ಸಿಂಧನೂರಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಲೋಕಾರ್ಪಣೆ
ರಾಯಚೂರು, 28 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಅತಿ ಹೆಚ್ಚು ಟ್ರಾಕ್ಟರ್ ಹಾಗೂ ಬಿಡಿಭಾಗಗಳ ಬಳಕೆಯ ಪ್ರದೇಶ ಖ್ಯಾತಿಯ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಅತಿ ದೊಡ್ಡ ತಾಲೂಕೆಂದೇ ಹೆಸರಾದ ಸಿಂಧನೂರು ತಾಲೂಕಿನ ಜನರ ಬಹುದಿನಗಳ ಕನಸು ನನಸಾಗಿದ್ದು, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಬಾಗಿಲು ತೆಗೆಯುತ
ಸಿಂಧನೂರಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಲೋಕಾರ್ಪಣೆ


ರಾಯಚೂರು, 28 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಅತಿ ಹೆಚ್ಚು ಟ್ರಾಕ್ಟರ್ ಹಾಗೂ ಬಿಡಿಭಾಗಗಳ ಬಳಕೆಯ ಪ್ರದೇಶ ಖ್ಯಾತಿಯ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಅತಿ ದೊಡ್ಡ ತಾಲೂಕೆಂದೇ ಹೆಸರಾದ ಸಿಂಧನೂರು ತಾಲೂಕಿನ ಜನರ ಬಹುದಿನಗಳ ಕನಸು ನನಸಾಗಿದ್ದು, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಬಾಗಿಲು ತೆಗೆಯುತ್ತಿದ್ದಂತೆ ಸೇರಿದ್ದ ತಾಲೂಕಿನ ಜನರ ಮೊಗದಲ್ಲಿ ಸಂತಷ ಕಂಡು ಬಂದಿತು.

ಉದ್ಘಾಟನೆ ಹಿನ್ನೆಲೆಯಲ್ಲಿ ಆಸ್ಪತ್ರೆಯ ಕಟ್ಟಡವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು.

ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್ ಅವರು, ನಗರದ ಸತ್ಯ ಗಾರ್ಡನದಲ್ಲಿ, ಕಟ್ಟಡದ ಲೋಕಾರ್ಪಣೆ ಸಮಾರಂಭಕ್ಕೆ ದೀಪ ಬೆಳಗುತ್ತಿದ್ದಂತೆ ನೆರೆದಿದ್ದ ಸಿಂಧನೂರ, ಮಸ್ಕಿ, ಲಿಂಗಸೂಗೂರ ತಾಲೂಕಿನ ಮತ್ತು ತುರುವಿಹಾಳ, ಸೇರಿದಂತೆ ನಾನಾ ಹೋಬಳಿಯ ಜನತೆ ಸಂತಷ ವ್ಯಕ್ತಪಡಿಸಿದರು.

ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಮೊದಲು ಸರ್ಕಾರವು 2022ರಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಕಟ್ಟಡಕ್ಕೆ ಆದೇಶ ಮಾಡಿತ್ತು. ಬಳಿಕ ತಾವು ಹೆಚ್ಚುವರಿ 3 ಕೋಟಿ ರೂಪಾಯಿ ಅನುದಾನದ ಮಂಜೂರಾತಿಗೆ ಪ್ರಯತ್ನಿಸಿ 15 ಕೋಟಿ ರೂ. ವೆಚ್ಚದಲ್ಲಿ ಸಿಂಧನೂರ ನಗರದಲ್ಲಿ ನೂತನ ಕಟ್ಟಡವು ಲೋಕಾರ್ಪಣೆ ಆಗಿರುವುದು ತಮಗೆ ಸಂತಷವನ್ನುಂಟು ಮಾಡಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಶಾಸಕರಾದ ಆರ್ ಬಸನಗೌಡ ತುರುವಿಹಾಳ, ವಿಧಾನ ಪರಿಷತ್ ಶಾಸಕರಾದ ಎ ವಸಂತಕುಮಾರ, ಶರಣಗೌಡ ಪಾಟೀಲ ಬಯ್ಯಾಪುರ, ಬಸನಗೌಡ ಬಾದರ್ಲಿ, ಮಂಜುಳಾ ಪ್ರಭುರಾಜ್, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುμÁ್ಠನ ಸಮಿತಿಯ ಅಧ್ಯಕ್ಷರಾದ ಪಾಮಯ್ಯ ಮುರಾರಿ, ಸಿಂಧನೂರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ವೆಂಕನಗೌಡ ಬಾದರ್ಲಿ, ಬಸವರಾಜ ಪಾಟೀಲ ಇಟಗಿ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಸಿಇಓ ಈಶ್ವರ್ ಕಾಂದೂ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಪುಟ್ಟಮಾದಯ್ಯ ಎಂ ಸೇರಿದಂತೆ ಇತರರು ಇದ್ದರು. ತಹಸೀಲ್ದಾರ ದೇಸಾಯಿ ಅವರು ಸ್ವಾಗತಿಸಿದರು.ಪ್ರಾಚಾರ್ಯರಾದ ಡಾ.ಶಿವರಾಜ ನಿರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande