ರಾಯಚೂರು, 28 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ ನೀಡಿದ ನಿರ್ದೇಶನಗಳಂತೆ ನಿಯೋಜಿಸಿದ ಸಮೀಕ್ಷಾ ಕೆಲಸಗಳನ್ನು ನಿರ್ವಹಿಸುವಲ್ಲಿ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷತನ ವಹಿಸಿರುವುದರಿಂದ ಲಿಂಗಸೂಗೂರ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಜಿ. ರಾಠೋಡ್ ಅವರನ್ನು ಕೆಸಿಎಸ್‍ಆರ್ ಅಡಿಯಲ್ಲಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿಳು ಆದೇಶಿಸಿದ್ದಾರೆ.
ಈ ನೌಕರರು ಅಮಾನತ್ತಿನ ಅವಧಿಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗೆ ನಿಯಮ-98 ರನ್ವಯ ನಿಗದಿಪಡಿಸಿರುವ ಜೀವನಾಧಾರ ಭತ್ಯೆ ಪಡೆಯಲು ಅರ್ಹ ಸಿಬ್ಬಂದಿಯು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಕರ್ನಾಟಕ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬಂಧ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದವತಿಯಿಂದ ರಾಜ್ಯಾದ್ಯಂತ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ದಿನಾಂಕ:22.09.2025 ರಿಂದ 07.10.2025 ರವರೆಗೆ ಸಮೀಕ್ಷೆಯನ್ನು ಕೈಗೊಳ್ಳುವಂತೆ ಸರ್ಕಾರವು ಸೂಚಿಸಿದ್ದು, ತಾಲೂಕಿನ ತಾಲೂಕು ಸಮಿತಿಯಲ್ಲಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನಿಯೋಜಿಸಿ ಕಾರ್ಯನಿರ್ವಹಿಸುವಂತೆ ಮಾನ್ಯ ಸರ್ಕಾರದಿಂದ ಆದೇಶವಾಗಿರುತ್ತದೆ.
ಅದರಂತೆ ಈ ಕಾರ್ಯಕ್ಕೆ ರಮೇಶ ಜಿ ರಾಠೋಡ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಲಿಂಗಸೂಗೂರು ಇವರು ಸಹಕಾರ ನೀಡಿರುವುದಿಲ್ಲ. ಇದರಿಂದಾಗಿ ತಾಲೂಕಿನ ಪ್ರಗತಿ ಕುಂಠಿತವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ 26-09-2025 ರಂದು ನಡೆದ ಸಭೆಯಲ್ಲಿ ಸದಸ್ಯರು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಾಗೂ ತಹಶೀಲ್ದಾರರು, ಲಿಂಗಸುಗೂರು ಅವರು ಪ್ರಸ್ತಾಪಿಸಿ ಲಿಖಿತ ಹೇಳಿಕೆಯನ್ನು ಸಲ್ಲಿಸಿದ್ದಾರೆ.
ಈ ಬಗ್ಗೆ ಪರಿಶೀಲಿಸಲಾಗಿ, ರಮೇಶ ಜಿ. ರಾಠೋಡ್ ಅವರು ಒಬ್ಬ ಜವಾಬ್ದಾರಿಯುತ ತಾಲೂಕು ಮಟ್ಟದ ಅಧಿಕಾರಿಯಾಗಿದ್ದು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದ ತಾಲೂಕು ಮಟ್ಟದ ಸದಸ್ಯರಾಗಿರುವ ತಹಶೀಲ್ದಾರ್ ಲಿಂಗಸುಗೂರು ಇವರಿಗೆ ಸಹಕಾರ ನೀಡದೇ, ತಾಲೂಕಿನ ಪ್ರಗತಿ ಕುಂಠಿತವಾಗಲು ಕಾರಣರಾಗಿರುವುದು ಕಂಡುಬರುತ್ತಿರುತ್ತಿದೆ. ಸರ್ಕಾರದ ಮಹತ್ತರವಾದ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯವು ರಾಜ್ಯ ಮಟ್ಟದ ಅತ್ಯಂತ ಮಹತ್ತ್ವಕಾಂಕ್ಷೆ ಯೋಜನೆಯನ್ನು ಅನುμÁ್ಠನಗೊಳಿಸಿ ಪುಗತಿಯನ್ನು ತರುವುದು ಆದ್ಯ ಕರ್ತವ್ಯವಾಗಿರುತ್ತದೆ. ಆದರೆ ಸದರಿಯವರ ಸರ್ಕಾರಿ ಕೆಲಸದಲ್ಲಿ ನಿರ್ಲಕ್ಷತನ ಮತ್ತು ಬೇಜವಾಬ್ದಾರಿತನ ಮತ್ತು ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಪ್ರಯುಕ್ತ ಅಮಾನತು ಮಾಡಿ ಆದೇಶಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್