ಅವರ ಭಾಷಣದ ಕೇಂದ್ರ ಬಿಂದು, ಮುಂದಿನ ದಿನಗಳಲ್ಲಿ ಬರಲಿರುವ ವಿಜಯದಶಮಿ ಹಬ್ಬ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪನೆಯ ಶತಮಾನೋತ್ಸವದ ಆಚರಣೆಯಾಗಿತ್ತು.

ಇನ್ನು ಕೆಲವೇ ದಿನಗಳಲ್ಲಿ ದೇಶಾದ್ಯಂತ ವಿಜಯದಶಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಆದರೆ ಈ ವರ್ಷದ ವಿಜಯದಶಮಿ ವಿಶೇಷವಾಗಿದ್ದು, ಇದೇ ದಿನ ಆರ್‌ಎಸ್‌ಎಸ್ ತನ್ನ ಸ್ಥಾಪನೆಯ ನೂರು ವರ್ಷಗಳನ್ನು ಪೂರೈಸುತ್ತಿದೆ. ಒಂದು ಶತಮಾನದ ಈ ಪ್ರಯಾಣ ಅಭೂತಪೂರ್ವ, ಅದ್ಭುತ ಹಾಗೂ ಅತ್ಯಂತ ಸ್ಫೂರ್ತಿದಾಯಕವಾಗಿದೆ ಎಂದರು.

100 ವರ್ಷಗಳ ಹಿಂದೆ ಆರ್‌ಎಸ್‌ಎಸ್ ಸ್ಥಾಪನೆಯಾದಾಗ ದೇಶವು ಶತಮಾನಗಳ ಕಾಲದ ಗುಲಾಮಗಿರಿಯ ಸರಪಣಿಯಲ್ಲಿ ಸಿಲುಕಿಕೊಂಡಿತ್ತು. ಆ ದೀರ್ಘಕಾಲದ ಗುಲಾಮಗಿರಿಯು ನಮ್ಮ ಆತ್ಮವಿಶ್ವಾಸ ಹಾಗೂ ಸ್ವಾಭಿಮಾನಕ್ಕೆ ಆಳವಾದ ಗಾಯ ಮಾಡಿತ್ತು. ವಿಶ್ವದ ಅತ್ಯಂತ ಪ್ರಾಚೀನ ನಾಗರಿಕತೆಯಾಗಿದ್ದ ಭಾರತವು ತನ್ನದೇ ಗುರುತನ್ನು ಕಳೆದುಕೊಂಡ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇತ್ತು. ಜನರಲ್ಲಿ ಕೀಳರಿಮೆಯ ಭಾವನೆ ಆಳವಾಗಿ ನೆಲಸಿತ್ತು,ಎಂದು ಅವರು ಹೇಳಿದರು.

ಇಂತಹ ಸಮಯದಲ್ಲಿ ಡಾ. ಕೆ.ಬಿ. ಹೆಗ್ಡೇವಾರ್ ಅವರು ಕೇವಲ ರಾಜಕೀಯ ಸ್ವಾತಂತ್ರ್ಯವಷ್ಟೇ ಅಲ್ಲದೆ, ಸೈದ್ಧಾಂತಿಕ ಗುಲಾಮಗಿರಿಯಿಂದಲೂ ದೇಶ ಮುಕ್ತವಾಗಬೇಕು ಎಂಬ ದೃಷ್ಟಿಯಿಂದ ಆರ್‌ಎಸ್‌ಎಸ್ ಅನ್ನು 1925ರ ವಿಜಯದಶಮಿ ದಿನ ಸ್ಥಾಪಿಸಿದರು ಎಂದು ಮೋದಿ ಹೇಳಿದರು.

ಡಾ. ಹೆಗ್ಡೇವಾರ್ ಅವರ ನಿಧನಾನಂತರ ಸಂಘವನ್ನು ಪರಮಪೂಜ್ಯ ಎಂ.ಎಸ್. ಗೋಲ್ವಲ್‌ಕರ್ (ಗುರೂಜಿ) ಮುನ್ನಡೆಸಿದ ಬಗ್ಗೆ ಸ್ಮರಿಸಿದ ಪ್ರಧಾನಿ, ಗುರೂಜಿ ಸದಾ ರಾಷ್ಟ್ರಾಯ ಸ್ವಾಹಾ, ರಾಷ್ಟ್ರಾಯ ಇದಂ ನ ಮಮ ಎಂದು ಹೇಳುತ್ತಿದ್ದರು. ಅಂದರೆ, ಇದು ನನ್ನದಲ್ಲ, ರಾಷ್ಟ್ರದ್ದೇ ಎಂಬ ಅರ್ಥ. ಈ ವಾಕ್ಯವು ಲಕ್ಷಾಂತರ ಸ್ವಯಂಸೇವಕರಿಗೆ ತ್ಯಾಗ ಮತ್ತು ಸೇವೆಯ ಹಾದಿ ತೋರಿಸಿತು ಎಂದರು.

ಶಿಸ್ತು, ಸೇವಾಭಾವನೆ ಮತ್ತು ತ್ಯಾಗವೇ ಸಂಘದ ನಿಜವಾದ ಶಕ್ತಿ. ಕಳೆದ ನೂರು ವರ್ಷಗಳಿಂದ ಆರ್‌ಎಸ್‌ಎಸ್ ನಿರಂತರವಾಗಿ ರಾಷ್ಟ್ರಸೇವೆಯಲ್ಲಿ ತೊಡಗಿಕೊಂಡಿದೆ. ದೇಶದ ಯಾವುದೇ ಭಾಗದಲ್ಲಿ ನೈಸರ್ಗಿಕ ವಿಕೋಪ ಎದುರಾದಾಗಲೂ, ಮೊದಲು ನೆರವಿಗೆ ಧಾವಿಸುವವರು ಆರ್‌ಎಸ್‌ಎಸ್ ಸ್ವಯಂಸೇವಕರು ಎಂಬುದನ್ನು ನಾವು ಕಂಡಿದ್ದೇವೆ ಎಂದರು.

ಮೋದಿಯವರು ತಮ್ಮ ಸಂದೇಶದ ಕೊನೆಯಲ್ಲಿ, ಲಕ್ಷಾಂತರ ಸ್ವಯಂಸೇವಕರ ಪ್ರತಿಯೊಂದು ಕೆಲಸ, ಪ್ರತಿಯೊಂದು ಪ್ರಯತ್ನವೂ ದೇಶ ಮೊದಲು ಎಂಬ ಭಾವನೆಯನ್ನು ಸದಾ ಜೀವಂತವಾಗಿರಿಸಿದೆ. ರಾಷ್ಟ್ರಸೇವೆಯ ಮಹಾಯಜ್ಞದಲ್ಲಿ ತೊಡಗಿರುವ ಪ್ರತಿಯೊಬ್ಬ ಸ್ವಯಂಸೇವಕರಿಗೂ ನಾನು ಹೃತ್ಪೂರ್ವಕ ಶುಭಹಾರೈಕೆಗಳನ್ನು ತಿಳಿಸುತ್ತೇನೆ,” ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande